ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?

ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ,

ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ?

ಉದಾಹರಣೆಗೆ, ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳಿರುವ (A to Z), ಪ್ರಚಲಿತದಲ್ಲಿರುವ ವಾಕ್ಯವೊಂದು ಹೀಗಿದೆ.

“The quick brown fox jumps over the lazy dog”

ಇದೇ ಮಾದರಿಯಲ್ಲಿ ಕನ್ನಡದಲ್ಲಿಯೂ ಇದೆಯೇ? ಅಥವಾ ಒಂದು ವಾಕ್ಯದಲ್ಲಿ ಎಲ್ಲ ಅಕ್ಷರಗಳು ಬರುವಂತೆ ರಚಿಸಬಹುದೇ? ಎಂಬ ಬಗ್ಗೆ ತಿಳಿದವರು ಸಲಹೆ ನೀಡುವಿರೇ?

Advertisements

11 thoughts on “ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?

 1. ಅವಿನಾಶಿಗಳೇ ಇಗೋ ಕನ್ನಡ,

  “ಅಆಇಈ ಹೇಳಿಕೊಡುವ ಉಮಾ ಟೀಚರ್ ಊರಿನ ಪಾಲಿಗೆ ಕ್ಷಕಿರಣ, ಪಾಠಕ್ಕೆ ನಿಂತರೆ ಅಕ್ಷರಶಃ ಸರ್ವಜ್ಞ ಋಷಿ, ಏರಿ ಬಂದರೆ ಒನಕೆ ಓಬವ್ವ, ಖಡ್ಗ ಹಿಡಿದು ಘರ್ಜಿಸಿ ಎಂಥವರನ್ನೂ ಜರ್ಝರಿತಗೊಳಿಸುವ ಛತ್ರಪತಿ ಶಿವಾಜಿ, ಅಂತರಂಗ ನಿಗೂಢತೆಯ ಐರಾವತ, ಭವ್ಯ ದಿವ್ಯ ಔಷಧ.”

  Like

 2. ಸಾರಥಿಯವರೆ,
  ಅದ್ಭುತವಾಗಿದೆ ನಿಮ್ಮ ಪ್ರಯತ್ನ. ಲೋಪ ಏನಾದರೂ ಪತ್ತೆ ಹಚ್ಚಲು ತಲೆಕೆರೆದುಕೊಳ್ಳಬೇಕಾಗಿದೆ. 🙂 ಙ,ಞ ಗಳ ಪೂರ್ಣ ಅಕ್ಷರ ಬಳಕೆ ಕಡಿಮೆ. ವಾಙ್ಮಯತೆ, ಕಿಞ್ಞಣ್ಣ ಗಳಲ್ಲಿ ಕಾಣಬಹುದು.

  Like

 3. ಅಧ್ಬುತ!! ನಿಜಕ್ಕೂ ಬಹಳ ಖುಷಿ ಆಯ್ತು. ವಿಜಯಸಾರಥಿಗಳೇ, ತಾವು ಪಂಡಿತರೆ ಸರಿ…
  ಅವಿನಾಶ್ ಅವರೆ, ನಿಮಗೆ ಈ ಯೋಚನೆ ಬಂದದ್ದು ಇನ್ನೊಂದು ಪ್ರಶಂಸನೀಯ ಪ್ರಸಂಗ.
  -ವೀಣಾ..

  Like

 4. ವೀಣಾ ಅವರೆ,
  ಸಮಯ ಸಿಕ್ಕರೆ ನೀವೂ ಇದನ್ನು ಪ್ರಯತ್ನಿಸಿ ನೋಡಿ. ಮೆದುಳಿಗೊಂದು ಮೇವು.
  ಪ್ರೋತ್ಸಾಹದ ನುಡಿಗೆ ಧನ್ಯವಾದಗಳು.

  Like

 5. ಅವೀ,

  ಕನ್ನಡದ ಎಲ್ಲಾ ಅಕ್ಷರಗಳು ಕೂಡಿದ ವಾಕ್ಯ..ಚೆನ್ನಾಗಿದೆ ಯೋಚನೆ

  ಸಾರಥಿ ಅವರೇ,
  ಅದ್ಬುತ ವಾಕ್ಯ!

  Like

 6. ನಿಮ್ಮ ಗುಲಾಬಿ ಹೂವಿನ ಮೇಲೆ ಸಣ್ಣ ಹನಿಗಳು ಇವೆ. ಅದೇ ಹಸುರು ಹುಲ್ಲಿನ ಮೇಲೆ ಅದು ಇದ್ದರೆ ಅದರ ಸೌಂದರ್ಯ ಇಮ್ಮಡಿಸಬಹುದು. ನೋಡಿ ಪ್ರಯತ್ನಿಸಿ.

  ವೆಂ.

  Like

 7. ಸಲಹೆಗೆ ಧನ್ಯವಾದ ವೆಂಕಟೇಶರೇ,
  ಇನ್ನೊಮ್ಮೆ ಪ್ರಯತ್ನಿಸ್ತೀನಿ…

  Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s