ಕೊರತೆ ತುಂಬುವೆ ನಾ….

    ಎಲ್ಲಾದರೂ ಇರು ನೀ
    ನಿತ್ಯ ಸುಖದಲಿ ತೇಲು
    ಗೆಲುವು ನಲಿವಾಗಿದ್ದರೆ
    ಈ ಜಗವೇ ಮೇಲು

ಅದ ಹಂಚಿಕೊಳಲು ಬೇಕೆಷ್ಟು
ಸಖರ ಸಾಲು ಸಾಲು!
ಯಾರಿಗು ಬೇಡವಾಯಿತೆ
ನಿನ್ನ ದುಃಖದಲಿ ಪಾಲು ?

    ಯಾರು ಇಲ್ಲವೆಂದು ನೀ
    ಯೋಚಿಸಿ ಕೊರಗದಿರು
    ನಾನಿರುವುದೇ ಇಲ್ಲಿ
    ವಿಷಕಂಠನಾಗಲು !

ಇರುಳಲೊಂದು ದಿನ
ಇಳಿ ಮುಖದಿ ಕುಳಿತಾಗ
ಈ ನಿನ್ನ ಗೆಳೆಯನನು
ಮರೆಯಬೇಡ !

    ಬೇಗುದಿಯೆ ಜೀವಾಳ
    ಈ ನಿನ್ನ ಗೆಳೆಯನಿಗೆ
    ಆದರೋ ನಿಜ ಒಲವು,
    ನಲಿವಿನಾ ಮುಖವಾಡ !

ನಿನ್ನ ನೋವ ಮರೆಸಲು ಎಂದು
ಜೀವ ಕಾದಿಹುದಿಲ್ಲಿ
ದುಃಖ ಹಂಚಿಕೊಳಲು ಯಾವ
ಬಿಗುಮಾನ ಬೇಡ !

    ಒಳಮನದ ಬೇಗುದಿಯ
    ನುಂಗಿದಂತೆಯೇ ನಾನು
    ಪರರ ನೋವನೂ ನುಂಗಿ
    ನಲಿಸಲಿಹೆನಿಲ್ಲಿ ನೋಡಾ !<!–

–>
more–>

5 thoughts on “ಕೊರತೆ ತುಂಬುವೆ ನಾ….

  1. ಇಂದೂರು ಮುಂದೂರು ನೀವಿರುವುದೆಲ್ಲಿ
    ಅವರು ನಿಮ್ಮನು ಹುಡುಕುವುದಲ್ಲಿಇಲ್ಲಿ
    ಈರ್ವರದೂ ನುಂಗುತಿಹುರಿ ಮನದ ಬೇಗೆ
    ಸರಿಯೇ ಹೀಗೆ ಕೈಕೊಡುವುದು ಆಕೆಗೆ

    ನೀವು ಅದ್ಯಾರ ಬಗ್ಗೆ ಬರೆದಿದ್ದೀರೋ ನನಗೆ ಗೊತ್ತಿಲ್ಲ
    ನಾನಂತೂ ಸುಮ್ಮನೆ ನಿಮ್ಮ ಕಾಲನ್ನೆಳೆಯಲು ಹೀಗೆ ಬರೆದೆನಲ್ಲ
    ನೀವಾಗಬಾರದೇ ಬೇಗ ಯಾರಿಗಾದರೂ ನಲ್ಲ
    ಒಬ್ಬಂಟಿ ನಿಂತಿರುವುದು ಸರಿಯಲ್ಲ 😀

    Like

  2. ಶ್ರೀನಿವಾಸರೇ

    ನನಗೂ ಕವನ ಬರೆಯೋಕೆ ಬರುತ್ತಾ ಅಂತ ಟೆಸ್ಟ್ ಮಾಡ್ತಾ ಇದ್ದೀನಿ….

    ಸಕಾರಣವಿಲ್ಲದೆ ದೂರವಾಗೋ ಗೆಳೆಯರು, ಗೆಳತಿಯರಿಗಾಗಿ ಇದನ್ನು ಸದ್ಯಕ್ಕೆ ಅರ್ಪಿಸಿಬಿಡೋಣ
    😀

    Like

  3. ಅವೀ,

    ನಿಮ್ಮ ಕವನ ಅನ್ನೋದಕ್ಕಿಂತ ಅದು ಹೃದಯಾದಳದಿಂದ ಬಂದ ಯಾವುದೋ ಅವ್ಯಕ್ತ ಭಾವಲಹರಿ ಅನಿಸುತ್ತೆ..

    >ಬೇಗುದಿಯೆ ಜೀವಾಳ
    ಈ ನಿನ್ನ ಗೆಳೆಯನಿಗೆ
    ಆದರೋ ನಿಜ ಒಲವು,
    ನಲಿವಿನಾ ಮುಖವಾಡ

    ಯಾಕೋ ಎಲ್ಲೋ ಎನೋ ಮನಕ್ಕೆ ತಗುಲಿದ್ದಂತೆ ಅಯಿತು..
    ಹೀಗೆ ಬರೀತಾ ಇರೀ ಸಾಲುಗಳನ್ನು

    Like

  4. ಶಿವ್ ಅವರೆ,

    ನಿಮ್ಮ ಮಾತಿನ ಬಗ್ಗೆ ಯೋಚಿಸಿದಾಗ ಇರಬಹುದು ಅಂತ ಅನ್ನಿಸಿದೆ.

    ತಲೆ ಸರಿ ಇಲ್ಲದಿದ್ದಾಗಲೇ ಕವನಗಳು ಹುಟ್ಟಿಕೊಳ್ಳುತ್ತವೆ ಎನ್ನಬಹುದೇ?
    (ತಲೆ=ಮನಸ್ಸು)

    ಎಲ್ಲೋ pop up ಆಗಿಬಿಡುವ ಕೆಲವೊಂದು ಸಾಲುಗಳನ್ನು ಜೋಡಿಸಿದ್ದಷ್ಟೇ ಇದು.

    Like

ನೀವೇನಂತೀರಾ?