Happy Friendship Day!

ಜಗತ್ತಿನಲ್ಲಿ ಪ್ರತಿಯೊಂದು ಆಗು ಹೋಗುಗಳಿಗೂ ಅದರದ್ದೇ ಆದ ಒಂದು ದಿನ ಅಂತ ಆಚರಿಸಲಾಗುತ್ತದೆ. ಏಡ್ಸ್ ಬಂದರೆ ಒಂದು ದಿನ, ಏಡ್ಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ದಿನ, ಮಹಿಳೆಯರಿಗಾಗಿ ಒಂದು ದಿನ, ತಾಯಂದಿರಿಗಾಗಿ ಒಂದು ದಿನ, ಯುವಕ-ಯುವತಿಯರಿಗೆ ಬೇರೆಯೇ ದಿನ…. ಕೊಟ್ಟ ಕೊನೆಗೆ ಮೂರ್ಖರಿಗೂ ಒಂದು ದಿನ.

ಈ ಎಲ್ಲಾ ದಿನಗಳನ್ನು ಆಚರಿಸಲು ವರ್ಷದಲ್ಲಿ 365 ದಿನಗಳು ಖಂಡಿತಾ ಸಾಕಾಗಲಾರವು. ಬಹುಶಃ ದಿನಕ್ಕೆ ಮೂರ್ನಾಲ್ಕು ಇಂಥ ದಿನಗಳನ್ನೇ ಆಚರಿಸಬೇಕಾಗುತ್ತದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ.

ಅಂಥದ್ದೇ ಸಾಲಿನಲ್ಲಿ ಬಂದಿದೆ ಮತ್ತೊಂದು ದಿನ. ಗೆಳೆಯರ ದಿನ ಅಥವಾ ಗೆಳೆತನ ದಿನ. ಇಲ್ಲಿ ಇಂಥ ದಿನಗಳ ಆಚರಣೆ ತಪ್ಪು ಅನ್ನೋದು ನನ್ನ ಅಭಿಪ್ರಾಯ ಅಲ್ಲ, ಅಥವಾ ಅದು ಸರಿ ಅಂತಲೂ ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ.

ಆದರೆ ಆಯಾ ದಿನಗಳನ್ನು ಆಚರಿಸಬೇಕಿದ್ದರೆ, ತೋರಿಕೆಗಾಗಿ ಅವಸರದ ಕೆಲಸದ ಮಧ್ಯೆ ಏನು ಮಾಡಿದೆ ಅಂತ ಗೊತ್ತಾಗದ ರೀತಿಯಲ್ಲಿ ಆಚರಿಸುವ ಬದಲು ಅದರ ನಿಜವಾದ ಅರ್ಥವನ್ನು ಅರಿತು ಮುಂದುವರಿಯಬೇಕು ಎಂಬುದನ್ನು ನನ್ನ ಒಳಮನಸ್ಸು ಯಾವತ್ತೂ ಹೇಳುತ್ತಿರುತ್ತದೆ.

ಫ್ರೆಂಡ್‌ಶಿಪ್ ಡೇ ಅಂತ ಆಚರಿಸಲಾಗಿದೆ. ಅಥವಾ ಫ್ರೆಂಡ್‌ಶಿಪ್ ವೀಕ್ ಅಂತ ವಾರಪೂರ್ತಿ ಆಚರಿಸಲಾಗುತ್ತದೆ. ಇದನ್ನು ಯಾವ ರೀತಿ ಆಚರಿಸೋದು ಅಂತ ನನಗೆ ಖಂಡಿತಾ ಗೊತ್ತಿಲ್ಲ. ಆದರೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಳ್ಳೆಯದೋ, ಕೆಟ್ಟದೋ ಎನ್ನುವ ಜಿಜ್ಞಾಸೆಗೆ ಮುಂದಾಗದೆ ರಪ್ಪೆಂದು ಅದನ್ನು ಒಪ್ಪಿಕೊಳ್ಳುವ ನಾವು ಇಂಥ ಸಂಸ್ಕೃತಿಯನ್ನು “ಇದು ಪಾಶ್ಚಾತ್ಯ” ಎಂದು ಹೇಳಿ ವಿರೋಧಿಸಿದರೂ ಗೆಳೆತನದ ಸಂದೇಶಗಳು ಬರುವಾಗ ಹೃದಯ ತುಂಬಿಬರುತ್ತದೆ. ಮನಸ್ಸು ಭಾರವಾಗುತ್ತದೆ. ಇದಕ್ಕೆ ಕಾರಣವಿದೆ. ಅದನ್ನು ಮತ್ತೊಂದು ಬರಹದಲ್ಲಿ ದಾಖಲಿಸಬಹುದೇನೋ….

ಒಟ್ಟಿನಲ್ಲಿ ಫ್ರೆಂಡ್‌ಶಿಪ್ ಡೇ ಪ್ರಯುಕ್ತ ನನ್ನ mail box ತುಂಬಿಕೊಳ್ಳಲಾರಂಭಿಸಿರುವುದು ಸಂತಸವಾಗುತ್ತದೆ. Inbox ಹೇಗೆ ತುಂಬುತ್ತಿದೆಯೋ ಅದೇ ರೀತಿ ಮನಸ್ಸೂ ತುಂಬಿ ಬರುತ್ತದೆ. ಮನದ ಮೂಲೆಯಲ್ಲಿ ಹೊಸ ಹುರುಪು, ಆಶಾವಾದ, ಉತ್ಸಾಹ ಚಿಗಿತುಕೊಳ್ಳುತ್ತದೆ. ಇದಕ್ಕೆ ನಾನು ಅರ್ಹನೇ? ಎಂಬ ಯೋಚನೆಯೂ ಸುಳಿದಾಡದೆ ಇರಲಿಲ್ಲ.

ಈ ಮಿತ್ರರಿಗಾಗಿ ನಾನೇನು ಮಾಡಿದ್ದೇನೆ? ಎಂಬ ಕೀಳರಿಮೆ ಕಾಡುತ್ತಿದೆ. ದೂರದಲ್ಲಿ ಎಲ್ಲೋ ಇದ್ದುಕೊಂಡು ನನ್ನನ್ನು ನೆನಪಿಸುವವರಿಗೆ ನಾನೇನು ಮಾಡಬೇಕು ಎಂದು ತೋಚದ ಸ್ಥಿತಿ ನನ್ನದು.

ಮನ ಭಾರವಾಗಿಸುವ ಅಥವಾ ಮನಸ್ಸನ್ನು ತಮ್ಮ ಪ್ರೀತಿಯ ಸಂದೇಶಗಳಿಂದ ಮಣ ಭಾರವಾಗಿಸುವ ಮಿತ್ರರಿಗಿದೋ ಆತ್ಮೀಯ ಧನ್ಯವಾದ. ಆದರೆ ಈ ಅಭಿನಂದನೆ, ಧನ್ಯವಾದ ಸಲ್ಲಿಸಲು ಇಂಥದ್ದೇ ದಿನವನ್ನು ಮಾತ್ರವೇ ನಾನು ಬಳಸಿಕೊಳ್ಳುವುದಿಲ್ಲ ಎಂಬುದನ್ನು ಮಾತ್ರ ಈಗಲೇ ಹೇಳಿಬಿಡುತ್ತೇನೆ.

ಸೂಚನೆ: Comment section has been successfully “Repaired”!

Advertisements

6 thoughts on “Happy Friendship Day!

 1. ಅವೀ,
  ಪಾಶ್ಚಾತ್ಯನೋ ಯಾವುದೋ ಒಂದು..ಆದರೆ ಆ ನೆಪದಲ್ಲಿ ಮಿತ್ರರನ್ನು ನೆನಸಿಕೊಳ್ಳೋ ಅವಕಾಶ ಸಿಗುತ್ತಲ್ವ ! ಹಂಗೆಂದ ಮಾತ್ರಕ್ಕೆ ಬೇರೆ ದಿವಸ ಮಿತ್ರರ ಬಗ್ಗೆ ಯೋಚನೆ ಮಾಡಬಾರದು ಅಂತಾ ಎನೂ ಇಲ್ಲ 🙂

  Like

 2. ಶಿವ್,
  ಖಂಡಿತಾ ಒಪ್ಪುವ ಮಾತು. ಕನಿಷ್ಠ ಪಕ್ಷ ಈ ಬ್ಯುಸಿ ಕಾಲದಲ್ಲಿ ಈ ನೆಪದಲ್ಲಾದರೂ ಗೆಳೆಯರನ್ನು ನೆನಪಿಸಿಕೊಳ್ಳಲು ಇಂಥ ಪದ್ಧತಿ ಅವಕಾಶ ಮಾಡಿಕೊಡುತ್ತದೆ ಸತ್ಯ.

  ಆದರೆ ಇತ್ತಿತ್ತಲಾಗಿ ಬೇರೆಯವರು ಮಾಡುತ್ತಾರೆ, ನಾವೂ ಮಾಡೋಣ ಅನ್ನೋ ಮನೋಭಾವನೆ ಬಂದುಬಿಟ್ಟಿದೆ (ಎಲ್ಲರಲ್ಲಿ ಅಲ್ಲ). ಹೀಗಾಗಿ ಭಾವನೆಗಳಿಗೆ ಅಲ್ಲಿ ಬೆಲೆ ಇರುವುದಿಲ್ಲ.

  ಹಾಗಾಗಿ ತೋರಿಕೆಯ ಆಚರಣೆ ಬೇಕಾಗಿಲ್ಲ ಅನ್ನೋದು ನನ್ನ ಅಭಿಪ್ರಾಯ. 😀

  Like

 3. Am agree with you Avi. Keep it up. Tumba Santosha agta ide. Aadare manadalli ondu Aluku ide obbarannu nenapisoke ondu dina beka anta. YEne irali, Raksha bandhanada shubhashayagalu

  mahesh

  Like

 4. ನಾನು ಶುಭಾಶಯ ಕೋರೋದು ತಡವಾಯ್ತು. ನಮ್ಮ ಸಂಸ್ಕೃತಿಯಲ್ಲಿ ಈ ದಿನ (ಸ್ನೇಹಿತರ ದಿನ) ಆಚರಿಸ್ತಾರೋ ಇಲ್ವೇ ಗೊತ್ತಿಲ್ಲ ಅಂತ ಸುಮ್ಮನಾಗಿದ್ದೆ. ಇಷ್ಟು ದೊಡ್ಡ ದಡಿಯ ಇವನಿಗೆ ಇಷ್ಟೂ ಗೊತ್ತಿಲ್ವಾ ಅಂತ ಯಾರಾದ್ರೂ ಅಂದ್ರೆ ಅಂತ ಸುಮ್ಮನಿದ್ದೆ.

  ಈಗ ಸ್ನೇಹಿತರ ದಿನ ಮತ್ತು ರಕ್ಷಾಬಂಧನದ ಶುಭವನ್ನು ಕೋರುತ್ತಿರುವೆ.

  Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s