ಪ್ಯಾನಿಕ್ ಬಟನ್: ಅಂಗೈಯಲ್ಲೇ ಇದ್ದಾನಲ್ಲ ರಕ್ಷಕಭಟ!
ಸ್ಮಾರ್ಟ್ ಫೋನ್ ವೈಶಿಷ್ಟ್ಯದ ಬಗ್ಗೆ ತಿಳಿದಿರಲೇಬೇಕಾದ ಸಂಗತಿ ಕಳೆದ ವಾರ ಹೈದರಾಬಾದ್ ಟೋಲ್ ಸಂಗ್ರಹ ಕೇಂದ್ರದ ಬಳಿ ಪಶುವೈದ್ಯೆಯ ಮೇಲೆ ಕಾಮುಕರು ಮುಗಿಬಿದ್ದು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯು ದೇಶಾದ್ಯಂತ ಸದ್ದು ಮಾಡಿತು. ರಾಜಧಾನಿ ದೆಹಲಿಯಲ್ಲಿ 2012 ಡಿಸೆಂಬರ್ 16ರಂದು ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲೆದ್ದ ಆವೇಶದ ಕಿಚ್ಚು ಮತ್ತೆ ಹತ್ತಿಕೊಂಡಿದೆ. “ನಮ್ಮಲ್ಲಿ ಮಹಿಳೆಗೆ ರಕ್ಷಣೆ ಇಲ್ಲ” ಎಂಬ ಮಾತಿಗೆ ಪುನರಪಿ ಬಲ ಬಂದಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೊಂದು ಸ್ವರಕ್ಷಣೆಯ ಸರಳ ವಿಧಾನ ನಮ್ಮ ಕೈಯಲ್ಲಿದೆ ಎಂಬುದು…