ಆತ್ಮೀಯವಾಗುವ ಅಪರಿಚಿತರಿಗೆ

 rose.jpg

ಕಣ್ಣ ಕಂಬನಿ ಕೆನ್ನೆಯಿಂ ಜಾರುವ ಮುನ್ನ

ಆ ಹನಿಗಳ ನೀ ಪೋಣಿಸಿ ತಡೆದೆ

ಕಂಬನಿಯ ಕೊನೆ ಹನಿಯೂ ಪಾಳು ಬಾವಿ ಸೇರಿತಲ್ಲಾ|

ಕುಸಿಯುತಿಹ ಮನೋಬಲಕೆ

ಆತ್ಮವಿಶ್ವಾಸದ ಗೋಡೆ ಕಟ್ಟಿದೆ

ಮತ್ತೆಂದೂ ಬೀಳದಷ್ಟು ದೃಢವಾಗಿ ನೆಲೆಯಾಯಿತಲ್ಲಾ|

ಕಲ್ಲಾಗತೊಡಗಿಹ ಹೃದಯಕೆ

ಭಾವ ತೀವ್ರತೆಯ ಧಾರೆ ಎರೆದೆ

ಮತ್ತೆಂದೂ ಮುರುಟದಂತೆ ಧುತ್ತನೆ ಅರಳಿ ನಿಂತಿತಲ್ಲಾ|

ಮಾತು ಮರೆತು ಮೌನವಾಗಿರಲು

ನಗೆ ಮಾತ ಬೆಸೆದು ಆಸೆ ಚಿಗುರಿಸಿದೆ

ಏನನೋ ಕಳಕೊಂಡಿಹ ಭಾವ-ತೀವ್ರತೆಯ ತೊಡೆಯಿತಲ್ಲಾ|

ವೇದನೆ, ದುಗುಡ ದುಮ್ಮಾನಗಳ

ಗುಡಿಸಿ ಸಾರಿಸಿದೆ ಪ್ರೇಮಧಾರೆಯೆರೆದೆ

ಮರಳಿ ಜೀವನೋತ್ಸಾಹ ಚಿಗುರೊಡೆಯಿತಲ್ಲಾ|

ಆತ್ಮೀಯವಾಗಿ, ನನ್ನ ವಿಶ್ವಾಸವಾಗಿ

ಬಾಳ ಪಯಣದ ಪ್ರಾಣವಾದೆ

ಎಲ್ಲೋ ಕಳೆದು ಹೋದ ನಾನು ಮರಳಿ ಬಂದೆನಲ್ಲಾ |

Advertisements

12 thoughts on “ಆತ್ಮೀಯವಾಗುವ ಅಪರಿಚಿತರಿಗೆ

 1. ಬಹಳ ಸುಂದರವಾದ ಕವನ.
  ಕೈ ಜಾರಿ ಹೋದ ಮುತ್ತು,
  ಇನ್ನೇನು ಒಡೆದು ಹೋಯಿತು
  ಎಂದು ಕೈಚೆಲ್ಲಿ ಕುಳಿತಿದ್ದಾಗ
  ಮತ್ತೆ ಕೈ ಸೇರಿತು.

  ಇದನ್ನು ನೋಡಿ ತಿಳಿದವರೆಲ್ಲರ
  ಮನಸ್ಸು ನಿರ್ಮಲವಾಯಿತು.

  ಒಂದು ಚಲನಚಿತ್ರ ಮಾಡುವಷ್ಟು ಸರಕು ಇದೆ. ಸುಂದರ (ಕಲ್ಪನೆ ಎನ್ನಬಹುದೇ?).

  Like

 2. ತವಿಶ್ರೀಗಳೇ,

  ಕೈ ಜಾರಿ ಹೋದ ಮುತ್ತು ಒಡೆದು ಹೋಗಿ ಕೈಚೆಲ್ಲಿ ಕುಳಿತಾಗ,
  ಹೊಸ ಭರವಸೆಯ ತುತ್ತಿನೊಂದಿಗೆ ಬರುತ್ತಾ
  ಆತ್ಮೀಯರಾಗುತ್ತಾರಲ್ಲಾ… ಅವರಿಗಾಗಿ ಇದು.

  Like

 3. ಅವೀ,

  ನೀವು ಅದೃಷ್ಟಶಾಲಿಗಳು..
  ಈ ಸಾಗರದಂತಹ ವಿಶಾಲವಾದ ಜಗದಲ್ಲಿ ಅಪರೂಪಕ್ಕೆ ಎಲ್ಲೋ ಒಂದು ಮುತ್ತು ಸಿಗುತ್ತೆ..ಅದು ಬಹುತೇಕ ಸನ್ನಿವೇಶಗಳಲ್ಲಿ ಸಾಗರದಲ್ಲಿ ಕಳೆದುಹೋದರೆ ಮರಳಿ ಸಿಗುವುದು ಕಷ್ಟ..ಮರಳಿ ಬಂದರೂ ಅದು ಅದಾಗಿ ಇರುತ್ತ ಅಂತಾ ಒಂದು ಭಾವನೆ ಇದ್ದೇ ಇರುತ್ತೆ..

  ಇವೆಲ್ಲದರ ಮಧ್ಯೆ ನಿಮ್ಮ ಮುತ್ತು ನಿಮಗೆ ಸಿಕ್ಕಿದೆ ಅನಿಸುತ್ತೆ..
  ಪ್ರೀತಿಯಿರಲಿ

  Like

 4. ಶಿವ್ ಅವರೆ,

  ಕಳೆದು ಹೋದದ್ದು ಮರಳಿ ಬರುತ್ತದೆ ಅಂತ ಕಾಯುವ ನೋವು ಅದು ಯಾತನೆ.
  ಆದರೆ ಎಲ್ಲೋ ಕಳೆದು ಹೋದ ನಮ್ಮನ್ನು ಮತ್ತೆ ಮರಳಿ ಕರೆತಂದು ನಮ್ಮಲ್ಲಿ ಜೀವನೋತ್ಸಾಹ ತುಂಬುತ್ತಾರಲ್ಲಾ… ಅವರ ಬಗೆಗೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಇದು. ಇದು ನೆಟ್ಟಿನಲ್ಲಿ ದೊರೆತ ಸನ್ಮಿತ್ರರಿಗೆ… 🙂

  Like

 5. ಸೋನಿ ಅವರೆ,
  ವಾಸ್ತವ ಸ್ಥಿತಿ negative ಆಗಿದ್ದರೆ ಹೊಂದಿಕೊಳ್ಳೋದು ನನಗೂ ಕಷ್ಟ, ಆದರೆ positive ಇದ್ದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

  ಒಳ್ಳೇದಾಗಲಿ ಅಂತ ಹಾರೈಸಿದ್ದೀರಲ್ಲಾ… ಅದು ನಮಗೆ ಬೇಕಾದ ವಾಸ್ತವ ಅಂದ್ಕೋತೀನಿ.
  ಹಾರೈಕೆಗೆ ಧನ್ಯವಾದ.

  Like

 6. ವೇಣು ವಿನೋದ್ ಅವರೆ, ನನ್ನ ಬ್ಲಾಗಿಗೆ ಸ್ವಾಗತ.

  ನಿಮ್ಮ ಪ್ರೋತ್ಸಾಹಕ ನುಡಿಗೆ ಧನ್ಯವಾದ.
  ಬರುತ್ತಾ ಇರಿ,

  Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s