ಸರಕಾರಿ ಮಾನ್ಯತೆ ಪಡೆದ ಯುನಿಕೋಡ್, ಏನಿದು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-12 (ನವೆಂಬರ್ 12, 2012)

ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರಕಾರವು Unicode ಶಿಷ್ಟತೆಗೆ ಮಾನ್ಯತೆ ನೀಡಿತು ಎಂಬ ವರದಿಗಳನ್ನು ನೀವು ಇತ್ತೀಚೆಗಷ್ಟೇ ಓದಿದ್ದೀರಿ. ಏನಿದು ಅರ್ಥವಾಗಲಿಲ್ಲ ಅಂದುಕೊಂಡಿರಾ?

ಕಂಪ್ಯೂಟರ್‌ನಲ್ಲಿ ಕನ್ನಡ ಓದುವವರಿಗೆ, ಬರೆಯುವವರಿಗೆ ಒಂದು ಸಮಸ್ಯೆಯ ಕುರಿತು ಗೊತ್ತು. ಅದೆಂದರೆ, ನೀವು ಏನೋ ಕನ್ನಡದಲ್ಲಿ ಟೈಪ್ ಮಾಡಿ ಇನ್ನೊಬ್ಬರಿಗೆ ಕಳುಹಿಸುತ್ತೀರಿ. ಅವರಿಗೆ ಅದನ್ನು ಓದಲಾಗುವುದಿಲ್ಲ ಅಥವಾ ತಿದ್ದಲು ಕೂಡ ಆಗುವುದಿಲ್ಲ. ಅಥವಾ ಪತ್ರಿಕೆಗಳಿಗೆ ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಲೇಖನಗಳನ್ನು ಯಾವ ರೀತಿ ಕಳುಹಿಸಬೇಕು ಎಂಬ ಗೊಂದಲವಿರುವವರೂ ಇದ್ದಾರೆ. ಇದೊಂದು ಸಮಸ್ಯೆಯೇ. ಇದಕ್ಕೆ ಪ್ರಮುಖ ಕಾರಣವೆಂದರೆ, ಒಬ್ಬರು ಟೈಪ್ ಮಾಡಿದ ಫಾಂಟ್ (ಅಕ್ಷರವಿನ್ಯಾಸ) ಬೇರೆಯವರ ಕಂಪ್ಯೂಟರಿನಲ್ಲಿ ಇಲ್ಲದಿರುವುದು ಹಾಗೂ ಅವರಲ್ಲಿ ಕನ್ನಡ ಟೈಪ್ ಮಾಡಲು ಬೇಕಾದ ತಂತ್ರಾಂಶ ಸಲಕರಣೆಗಳು ಇಲ್ಲದಿರುವುದು.

ಉದಾಹರಣೆಗೆ, ನುಡಿ, ಬರಹ, ಶ್ರೀಲಿಪಿ ಮುಂತಾದ ಕನ್ನಡ ಫಾಂಟ್‌ಗಳು ಮತ್ತು ತಂತ್ರಾಂಶಗಳಿವೆ. ಹೀಗಿರುವಾಗ ಎಲ್ಲ ಕಂಪ್ಯೂಟರುಗಳಲ್ಲಿ, ಎಲ್ಲರ ಅನುಕೂಲಕ್ಕಾಗಿ, ಯಾವುದೇ ಹೊಸ ತಂತ್ರಾಂಶ/ಫಾಂಟ್ ಅಳವಡಿಸದೆಯೇ ಓದುವಂತಾಗಲು ಮತ್ತು ಬರೆಯುವಂತಾಗಲು ಮೂಡಿಬಂದಿರುವ ತಂತ್ರಜ್ಞಾನವೇ ಯುನಿಕೋಡ್ (ಅಂದರೆ ಯುನಿವರ್ಸಲ್ ಕೋಡ್-ಸಾರ್ವತ್ರಿಕ ಕೋಡ್).

ಯುನಿಕೋಡ್ ಸೌಲಭ್ಯವಿದ್ದರೆ, ನಿಮ್ಮ ಕಂಪ್ಯೂಟರುಗಳಲ್ಲಿ ವಿಂಡೋಸ್, ಲಿನಕ್ಸ್, ಇಲ್ಲವೇ ಮ್ಯಾಕ್ ಮುಂತಾಗಿ, ಕಾರ್ಯಾಚರಣೆ ವ್ಯವಸ್ಥೆ ಯಾವುದೇ ಇರಲಿ… ಎಲ್ಲದರಲ್ಲಿಯೂ ಎಲ್ಲ ಭಾಷೆಯನ್ನೂ ಓದಬಹುದಾಗಿದೆ ಮತ್ತು ಬರೆಯಬಹುದಾಗಿದೆ. ಇದಕ್ಕಾಗಿಯೇ ಇದನ್ನು ಸಾರ್ವತ್ರಿಕವಾದ ಕೋಡ್ ಅನ್ನುವುದು. ಈಗಿನ ಹೊಸ ಕಂಪ್ಯೂಟರುಗಳಲ್ಲಿ ಇದು ಅಳವಡಿಕೆಯಾಗಿಯೇ ಬರುತ್ತದೆಯಾದುದರಿಂದ, ಹೊಸ ಸಾಫ್ಟ್‌ವೇರ್ ಅನುಸ್ಥಾಪಿಸಬೇಕಾದ ಶ್ರಮ ಇರುವುದಿಲ್ಲ. (ಕೆಲವರು ಬಳಸುತ್ತಿರುವ ಹಳೆಯ ಕಂಪ್ಯೂಟರುಗಳಲ್ಲಿ ವಿಶೇಷತಃ ವಿಂಡೋಸ್ 2000 ಮತ್ತು ಹಿಂದಿನವುಗಳಲ್ಲಿ ಕನ್ನಡ ಯುನಿಕೋಡ್ ಬೆಂಬಲ ಇರುವುದಿಲ್ಲ. ಹೀಗಾಗಿ ಅಕ್ಷರಗಳು ಸರಿಯಾಗಿ ಕಾಣಿಸುವುದಿಲ್ಲ. ವಿಂಡೋಸ್ ಎಕ್ಸ್‌ಪಿ, ವಿಂಡೋಸ್ ವಿಸ್ತಾ, ವಿಂಡೋಸ್ 7 ಹಾಗೂ ವಿಂಡೋಸ್ 8ಗಳಲ್ಲಿ ಇವು ಡೀಫಾಲ್ಟ್ ಆಗಿಯೇ ಬಂದಿರುತ್ತವೆ.)

ಯುನಿಕೋಡ್ ಅನುಕೂಲವೆಂದರೆ, ನೀವು ಬೇರೆ ಬೇರೆ ಭಾಷೆಯಲ್ಲಿ ಟೈಪ್ ಮಾಡಲು ಬೇರೆ ಬೇರೆ ಫಾಂಟ್‌ಗಳನ್ನು ನಿಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಬೇಕಾಗಿಲ್ಲ. ಉದಾಹರಣೆಗೆ, ನೀವು ಒಂದೇ ಡಾಕ್ಯುಮೆಂಟ್‌ನಲ್ಲಿ (ವರ್ಡ್, ವರ್ಡ್‌ಪ್ಯಾಡ್, ನೋಟ್ ಪ್ಯಾಡ್, ಎಕ್ಸೆಲ್ ಮುಂತಾದ ಬರವಣಿಗೆ ತಂತ್ರಾಂಶಗಳ ಮೂಲಕ) ಹಲವು ಭಾಷೆಗಳಲ್ಲಿ ಬರೆಯಬಹುದು. ಅದು ಕೂಡ ಫಾಂಟ್ ಬದಲಾಯಿಸದೆಯೇ! ಸರಳವಾಗಿ ಹೇಳುವುದಾದರೆ, ಒಂದೇ ಸಾಲಿನಲ್ಲಿ ಫಾಂಟ್ ಬದಲಿಸದೆ, ಭಾಷಾ ಇನ್‌ಪುಟ್ (ಬರವಣಿಗೆ) ವಿಧಾನವನ್ನು ಮಾತ್ರ ಬದಲಿಸಿ ಎಲ್ಲ ಭಾಷೆಗಳಲ್ಲಿಯೂ ಬರೆಯಬಹುದು (ಚಿತ್ರ ನೋಡಿ).

ಯುನಿಕೋಡ್‌ನಲ್ಲಿರುವ ಈ ಒಂದು ಸಾಮರ್ಥ್ಯ ಮತ್ತು ಅನಿವಾರ್ಯತೆಯೂ ಇರುವ ಕಾರಣ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯು ಸರಕಾರದ ಇ-ಆಡಳಿತದಲ್ಲಿ (ಅಂದರೆ ಸರಕಾರದ ಹಲವು ಇಲಾಖೆಗಳು ಗಣಕೀಕರಣಗೊಂಡಿವೆ. ಹೆಚ್ಚಿನವು ‘ನುಡಿ’ ತಂತ್ರಾಂಶವನ್ನು ಬಳಸುತ್ತಿವೆ. ಇನ್ನು ಮುಂದೆ ಅವುಗಳನ್ನು ಎಲ್ಲರೂ ಓದುವಂತಾಗಬೇಕು ಎಂಬ ಧ್ಯೇಯದೊಂದಿಗೆ) ಯುನಿಕೋಡ್‌ಗೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿತ್ತು. ಅದಕ್ಕೆ ಸರಕಾರದ ಅನುಮೋದನೆ ದೊರೆತಿದೆ. ಇದು ಇ-ಆಡಳಿತದಲ್ಲೊಂದು ಪ್ರಮುಖ ಹೆಜ್ಜೆ. ಇನ್ನು ಮುಂದೆ ಸರಕಾರದ ಯಾವುದೇ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಸಾರ್ವತ್ರಿಕವಾಗಿ ಲಭ್ಯವಿರುವ ಯುನಿಕೋಡ್ ತಂತ್ರಾಂಶವನ್ನೇ ಬಳಸಬಹುದು.

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s