ಪ್ರೀತಿಗೆ ಕಾರಣವೇ?

ಹುಡುಗಿ: ನೀನೇಕೆ ನನ್ನನ್ನು ಇಷ್ಟಪಟ್ಟೆ? ನೀನೇಕೆ ನನ್ನ ಪ್ರೀತಿಸಿದೆ?

rose1.jpgಹುಡುಗ: ಕಾರಣ ಹೇಳಲಾರೆ… ಆದ್ರೂ ನಾನು ನಿನ್ನನ್ನು ನಿಜವಾಗಿ ಇಷ್ಟಪಟ್ಟಿದ್ದೀನಿ.

ಹುಡುಗಿ: ನಿಂಗೆ ಕಾರಣ ಕೂಡ ಹೇಳಕ್ಕಾಗಲ್ವ? ಮತ್ತೆ ನನ್ನನ್ನು ಇಷ್ಟಪಟ್ಟಿದ್ದೀ ಅಂತ ಅಷ್ಟು ಖಚಿತವಾಗಿ ಹೇಗೆ ಹೇಳ್ತೀ? ನನ್ನ ಪ್ರೀತಿಸ್ತೀ ಅಂತಾನೂ ಹ್ಯಾಗೆ ಹೇಳ್ತೀ?

ಹುಡುಗ: ನಿಜಕ್ಕೂ ನಂಗೆ ಕಾರಣ ಗೊತ್ತಿಲ್ಲ. ಆದ್ರೂ ನಿನ್ನ ಪ್ರೀತಿಸ್ತೀನಿ ಅಂತ ಸಾಬೀತು ಮಾಡಬಲ್ಲೆ.

ಹುಡುಗಿ: ಸಾಬೀತು ಮಾಡ್ತೀಯಾ? ಇಲ್ಲ. ನೀನು ಕಾರಣ ಹೇಳಲೇಬೇಕು. ನನ್ನ ಗೆಳತಿಗೆ ಆಕೆಯ ಬಾಯ್‌ಫ್ರೆಂಡ್ ಕಾರಣ ಹೇಳಬಹುದಾದರೆ, ನಿನಗೇಕೆ ಸಾಧ್ಯವಿಲ್ಲ?

ಹುಡುಗ: ಓಕೆ, ಓಕೆ…ಹ್‌ಮ್…. ನೀನು ಚಂದವಾಗಿದ್ದೀ. ನಿನ್ನ ಮಾತು ಹಿತವಾಗುತ್ತೆ, ನಿನ್ನ ಧ್ವನಿ ಸಂಗೀತದಂತಿದೆ, ನೀನು ತುಂಬಾ ಕೇರಿಂಗ್ ಆಗಿದ್ದೀ. ನೀನು ನನ್ನ ಚೆನ್ನಾಗಿ ಪ್ರೀತಿಸ್ತೀ. ನೀನು ಚೆನ್ನಾಗಿ ಯೋಚನೆ ಮಾಡ್ತೀ. ನಿನ್ನ ನಗೆ ನನಗೆ ಮೋಡಿ ಮಾಡಿದೆ…. ಒಟ್ನಲ್ಲಿ, ನಿನ್ನೆಲ್ಲಾ ಚಟುವಟಿಕೆ, ಚಲನವಲನಗಳು ನನಗೆ ಇಷ್ಟವಾದವು.

ದುರದೃಷ್ಟಕರವೋ ಎಂಬಂತೆ ಕೆಲವು ದಿನಗಳಲ್ಲಿ ಈ ಹುಡುಗಿಗೆ ಅಪಘಾತವಾಗುತ್ತದೆ. ಜೀವಚ್ಛವದಂತೆ ಬದುಕಬೇಕಾಗುತ್ತದೆ. ಇದೇ ಹುಡುಗ ಆಕೆಯ ಬಳಿ ಒಂದು ಪತ್ರವನ್ನಿಡುತ್ತಾನೆ.

ಅದರಲ್ಲಿ ಈ ರೀತಿ ಬರೆದಿತ್ತು:

ಡಿಯರ್,

ನಿನ್ನ ಸಿಹಿಯಾದ ಮಾತಿಗಾಗಿ ನಾನು ನಿನ್ನ ಪ್ರೀತ್ಸಿದೆ… ಆದ್ರೆ ಈಗ ನಿನಗೆ ಮಾತನಾಡಲಾಗುತ್ತದೆಯೇ? ಇಲ್ಲ! ಅದಕ್ಕಾಗಿ ನಾನು ನಿನ್ನ ಪ್ರೀತಿಸೋದಿಲ್ಲ.

ನಿನ್ನ ಕೇರಿಂಗ್ ನೇಚರ್, ಸೌಂದರ್ಯಕ್ಕಾಗಿ  ನಾನು ನಿನ್ನ ಪ್ರೀತ್ಸಿದೆ… ಈಗ ಅವೆಲ್ಲಾ ಎಲ್ಲಿ? ಸೋ… ಈ ಕಾರಣದಿಂದ ನಿನ್ನ ಪ್ರೀತ್ಸೋದು ಅಸಾಧ್ಯ.

ನಿನ್ನ ಆ ಸುಂದರ ಹೂನಗೆ, ನಿನ್ನೆಲ್ಲಾ ಚಟುವಟಿಕೆಗಳು ನನಗೆ ಆತ್ಮೀಯವಾಗಿದ್ದರಿಂದ ನಿನ್ನ ಪ್ರೀತ್ಸಿದೆ. ಅವೆಲ್ಲಾ ಗುಣಗಳು ಈಗ ಸಾಧ್ಯವಿಲ್ಲ. ಆದುದರಿಂದ ಆ ಕಾರಣಗಳಿಗಾಗಿ ನಾ ನಿನ್ನ ಪ್ರೀತಿಸಲಾರೆ…..

ಪ್ರೀತಿ ಮಾಡಲು ಕಾರಣಗಳು ಬೇಕೂಂತೇನಾದರೂ ಇದ್ರೆ, ಈಗಿನ ಸ್ಥಿತಿಯ ಪ್ರಕಾರ, ನಿನ್ನನ್ನು ಪ್ರೀತಿಸಲು ಯಾವುದೇ ಕಾರಣಗಳು ಉಳಿದಿಲ್ಲ. ಪ್ರೀತಿಗೆ ಕಾರಣ ಎಂಬುದೇನಾದರೂ ಬೇಕೇ? ಇಲ್ಲ…. ಹೌದು. ನಾನಿನ್ನೂ ನಿನ್ನ ಪ್ರೀತಿಸ್ತಿದೀನಿ…. ಪ್ರೇಮಕ್ಕೆ ಕಾರಣ ಬೇಕಿಲ್ಲ. ಐ ಲವ್ ಯು….

"The best and most beautiful things in the world cannot be seen, not touched… but are felt in the heart"!

And…. ಇದೇ ಕಾರಣಕ್ಕೆ I Love You …

Advertisements

5 thoughts on “ಪ್ರೀತಿಗೆ ಕಾರಣವೇ?

  1. ಅವಿನಾಶ್‍ರವರೇ,

    ನಿಮ್ಮ ‘ಪ್ರೀತಿಗೆ ಕಾರಣ’ ಮನ ಮುಟ್ಟುತ್ತದೆ.
    ಪ್ರೇಮಕ್ಕೆ ಕಾರಣ ಬೇಕಿಲ್ಲ ಎಂಬುದು ಎಷ್ಟು ನಿಜ..

    ಬದಲಾವಣೆ ಜಗದ ನಿಯಮ..ಸೊಗಸಾಗಿದೆ ಹೆಸರು.

    Like

  2. ಬ್ಲಾಗ್ ಜಗತ್ತಿಗೆ ಸ್ವಾಗತ ಶಿವ್ ಅವರೆ,
    ನಿಮ್ಮ ಪಾತರಗಿತ್ತಿ ಹಿಡಿಯಲು ಶೀಘ್ರವೇ ಬರಬೇಕೆಂಬಾಸೆ.
    ಧನ್ಯವಾದ.

    Like

  3. ಹೃದಯಸ್ಪರ್ಶಿ ಪ್ರೇಮದ ಕಥೆ. ಉಹ್! ನಮ್ಮ ಕಾಲದಲ್ಲಿ ಹೀಗಿರ್ಲಿಲ್ಲ. ಜಗತ್ತು ಏನೂ ಎಂದು ತಿಳಿಯುವ ಮೊದಲೇ ಅಮ್ಮ ಅಪ್ಪ ಗಂಟು ಹಾಕಿಬಿಟ್ರು.

    ಅಂದ ಹಾಗೆ ಇದು ನಿಮ್ಮ ಕಥೆಯಾ [:P]

    Like

  4. ಶ್ರೀನಿವಾಸ್ ಅವರೆ,
    ಈ ಕಥೆ ನಮ್ಮ ನಿಮ್ಮೆಲ್ಲರದೂ ಆಗಿರಬಹುದಲ್ಲ!

    Like

  5. ನನ್ನ ಕಥೆಯಂತೂ ಹೀಗಿಲ್ಲ. ಲೋಕವೆಂದರೇನು ಎಂದು ತಿಳಿಯೋಕ್ಕೆ ಮೊದಲೇ ಹಳ್ಳಕ್ಕೆ ಬಿದ್ದಿದ್ದೆ. ಹೇಗೋ ಏದುರಿಸುಬಿಟ್ಕೊಂಡು ಈಜಿಕೊಂಡು ಹೋಗ್ತಿದ್ದೀನಿ.

    Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s