ಬದಲಾವಣೆಯೇ ಜಗದ ನಿಯಮ

ವಿಶ್ವದ ಅತ್ಯಂತ ಹಿರಿಯ ಬ್ಲಾಗರ್‌ನಿಂದ ಕನ್ನಡಕ್ಕೆ ಕಾಮೆಂಟ್!
ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆಯುಳ್ಳ ಬೂಟಿ ಸಿಂಗ್ ಬಗ್ಗೆ ಕಳೆದ ವರ್ಷದ ಜೂನ್ 28ರಂದು ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಓದಿರಲಿಕ್ಕಿಲ್ಲ. ಆ ಲೇಖನದ ಲಿಂಕ್ ಇಲ್ಲಿದೆ.

ಅವರು ಅದು ಹೇಗೋ ಹುಡುಕಿಕೊಂಡು ಬಂದು ನನ್ನ ಬ್ಲಾಗಿಗೂ ಕಾಮೆಂಟ್ ಹಾಕಿದ್ದಾರೆ. ಅದಕ್ಕಾಗಿ ಈ ದಿನ ಖುಷಿ.

ಅವರು ಹುಟ್ಟಿದ್ದು ಗಯಾನದ ಬಕ್ಸ್‌ಟನ್‌ನಲ್ಲಿ. ಭಾರತದಿಂದ ವಲಸೆ ಹೋದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲವಂತೆ. ಮಹಾತ್ಮಗಾಂಧಿಯ ಪರಮ ಅನುಯಾಯಿ. ಮಹಾತ್ಮ ಗಾಂಧಿ ಮೃತಪಟ್ಟಾಗ ಕಣ್ಣೀರಿಟ್ಟಿದ್ದರಂತೆ.

ಹೆಲೆನ್ ಕೆಲ್ಲರ್ ಜೀವನದಿಂದ ಪ್ರಭಾವಿತರಾಗಿ ಮೂರು ಕವನ ಸಂಕಲನ ಹೊರತಂದಿದ್ದಾರೆ. 96ರಲ್ಲೂ ಬತ್ತದ ಜೀವನೋತ್ಸಾಹ. ಹಿಂದಿ, ಉರ್ದು ಚೆನ್ನಾಗಿ ಗೊತ್ತಿದೆ. ಅದ್ಭುತ ಎನಿಸಬಹುದಾದ ಭಾಷಾ ಪ್ರೇಮಿ ಅವರು.

ಹೆಚ್ಚು ಹೇಳಿದರೆ ಅವರ ಬಗೆಗೆ ನಿಮ್ಮ ಅನಿಸಿಕೆಗಳು ಡೈವರ್ಟ್ ಆಗಲೂ ಬಹುದು. ಹೀಗಾಗಿ ನೀವೇ ನೋಡಿಬಿಡಿ. ಬ್ಲಾಗಿನ URL ಇಲ್ಲಿದೆ: http://randallbutisingh.wordpress.com/

ಸಿಂಗ್-ಜರ್ದಾರಿ ಭೇಟಿ: ಅಮೆರಿಕ ‘ಒತ್ತಡ’ ತಂತ್ರದ ಫಲವೇ?
ಇತ್ತೀಚಿನ ಕೆಲವೊಂದು ವಿದ್ಯಮಾನಗಳತ್ತ ಕಣ್ಣೋಟ ಹಾಯಿಸಿದರೆ, ಅಮೆರಿಕವು ಒಮ್ಮೆ ಭಾರತದತ್ತ, ಮಗದೊಮ್ಮೆ ಪಾಕಿಸ್ತಾನದತ್ತ ವಾಲುತ್ತಾ, ಈ ಜಾಗತಿಕ ಆರ್ಥಿಕ ಸಂಕಷ್ಟ ದಿನಗಳಲ್ಲಿಯೂ ಜಗತ್ತಿನ ಪ್ರಬಲ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಸ್ಥಿರಗೊಳಿಸಲು ಒಳಗಿಂದೊಳಗೆಯೇ ಕಾರ್ಯತಂತ್ರ ರೂಪಿಸುತ್ತಿದೆಯೇ ಎಂಬ ಬಗ್ಗೆ ಶಂಕೆ ಮೂಡುತ್ತಿವುದು ಸಹಜ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಮೆರಿಕದ ಆರ್ಥಿಕ ಸ್ಥಿತಿ ಸಪಾಟಾಗಿ ಹೋಗಿದೆ. ಅಲ್ಲಿನ ಕಂಪನಿಗಳ ಲಾಭಕೋರ ಮನಸ್ಥಿತಿಯಿಂದ, ಸ್ವಯಂಕೃತಾಪರಾಧದಿಂದಾಗಿ ಆರ್ಥಿಕ ಸಂಕಷ್ಟವು ಅಮೆರಿಕಕ್ಕೆ, ಆ ಮೂಲಕ ವಿಶ್ವಕ್ಕೇ ಹಂದಿ ಜ್ವರದ ವೈರಸ್ ರೀತಿ ಹರಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಅಮೆರಿಕ ಯಾವ ಪರಿ ಹೊಡೆತ ತಿಂದಿದೆಯೆಂದರೆ, ಅಲ್ಲಿ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ. ವಿಶ್ವದ ಹಿರಿಯಣ್ಣ ಎಂಬ ಪಟ್ಟವಂತೂ ಕುಸಿದು ಬಿದ್ದು ನರಳಾಡುತ್ತಿದೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಇದರ ಅರಿವಿದೆ. ಅಂತೆಯೇ, ತಮ್ಮ ರಾಷ್ಟ್ರಕ್ಕೆ ಈ ಪರಿ ಹೊಡೆತ ಬಿದ್ದರೂ ಚೀನಾ ಮತ್ತು ಭಾರತಗಳು ಎದೆ ಸೆಟೆದು ನಿಂತಿರುವುದನ್ನು ನೋಡುವುದು ಅಮೆರಿಕಕ್ಕೆ ಆಗುತ್ತಿಲ್ಲ. ಹೀಗಾಗಿ, ಏನಾದರೂ ಮಾಡಿ ಈ ಉಪಖಂಡದ ಬೆಳವಣಿಗೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕವೂ ಕಾರ್ಯತಂತ್ರ ಹೆಣೆಯುತ್ತಿದೆಯೇ ಎಂಬ ಪ್ರಶ್ನಾರ್ಥಕ ಚಿಹ್ನೆ ದಪ್ಪವಾಗಿಯೇ ಎದ್ದುಗಾಣುತ್ತಿರುವುದು ಸುಳ್ಳಲ್ಲ.

ಒಂದು ಬಾರಿ ಹಿಂದೆ ತಿರುಗಿ ನೋಡಿ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಬಾಯಿಂದ ದಿಟ್ಟ ನಿರ್ಧಾರವೊಂದು ಬಂದಿತ್ತು. ಪಾಕಿಸ್ತಾನವು ಭಾರತವಿರೋಧಿ ಭಯೋತ್ಪಾದಕ ಬಣಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮತ್ತಷ್ಟು ನಿಖರ ಸಾಕ್ಷ್ಯಾಧಾರ ದೊರೆಯದ ಹೊರತು, 26/11 ಮುಂಬೈ ದಾಳಿ ಬಳಿಕ ನಿಂತು ಹೋಗಿದ್ದ ಶಾಂತಿ ಮಾತುಕತೆ ಮುಂದುವರಿಕೆಯ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದರವರು.

ಮೊನ್ನೆ ಮೊನ್ನೆ ಅಮೆರಿಕದ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಭಾರತಕ್ಕೆ ಬಂದಿದ್ದರಲ್ಲ, ಅವರು ಬಂದು, ನಮ್ಮ ಪ್ರಧಾನಿ ಕೈಗೆ ಕೊಟ್ಟ ‘ಒಬಾಮ ಸಂದೇಶ’ ಪತ್ರದಲ್ಲಿ ಏನಿದ್ದಿರಬಹುದು ಎಂಬ ಕುತೂಹಲವೇ ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದನ್ನು ನಮ್ಮ ಪ್ರಿಯ ಓದುಗರೂ ಗಮನಿಸಿದ್ದಿರಬಹುದು. ಅದರಲ್ಲಿ ‘ಪಾಕಿಸ್ತಾನ ಜೊತೆಗೆ ಮಾತುಕತೆ ಮುಂದುವರಿಸಿ’ ಎಂಬ ಒತ್ತಡ ತಂತ್ರವೂ ಒಳಗೊಂಡಿತ್ತೇ ಎಂಬ ಬಗ್ಗೆ ಕೇಂದ್ರವೂ ಬಾಯಿ ಬಿಡುತ್ತಿಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳುವ ಪ್ರಕಾರ, ಅದರಲ್ಲಿ ಕೆಲವೊಂದು “ಸಲಹೆ”ಗಳಿದ್ದವು. ಯಾವುದೇ ಒತ್ತಡ ಇರಲಿಲ್ಲವಂತೆ.

ಆ ಬಳಿಕದ ಬೆಳವಣಿಗೆ, ರಷ್ಯಾದಲ್ಲಿ ನಡೆದ ಬ್ರಿಕ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾಗಳ ಮೊದಲಕ್ಷರ) ರಾಷ್ಟ್ರಗಳ ಸಮಾವೇಶದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಪಾಕ್ ಅಧ್ಯಕ್ಷ ಜರ್ದಾರಿ ಕೈಕುಲುಕಾಟದ ಭೇಟಿ! ಮತ್ತೆ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು, ಹೋರಾಡಲು ಪಾಕಿಸ್ತಾನವು ಸಮಯಾವಕಾಶ ಕೇಳಿರುವುದರಿಂದ ನಾವು ಅದಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದು ಬುಧವಾರ ಸಿಂಗ್ ರಷ್ಯಾದಿಂದ ಮರಳುವ ಹಾದಿಯಲ್ಲಿ ಘೋಷಿಸಿಬಿಟ್ಟಿದ್ದಾರೆ.

ಮಾತುಕತೆಯೇ ಇಲ್ಲ ಎಂದವರ ನಿಲುವು ಮೃದುವಾಯಿತೇ? ಎಂಬ ಶಂಕೆಗೂ ಕಾರಣವಿದೆ. ಸಿಂಗ್-ಜರ್ದಾರಿ ಮೊನ್ನೆ ಮಾತನಾಡಿದರು. ಮುಂದಿನ ತಿಂಗಳು ಈಜಿಪ್ಟ್‌ನಲ್ಲಿ ನಡೆಯುವ ಅಲಿಪ್ತ ರಾಷ್ಟ್ರಗಳ ಸಮಾವೇಶದ ಪಾರ್ಶ್ವದಲ್ಲಿ ಮತ್ತೊಮ್ಮೆ ಭೇಟಿಯಾಗಲು ಇಬ್ಬರೂ ನಿರ್ಧರಿಸಿದ್ದಾರೆ, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯೂ ರಷ್ಯಾದಲ್ಲಿ ನಡೆದಿದ್ದು, ಅದು ಕೂಡ ಮುಂದುವರಿಯಲಿದೆ. ಇದು ಭಾರತ-ಪಾಕ್ ನಡುವಣ ಶಾಂತಿ ಮಾತುಕತೆಯ ಮುಂದುವರಿಕೆಯೇ ಅಲ್ಲವೇ? ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೀಡಿದ ಉತ್ತರ ‘ಅಲ್ಲ’. ಪಾಕಿಸ್ತಾನ ಏನು ಮಾಡಿದೆ, ನಾವೇನು ಮಾಡಬಹುದು ಎಂಬುದರ ಕುರಿತು ಮಾಹಿತಿ ವಿನಿಮಯ ಮಾತ್ರವಂತೆ.

2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಕಷ್ಟಪಟ್ಟು ಸಂಗ್ರಹಿಸಿದ್ದ ಸ್ಪಷ್ಟ ಸಾಕ್ಷ್ಯಾಧಾರಗಳನ್ನೆಲ್ಲಾ ಪಾಕಿಸ್ತಾನವು, ಒಪ್ಪಿಕೊಳ್ಳುವಂತೆ ಜಾಗತಿಕ ಒತ್ತಡದ ಹೊರತಾಗಿಯೂ, ‘ಇದು ಸಾಕಾಗುವುದಿಲ್ಲ’ ಎಂದು ಝಾಡಿಸಿ ಒದ್ದುಬಿಡುವಷ್ಟರ ಮಟ್ಟಕ್ಕೆ ತಲೆ ಎತ್ತಿ ನಿಂತದ್ದು ಹೇಗೆ? ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಒಬಾಮ ನಡುವೆ ನಡೆದ ಮಾತುಕತೆಯ ಫಲಶ್ರುತಿ ಇದು ಆಗಿರಬಹುದೇ?

ಭಾರತದ ಬಳಿ ದಿಟ್ಟವಾದ, ಬಲವಾದ ಸಾಕ್ಷ್ಯಾಧಾರಗಳಿವೆ. ಹೀಗಾಗಿ, ಮೊನ್ನೆ ಮೊನ್ನೆಯಷ್ಟೇ ರಚನೆಗೊಂಡ ಯುಪಿಎ-II ಸರಕಾರವು, “ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸದೆ ಮಾತುಕತೆಯೇ ಇಲ್ಲ” ಎಂದು ಸ್ಪಷ್ಟ ಶಬ್ದಗಳಲ್ಲಿ ಉಚ್ಚರಿಸಿತ್ತು. ಇದು ಪಾಕಿಸ್ತಾನವನ್ನು ಕಂಗೆಡಿಸಿತು. ಅಮೆರಿಕಕ್ಕೆ ದೂರು ಹೋಗಿದ್ದಿರಲೂಬಹುದು. ಕಾಶ್ಮೀರ ವಿವಾದ ಪ್ರಸ್ತಾಪಿಸಿ, ಉಭಯ ರಾಷ್ಟ್ರಗಳ ನಡುವೆ ಕಾಶ್ಮೀರ ವಿವಾದವೇ ದೊಡ್ಡ ಅಡ್ಡಿ ಎಂದು ಈ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಮತ್ತೊಮ್ಮೆ ಪ್ರಯತ್ನವನ್ನೂ ಪಾಕ್ ಮಾಡಿತು.

ಭಾರತ ಈ ಬಾರಿ ಬಿಡುವುದಿಲ್ಲ ಎಂಬುದು ಬಹುಶಃ ಅಮೆರಿಕಕ್ಕೂ ಮನದಟ್ಟಾಗಿದ್ದಿರಬಹುದು. ತನ್ನ ಬಳಿ ಬೇರೆ ದೇಶಗಳಿಗೆ ಉದಾರ ‘ನೆರವು’ ನೀಡುವಷ್ಟು ನಿಧಿ ಇಲ್ಲ ಎಂಬ ಅರಿವಿದ್ದರೂ, ಪಾಕಿಸ್ತಾನದಲ್ಲಿ ತಾಲಿಬಾನ್, ಅಲ್ ಖಾಯಿದಾ ಮುಂತಾದ ಅದೆಷ್ಟೋ ರಾಶಿ ರಾಶಿ ಉಗ್ರರನ್ನು ಮಟ್ಟ ಹಾಕಲು ಪಡೆಗಳನ್ನು ಮತ್ತು ಹಣಕಾಸು ಪ್ಯಾಕೇಜ್‌ಗಳನ್ನು ಕೂಡ ಘೋಷಿಸತೊಡಗಿತು. ಅಂದರೆ ಮುಂದಿನ ಐದು ವರ್ಷಗಳ ಕಾಲ ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಒಂದೂವರೆ ಶತಕೋಟಿ ಡಾಲರ್ ಹಣ! (ಪಾಕಿಸ್ತಾನ ಜೊತೆಗೆ ಸಂವರ್ಧಿತ ಪಾಲುದಾರಿಕೆ ಕಾಯ್ದೆ, ಇದು ಸೆನೆಟರ್‌ಗಳಾದ ಜಾನ್ ಎಫ್.ಕೆರಿ ಮತ್ತು ರಿಚರ್ಡ್ ಲೂಗರ್ ಸಿದ್ಧಪಡಿಸಿರುವುದರಿಂದ ಕೆರಿ-ಲೂಗರ್ ಕಾಯ್ದೆ ಎಂಬ ಹೆಸರೂ ಇದೆ). ಒಂದು ಮಾಹಿತಿಯ ಪ್ರಕಾರ, ಅಮೆರಿಕವು ಪಾಕಿಸ್ತಾನಕ್ಕೆ ಈಗಾಗಲೇ 3.2 ಶತಕೋಟಿ ಡಾಲರ್ ನೆರವು ರವಾನಿಸಿ ಆಗಿದೆ.

ಅದೆಲ್ಲ ಒತ್ತಟ್ಟಿಗಿರಲಿ. ಭಾರತ-ಪಾಕ್ ನಡುವೆ ಶಾಂತಿ ನೆಲಸುವುದು ಅಮೆರಿಕಕ್ಕೆ ಬೇಕಿಲ್ಲ. ಶಾಂತಿ ನೆಲೆಸಿದ್ದೇ ಆದಲ್ಲಿ, ಭಾರತವಂತೂ ವಿಶ್ವ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈ ಸಂಭಾವ್ಯ ರಾಜತಾಂತ್ರಿಕ ಒಗ್ಗಟ್ಟಿನ ಬಲವನ್ನು ಮೂಲದಲ್ಲೇ ಚಿವುಟಬೇಕಿದ್ದರೆ ಇಂಥ ರಾಜಕೀಯ ಆಟಗಳನ್ನು ಆಡಲೇಬೇಕು ಎಂಬುದು ಅಮೆರಿಕಕ್ಕೆ ತಿಳಿದಿದೆ ಎಂಬ ವಾದಕ್ಕೆ ಹುರುಳಿಲ್ಲದಿಲ್ಲ.

ಭಾರತದ ಧ್ವನಿ ಜೋರಾಗುತ್ತಿದೆ ಎಂದಾದಾಗ ಪಾಕಿಸ್ತಾನವು ಒಮ್ಮೆ ತಾಲಿಬಾನ್ ಜೊತೆ ಶಾಂತಿ ಒಪ್ಪಂದ ನಡೆಸಿ ಗಮನ ಬೇರೆಡೆ ಸೆಳೆದರೆ, ಮತ್ತೊಂದು ಬಾರಿ ತಾಲಿಬಾನ್ ಮೇಲೆ ಮುಗಿಬೀಳುವುದಾಗಿ ಘೋಷಿಸುತ್ತಿದೆ. ಒಮ್ಮೆ ಜಮಾತ್ ಉದ್ ದಾವಾ ಮುಖ್ಯಸ್ಥ, ಮುಂಬೈಯ ಪ್ರಧಾನ ಸಂಚುಕೋರ ಹಫೀಸ್ ಸಯೀದ್ ಮತ್ತಿತರ ಉಗ್ರರನ್ನು ಬಂಧಿಸುತ್ತದೆ, ಬಳಿಕ ಬಿಡುಗಡೆ ಮಾಡುತ್ತದೆ. ಸಹಾಯ ಮಾಡೀ ಎಂದು ಅಮೆರಿಕದೆದುರು ಹೋಗಿ ಕೈ-ಬಾಯಿ ಬಿಟ್ಟು ನಿಲ್ಲುತ್ತದೆ. ಅಲ್ಲಿಗೆ ಮುಂಬೈ ದಾಳಿ ಎಂಬ ವಿಷಯದ ಸದ್ದು ಮೂಲೆಗೆ ಸರಿಯುತ್ತದೆ. ಭಾರತವು ಮುಂಬೈ ದಾಳಿ ವಿಷಯ ಎತ್ತಿದಾಗಲೆಲ್ಲಾ, ಪಾಕಿಸ್ತಾನವು “ನಾವು ಕೂಡ ಭಯೋತ್ಪಾದನೆ-ಪೀಡಿತರು, ತಾಲಿಬಾನ್‌ಗಳು ನಮಗೆ ತೀರಾ ಕಿರಿಕಿರಿ ಮಾಡುತ್ತಿದ್ದಾರೆ” ಎನ್ನುತ್ತಾ, ವಿಷಯಾಂತರ ಮಾಡುತ್ತಲೇ ಇದೆ, ಅದರಲ್ಲಿ ಯಶಸ್ವಿಯೂ ಆಗುತ್ತಿದೆ.

ಅತ್ತ ಅಮೆರಿಕವೂ ಕೂಡ, ತಾಲಿಬಾನ್, ಅಲ್ ಖಾಯಿದಾ ಮೇಲೆ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಒಮ್ಮೆ ಎಚ್ಚರಿಕೆಯ ಗಂಟೆ ಬಾರಿಸುತ್ತದೆ. ಆ ಮಾತು ಮುಗಿಸುವ ಮುನ್ನವೇ ಪಾಕಿಸ್ತಾನದ ಬಗ್ಗೆ ಮೃದು ನಿಲುವು ತಳೆದು, ಸಹಾಯಧನ, ನೆರವಿನ ಮಹಾಪೂರ ಹರಿಸುತ್ತಾ, ಭಾರತವು ನೇರಾನೇರ ಎಗರಿಬೀಳದಂತೆ ನೋಡಿಕೊಳ್ಳುತ್ತದೆ. ಪಾಕಿಸ್ತಾನ ಹಾಗೂ ಈ ಅಮೆರಿಕದ ದ್ವಂದ್ವ ನಿಲುವುಗಳ ಬಗ್ಗೆ ಯುಪಿಎ ಸರಕಾರ ಎಚ್ಚೆತ್ತುಕೊಂಡೀತೇ? ಯಾವುದೇ ಕಾರಣಕ್ಕೂ ಮುಂಬೈ ದಾಳಿಯ ಸಂಚುಕೋರರು ಪಾಕಿಸ್ತಾನದಲ್ಲಿದ್ದಾರೆ ಎಂಬ ಅಂಶದಿಂದ ವಿಷಯಾಂತರ ಮಾಡದಂತೆ ನೋಡಿಕೊಳ್ಳಬೇಕಾಗಿದೆ.

ಮುಂಬೈ ದಾಳಿ ನಡೆದು ಏಳೆಂಟು ತಿಂಗಳುಗಳೇ ಕಳೆದರೂ, ಪಾಕಿಸ್ತಾನಿ ಮೂಲದ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಡ ಹೇರಲು ಭಾರತ ಸರಕಾರ ವಿಫಲವಾಗಿದೆಯಲ್ಲಾ ಎಂದು ಭಾರತೀಯರಂತೂ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.

ಇದು ನಮ್ಮನ್ನಾಳುವವರಿಗೆ ಕೇಳಿಸುತ್ತದೆಯೇ?

(ವೆಬ್‌ದುನಿಯಾ)

ವಿರೋಧಿಗಳನ್ನು ನಿರುತ್ತರರಾಗಿಸೋದು ಹೇಗೆ?
ಗಾಂಧಿಗಿರಿ ಬಗ್ಗೆ ಕೇಳಿದ್ದೀರಿ. ಎದುರಾಳಿಯನ್ನು ಮತ್ತು ವಿರೋಧಿಸುವವರನ್ನು ಪ್ರೀತಿಯಿಂದಲೇ ಗೆಲ್ಲುವುದು ಹೇಗೆಂಬುದು ಈ ಗಾಂಧಿಗಿರಿಯ ಹಿಂದಿನ ಮರ್ಮ. ಆದರೆ, ಚಾಣಾಕ್ಷತೆಯಿದ್ದರೆ ಎದುರಾಳಿಗಳ ಮನ ಗೆಲ್ಲಲಾಗದಿದ್ದರೂ, ಅವರಿಂದ ಮೇಲುಗೈ ಸಾಧಿಸಬಹುದಲ್ಲವೇ?

ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರ ಬಗ್ಗೆ, ಪ್ರಸಿದ್ಧಿಗೆ ಬಂದವರ ಬಗ್ಗೆ ಸಹವರ್ತಿಗಳಲ್ಲಿ, ಕುಟುಂಬಿಕರಲ್ಲಿ, ನಾನೂ ಆ ಮಟ್ಟಕ್ಕೇರಲಿಲ್ಲವಲ್ಲಾ ಎಂದು ಹಲುಬುವವರು ಬಹಳಷ್ಟು ಮಂದಿ. ಯಾಕೆಂದರೆ ಹೊಟ್ಟೆ ಕಿಚ್ಚು, ಅಸೂಯೆ, ಮತ್ಸರ ಎಂಬಿತ್ಯಾದಿಗಳು ಮಾನವಸಹಜ ಗುಣಗಳು ಅಲ್ವಾ?

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಕೇಳಿದ್ದೀರಿ. ಇದು ನೆನಪಾದಾಗ ಅಕ್ಬರ-ಬೀರಬಲ್ಲರ ಕಥೆಯೊಂದು ಕೂಡ ನೆನಪಿಗೆ ಬರುತ್ತದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಓದಿ:

ಅಕ್ಬರನ ಆಸ್ಥಾನದಲ್ಲಿ ಬೀರಬಲ್‌ನ ಚಾಣಾಕ್ಷ ತಂತ್ರಗಳು ಸರ್ವ ವಿದಿತ. ಬೀರಬಲ್ಲನ ಸಿದ್ಧಿ-ಪ್ರಸಿದ್ಧಿಯನ್ನು ಸಹಿಸದೆ ಒಳಗಿಂದೊಳಗೆ ಕುದಿಯುತ್ತಿರುವವರಿಗೇನೂ ಕೊರತೆಯಿರಲಿಲ್ಲ. ದರ್ಬಾರಿನಲ್ಲಿದ್ದ ಮುಸ್ತಾಫನಿಗೂ ಬೀರಬಲ್ಲನನ್ನು ಕಂಡರೆ ಹೊಟ್ಟೆ ಕಿಚ್ಚು. ಆಸ್ಥಾನದಲ್ಲಿ ಅವನ ನಿರ್ಭಾವುಕ ಮುಖವು ಸ್ವತಃ ಅಕ್ಬರನಿಗೂ ಅಚ್ಚರಿ ತಂದಿತ್ತು. ಒಂದು ದಿನ ಆತ ಆಸ್ಥಾನದಲ್ಲಿ ಘೋಷಿಸಿದ. ಮುಸ್ತಾಫ ಏನು ಯೋಚಿಸುತ್ತಿದ್ದಾನೆ ಎಂಬುದನ್ನು ಹೇಳಿದವರಿಗೆ ಐನೂರು ವರಹಗಳನ್ನು ಬಹುಮಾನವಾಗಿ ನೀಡುತ್ತೇನೆ ಅಂತ.

ಊಹೂಂ, ಆಸ್ಥಾನ ವಿದ್ವಾಂಸರೆಲ್ಲರಿಗೂ ಇದು ಅಸಾಧ್ಯದ ಮಾತು. ಯಾರೂ ಉತ್ತರಿಸಲಾರದ್ದನ್ನು ಕಂಡು ಅಕ್ಬರನ ಮುಖ ಬಾಡುವಷ್ಟರಲ್ಲಿ, ಬೀರಬಲ್ಲ ಎದ್ದುನಿಂತ. ಬೀರಬಲ್ ಎದ್ದು ನಿಂತದ್ದು ನೋಡಿ ಮುಸ್ತಾಫನಿಗೆ ಖುಷಿಯೋ ಖುಷಿ. ಬೀರಬಲ್ ಏನು ಹೇಳುತ್ತಾನೋ, ಅದನ್ನು ನಿರಾಕರಿಸಿದರಾಯಿತು ಎಂದುಕೊಂಡು ಮುಖವನ್ನು ಮತ್ತಷ್ಟು ಗಂಟಿಕ್ಕಿಕೊಂಡ.

ಬೀರಬಲ್ ಹೇಳಿದ: “ಬಾದಷಾ, ಮುಸ್ತಾಫ ಏನು ಯೋಚಿಸ್ತಾನೆ ಎಂಬುದು ನನಗೊತ್ತಿದೆ” ಎಂದ.

ಇಡೀ ಆಸ್ಥಾನದಲ್ಲಿ ಕುತೂಹಲಭರಿತ ಮೌನ. ಎಲ್ಲರೂ ಬೀರಬಲ್ಲನನ್ನೇ ತದೇಕಚಿತ್ತರಿಂದ ನೋಡುವವರೆ. ಅವನನ್ನು ಕಂಡರೆ ಹೊಟ್ಟೆಯುರಿಯುತ್ತಿದ್ದವರೆಲ್ಲರೂ, ಈ ಬಾರಿ ಬೀರಬಲ್ಲನಿಗೆ ಸೋಲು ಕಾದಿದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತಿದ್ದರು.

ಆತ್ಮವಿಶ್ವಾಸದಿಂದ ದಿರಿಸು ಸರಿಪಡಿಸಿಕೊಳ್ಳುತ್ತಾ ಬೀರಬಲ್ಲ, ‘ಸ್ವಾಮಿನ್, ಇವನೇನೂ ಯೋಚಿಸ್ತಾನೆಂದರೆ…. ನೀವು ಯಾವತ್ತೂ ಆರೋಗ್ಯವಂತರಾಗಿ, ಸದಾ ಖುಷಿಯಿಂದಿರಬೇಕು. ಮತ್ತು ನೀವು ದೀರ್ಘಾಯುಷಿಯಾಗಬೇಕು ಎಂದು ಯೋಚಿಸುತ್ತಿದ್ದಾನೆ’!

ಇಡೀ ಸಭೆಯಲ್ಲಿ ವ್ಹಾ ವ್ಹಾ ಎಂಬ ಘೋಷಣೆಯೇ ಜೋರಾಗಿ ಕೇಳಿಬಂತು! ಮುಸ್ತಾಫನ ಮುಖವಂತೂ ತೀರಾ ಬಿಳಿಚಿಕೊಂಡಿತ್ತು, “ಇಲ್ಲ ಇಲ್ಲ, ಬೀರಬಲ್ ಹೇಳಿದ್ದು ಸುಳ್ಳು” ಎಂದು ಹೇಳೋಣವೆಂದು ಬಾಯ್ತೆರೆದು ನಿಂತಿದ್ದವನಿಗೆ ಬಾಯಿ ಕಟ್ಟಿಯೇ ಹೋಯಿತು.

“ಇ…ಇ… ಹೌದು ಸ್ವಾಮಿ, ಬೀರಬಲ್ ಸರಿಯಾಗಿಯೇ ಹೇಳಿದ್ದಾನೆ” ಎಂದುತ್ತರಿಸಿ, ಬೆವರೊರೆಸಿಕೊಳ್ಳುತ್ತಾ ಕೂತನವ. ಅಬ್ಬಾ, ಇಲ್ಲ ಎಂದುಬಿಟ್ಟರೆ, ನಾನು ಬಾದಶಹಾರ ಒಳಿತನ್ನೇ ಬಯಸುತ್ತಿರಲಿಲ್ಲ ಎಂದಾಗುತ್ತಿತ್ತಲ್ಲವೇ? ಎಂದು ನೆನಪಿಸಿಕೊಂಡ ಆತ ಥರಗುಟ್ಟಿಹೋಗಿದ್ದ.

ಅಕ್ಬರನಂತೂ ಬೀರಬಲ್ಲನ ಬುದ್ಧಿಮತ್ತೆಗೆ ವಂದಿಸಿದ. ಎಷ್ಟು ಚತುರತೆಯಿಂದ ಮುಸ್ತಾಫನನನ್ನು ಮಟ್ಟ ಹಾಕಿದನಲ್ಲ ಎಂದುಕೊಂಡ. ಆದರೂ, ಬೀರಬಲ್ಲನನ್ನು ಮತ್ತಷ್ಟು ಪರೀಕ್ಷಿಸಬೇಕೆನಿಸಿತು.

ಕೇಳಿದ: “ಹಾಗಿದ್ರೆ ಈಗ ಹೇಳು, ನಾನೇನು ಯೋಚಿಸುತ್ತಿದ್ದೇನೆ ಅಂತ”…

ಬೀರಬಲ್ಲ ಬಹುಶಃ ಇಂಥಹ ಪ್ರಶ್ನೆ ನಿರೀಕ್ಷಿಸಿದ್ದನೇನೋ… ಒಂದಿಷ್ಟೂ ವಿಚಲಿತನಾಗದೆ ಉತ್ತರಿಸಿದ:

“ಬಾದಶಹಾ, ಸ್ವರ್ಗ ಲೋಕದಲ್ಲಿರುವ ನಿಮ್ಮ ಎಲ್ಲಾ ಪಿತೃಗಳು ಆರಾಮವಾಗಿ ನೆಮ್ಮದಿಯ ಜೀವನ ಸವೆಸುತ್ತಿರಬೇಕೆಂದು ಯೋಚಿಸಿದ್ದೀರಲ್ಲಾ” ಎಂದು ಕೇಳಿಬಿಟ್ಟ.

ಅಕ್ಬರ್ ಮನಸ್ಸಿನಲ್ಲೇ ಶಹಭಾಸ್ ಎಂದುಕೊಂಡು ಮರು ಮಾತಾಡದೆ ಐನೂರು ವರಹಗಳನ್ನು ನೀಡಿದ.

ಮೌನವಾಗಿಯೇ ಕೆಲಸ ಸಾಧಿಸುವುದು ಹೀಗೆ! ಏನಂತೀರಿ?

ಒಂದ್ನಿಮಿಷ ಪ್ಲೀಸ್…!
ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ ‘ಒಂದು ಕ್ಷಣ’ ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ?

ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ ಕ್ಷಣದ ನಿರ್ಧಾರ ತಪ್ಪಿದರೆ ಒಂದೋ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ, ಅಥವಾ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಜೀವನವಿಡೀ ಮನಸಾ ಸ್ಮರಿಸಿಕೊಳ್ಳುತ್ತಿರಬಹುದು.

ಇಂಥ ಈ ‘ಕಾಲ’ನ ಆ ಕ್ಷಣಕ್ಕೆ ಎಷ್ಟೊಂದು ಮಹತ್ವವಿದೆ. ಒಂದು ಕ್ಷಣ ತಡವಾದರೆ ರೈಲೋ, ವಿಮಾನವೋ, ಬಸ್ಸೋ ಕೈತಪ್ಪಿಹೋಗಬಹುದು.

ಅದೇ ರೀತಿ ಸಂಬಂಧಗಳೂ. ಅತ್ಯಂತ ಆತ್ಮೀಯರಾದಾಗ ಸಲುಗೆ ಸಹಜವಾಗಿಯೇ ಬೆಳೆಯುತ್ತದೆ. ಆ ಸಲುಗೆಯಿಂದಾಗಿಯೇ ಲೋಕಾಭಿರಾಮ ಹರಟೆ, ಕಷ್ಟ ಸುಖ ಹಂಚಿಕೆ ಸಂದರ್ಭದಲ್ಲಿ ಒಂದು ಕ್ಷಣ ಮೈಮರೆತೋ ಅಥವಾ ಅತಿ ಸಲುಗೆಯಿಂದಲೋ ಒಂದು ಮಾತು ನಮ್ಮ ಬಾಯಿಯಿಂದ ಉದುರಿದರೆ ಅನಾಹುತವೇ ಆಗಿ ಹೋದೀತು. ಆ ಮಾತನ್ನು ಆತ್ಮೀಯರು ಅಪಾರ್ಥ ಮಾಡಿಕೊಂಡರೆ, ಸಂಬಂಧ ಕೆಡುತ್ತದೆ. ಇದಕ್ಕೆ ಬೆಸುಗೆ ಹಾಕಿ ಜೋಡಿಸುವುದು ಒಂದು ನಿಮಿಷದಲ್ಲಿ ಖಂಡಿತಾ ಸಾಧ್ಯವಿಲ್ಲ. ಅಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿದ್ದ ಆತ್ಮೀಯತೆ ಕರಗಿ ನೀರಾಗಿ ಹೋಗಲು ಆ ಒಂದು ಕ್ಷಣವಷ್ಟೇ ಸಾಕಲ್ಲವೇ? ಅದೇ ರೀತಿ ಎಷ್ಟೋ ವರ್ಷಗಳ ಕಠಿಣ ಪರಿಶ್ರಮದ ಫಲವೆಲ್ಲಾ ನಾಶವಾಗಲೂ ಇಂಥದ್ದೇ ಒಂದು ಕ್ಷಣ ಸಾಕಲ್ಲವೇ?

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದು ಪ್ರಸ್ತುತವಾಗುವುದು ಈ ಕ್ಷಣದಲ್ಲಿಯೇ. ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾಯಕಕ್ಕೆ ಎಷ್ಟು ಕಾಲ ತಗುಲುತ್ತದೆಯೋ, ಆ ಬೆಸುಗೆ ಮುರಿದು ಬೀಳಲು ಒಂದು ಕ್ಷಣ ಸಾಕು.

ಅದೇ ರೀತಿ ಆ ಕ್ಷಣದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಬಿಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಒಂದು ಕ್ಷಣವೇ ತಳಹದಿಯಾಗುತ್ತದೆ.

ಎಲ್ಲರ ಬಾಯಲ್ಲೂ ಹರಿದಾಡುತ್ತಾ ಹರಿದಾಡುತ್ತಾ ಈಗ ಅರ್ಥ ಕಳೆದುಕೊಂಡಂತಾಗಿರುವ ಅಥವಾ ಬಾಯಿಮಾತಿಗಷ್ಟೇ ಸೀಮಿತವಾಗಿಬಿಟ್ಟಿರುವ ‘ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ’ ಎಂಬ ಉಕ್ತಿಯೂ ಇದನ್ನೇ ಅಲ್ಲವೇ ಹೇಳಿದ್ದು? ಸಣ್ಣ ಮಕ್ಕಳಿಗೆ ಗಾದೆ ಮಾತು ಎಂಬ ಕಾರಣಕ್ಕೆ ಇದನ್ನು ಶಾಲೆಗಳಲ್ಲಿ ಹೇಳಿಕೊಟ್ಟಿರುತ್ತಾರೆ. ಆದರೆ ಅದು ಗಾದೆ ಮಾತು ಎಂಬ ಅಂಕ (Mark) ತಂದುಕೊಡುವ ವಾಕ್ಯವಾಗುತ್ತದೆಯೇ ಹೊರತು, ಈ ಮಕ್ಕಳಿಗೆ ಅದರ ಅರ್ಥ ಗ್ರಹಿಸಿಕೊಳ್ಳಬಲ್ಲ ರೀತಿಯಲ್ಲಿ ಬೋಧಿಸಲಾಗುವುದಿಲ್ಲ. ಆದರೆ ಮುಂದೆ ಜೀವನ ರೂಪಿಸಲು, ಜೀವನದಲ್ಲಿ ಔನ್ನತ್ಯ ಸಾಧಿಸಲು, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎರಡೆರಡು ಬಾರಿ ಯೋಚನೆ ಮಾಡಲು ಇದೇ ವಾಕ್ಯವೇ ತಳಹದಿಯಾಗುತ್ತದೆ ಎಂಬುದು ಈ ಮಕ್ಕಳಿಗೇನು ಗೊತ್ತಿರುತ್ತದೆ?

ಅವರಿಗೆ ಬುದ್ಧಿ ತಿಳಿದಾಗಲೊಂದು ದಿನ ‘ಹೌದು, ಇಂಥ ವಾಕ್ಯ ಬರೆದು ನನಗೆ ಇಂತಿಷ್ಟು ಅಂಕ ಬಂದಿದೆ’ ಎಂದಷ್ಟೇ ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದರ ಅರ್ಥ ಗ್ರಹಿಸಿರುವುದಿಲ್ಲ.

ಒಂದು ಅರೆಕ್ಷಣದಲ್ಲಿ ನಾವು ಕೈಗೊಳ್ಳುವ ನಿರ್ಧಾರವು ಹೇಗೆ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತವೋ, ಅದೇ ರೀತಿ ಒಂದರೆಕ್ಷಣ ಮೈಮರೆತು ನಾವು ಆಡಿದ ನುಡಿಗಳೋ, ಮಾಡಿದ ಕೃತ್ಯಗಳೋ ಜೀವನದ ಬಂಡಿಯ ಗಾಲಿಯನ್ನು ಎತ್ತೆತ್ತಲೋ ತಿರುಗಿಸಿಬಿಡಬಹುದಲ್ಲಾ…

ಆದಕಾರಣ, ‘ಒಂದ್ನಿಮಿಷ ಪ್ಲೀಸ್’ ಅನ್ನೋದು ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮ ಜತೆಗಿರಲಿ. ಕೋಪಾವಿಷ್ಟರಾಗಿದ್ದಾಗಲೂ ಒಂದ್ನಿಮಿಷ ಪ್ಲೀಸ್ ಅಂದ್ಬಿಡಿ. ಬದಲಾವಣೆ ನೋಡಿ!

ಅಮ್ಮ ನೀನು ನಕ್ಕರೆ, ನಮ್ಮ ಬಾಳು ಸಕ್ಕರೆ!
ಸಪ್ತಸಾಗರ ದಾಟಿ ಹುಡುಕಾಡಿದರೂ ಬೇರೊಬ್ಬರಿಗೆ ನಿನ್ನಂತಹ ಅಮ್ಮ ದೊರೆಯುವುದು ಖಂಡಿತಾ ಸಾಧ್ಯವಿಲ್ಲ!

ಈ ಮೇಲಿನ ವಾಕ್ಯವನ್ನು ಮಗದೊಮ್ಮೆ ಯೋಚಿಸಿ ನೋಡಿ. ಹೌದಲ್ವಾ… ಅಮ್ಮ ಎಂಬುದೊಂದು ಯುನೀಕ್ ಐಡೆಂಟಿಟಿ. ಬಹುಶಃ ದೇವರು ಕೂಡ ಆ ಅಮ್ಮನಿಗೆ ಸಾಟಿಯಲ್ಲ ಎಂದರೂ ತಪ್ಪಾಗಲಾರದು.

ಬದುಕಿನ ತಲ್ಲಣಗಳ ನಡುವೆ ಪ್ರತಿಯೊಂದು ಕ್ಷಣ ಪಾತ್ರ ಬದಲಿಸುತ್ತಾ, ಅಮ್ಮನಾಗಿ, ಅನಿವಾರ್ಯತೆ ಬಂದಾಗ ಅಪ್ಪನಾಗಿಯೂ, ಅಕ್ಕನಾಗಿ, ಮಗಳಾಗಿ, ತಂಗಿಯಾಗಿ, ಅಪ್ಪನ ಸಿಡುಕಿನ ನಡುವೆ ಮಗುವಿಗೆ ಗೆಳತಿಯಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಕರುಣಾಮಯಿ ಮಾತೆಗೆ, ಸದಾ ಇನ್ನೊಬ್ಬರ ಏಳಿಗೆಗಾಗಿಯೇ ಶ್ರೀಗಂಧದಂದದಲಿ ಜೀವ ಸವೆಸುವ ಅಮ್ಮನಿಗೆ ತನ್ನದೇ ಅಂತ ಒಂದು ದಿನವಾದರೂ ಬೇಡವೇ? ಬಹುಶಃ ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮನಿಗಾಗಿ ಮೀಸಲಿಡುವ ಕಲ್ಪನೆ ಮೊಳಕೆಯೊಡೆದದ್ದು ಇದೇ ಕಾರಣಕ್ಕೆ. ಅಮ್ಮಂದಿರಿಗಾಗಿಯೇ ಮೀಸಲಾದ ಈ ದಿನ ಆ ಮಹಾ ಮಮತಾಮಯಿ ಮಾತೆಗೆ ಅಕ್ಕರೆಯ ಅಕ್ಷರಾಂಜಲಿ.

ಹೌದು. ಅನಿವಾರ್ಯತೆ ಎಂಬುದೊಂದಿದೆಯಲ್ಲ, ಅದುವೇ ಅದೆಷ್ಟೋ ಮಂದಿಯ ಜೀವನದ ಜಂಜಡಗಳಿಗೆ, ಸಾಹಸಕ್ಕೆ, ಛಲಕ್ಕೆ ಮೂಲ ಹೇತು. ಅಂಥ ಸಂದರ್ಭ ಬಂದಾಗ ಹೆತ್ತ ಕರುಳ ಕುಡಿಯನ್ನು ಹೊತ್ತು ಸಲಹಲು, ಅದು ಮುಂದೆ ಔನ್ನತ್ಯಕ್ಕೇರಲು ಆ ಮಹಾತಾಯಿ ಬದುಕಿನ ಎಲ್ಲ ಕಾಠಿಣ್ಯಗಳನ್ನೂ ಸಹಿಸಿಕೊಳ್ಳಬಲ್ಲಳು. ಅಮ್ಮನೆಂಬ ದೇವತೆ ಎಲ್ಲವೂ ಆಗಬಲ್ಲಳು.

ನಾವು ನಡೆಯುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಆ ಅಮ್ಮ ಬಾಳ ದೀವಿಗೆಯಾಗುತ್ತಾಳೆ, ಅಥವಾ ಆಕೆ ಹಾಕಿಕೊಟ್ಟ ಹೂವಿನ ಹಾಸು ನಮಗೆ ದಾರಿ ದೀವಿಗೆಯಾಗುತ್ತದೆ. ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಆ ಅಮ್ಮನೆಂಬ ತ್ಯಾಗಮಯಿಯ ಬೆವರು, ಕಣ್ಣೀರು, ರಕ್ತವಿರುತ್ತದೆ, ಆ ಕರುಣಾಮಯಿಯ ಛಾಪು ಖಂಡಿತಾ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮಗು ಮುಂದೆ ಚೆನ್ನಾಗಿ ಬೆಳೆದು ಸಮಾಜದಲ್ಲಿ ಗೌರವಯುತವಾಗಿ ಬಾಳುವಂತಾಗಬೇಕೆಂಬ ಅದಮ್ಯ ತುಡಿತವಿರುತ್ತದೆ.

ನಾವು ಇಂದು ಜೀವನದಲ್ಲಿ ನಮ್ಮ ಕಾಲ ಮೇಲೆ ನಿಲ್ಲುವಂತಾಗಲು, ಸನ್ಮಾರ್ಗದಲ್ಲಿ ಸಾಗಿ ಜೀವನದ ನದಿಯಲ್ಲಿ ಯಶಸ್ವೀ ಈಜುಗಾರರಾಗುವಂತಾಗಲು, ನಮ್ಮೆಲ್ಲ ಯಶಸ್ಸು, ಕೀರ್ತಿ, ಸಾಧನೆಗಳ ಕ್ರೆಡಿಟ್ಟು ಸಲ್ಲಬೇಕಾಗಿದ್ದೆಲ್ಲವೂ ಅಮ್ಮನಿಗೆ. ಮಕ್ಕಳ ನೋವುಗಳಿಗೆ ಕಿವಿಯಾಗುವ, ನಲಿವುಗಳಿಗೆ ದನಿಗೂಡಿಸುವ, ಕರುಳ ಕುಡಿ ನಕ್ಕಾಗ ಅಕ್ಕರೆಯಿಂದ ಸಂಭ್ರಮಿಸುವ, ಮುಖ ಬಾಡಿಸಿದಾಗ ಒಳಗೊಳಗೇ ಮುದುಡುವ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ? ಆಕೆ ಹರಿಸುವ ವಾತ್ಸಲ್ಯದ ಸಾಗರದಲ್ಲಿ ಮಿಂದೇಳುವುದು ಅನಿರ್ವಚನೀಯ ಆನಂದದಾಗರ.

ಮಾತೇ ಮೌನವಾಗುವ ಅಮ್ಮ, ಒಮ್ಮೊಮ್ಮೆ ಮೌನವೇ ಮಾತಾಗುವ ಅಮ್ಮ. ಆದರೆ ಅಮ್ಮ ಅಮ್ಮನೇ. ಆಕೆ ಹರಿಸುವ ನಿರ್ವ್ಯಾಜ ಪ್ರೇಮ, ಅಕಳಂಕ ಪ್ರೀತಿಯ ಧಾರೆ… ಅದಕ್ಕೆ ಎಂದಾದರೂ ಸಾಟಿಯುಂಟೇ? ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳ ಮರೆಯಬೇಡ ಎಂಬ ನಾಣ್ಣುಡಿ ಹುಟ್ಟಿಕೊಂಡದ್ದಕ್ಕೆ ಕಾರಣ ಹುಡುಕುವ ಬದಲು, ಈ ನಾಣ್ಣುಡಿಯ ಅಗತ್ಯವೇ ಇಲ್ಲವೆಂಬಷ್ಟರ ಮಟ್ಟಿನ ಕ್ಷಮಯಾಧರಿತ್ರಿ ಅಮ್ಮ. ಇದು ಅಲಂಕಾರಿಕ ವಾಕ್ಯವಲ್ಲ. ಸದಾ ಮಗನ ಒಳಿತಿಗಾಗಿ ಹಂಬಲಿಸುವ ತಾಯಿಮನದ ಸಾರಸರ್ವಸ್ವವೇ ಸಾಲಿನಲ್ಲಿದೆ.

ಬದುಕಿನ ಯಾವುದೋ ಒಂದು ಹಂತದಲ್ಲಿ, ಮ್ಲಾನವದನರಾಗಿ ಯೋಚಿಸುತ್ತಾ, ನನ್ನ ಬಳಿ ಏನಿದೆ ಅಂತ ಒಂದು ಕ್ಷಣ ಯೋಚಿಸಿದರೆ ಥಟ್ಟಂತ ನೆನಪಾಗುವುದು – ಮೇರೇ ಪಾಸ್ ಮಾ ಹೈ ಎಂಬ ವಾಕ್ಯವೇ ಅಲ್ಲವೇ?

ಈ ಭೂಮಿಯಲ್ಲಿ ಒಳ್ಳೆಯವರಿರುತ್ತಾರೆ, ಕೆಟ್ಟವರು, ಕೊಲೆಗಡುಕರು, ಅಪರಾಧಿಗಳು ಇರುತ್ತಾರೆ. ಆದರೆ ಭೂಮಿ ತಾಯಿ ಕೆಟ್ಟವಳು ಎಂದು ದೂಷಿಸುತ್ತಾರೆಯೇ? ಅದಕ್ಕೇ ಹೇಳುವುದು ಅಮ್ಮ ಕ್ಷಮಯಾ ಧರಿತ್ರಿ ಅಂತ. ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರುವುದು ಸಾಧ್ಯವೇ ಇಲ್ಲ. ತಾಯಿ ಬರೇ ತಾಯಿಯಲ್ಲ, ಆಕೆ ಎಲ್ಲ ರೀತಿಯ ಪಾಪ ಕರ್ಮಗಳಿಗೆ ಈಡಾಗಿಯೂ, ದೌರ್ಜನ್ಯಕ್ಕೆ ತುತ್ತಾಗಿಯೂ, ಅವನ್ನೆಲ್ಲಾ ಒಡಲೊಳಗೆ ಅದುಮಿಕೊಂಡು, ಹೊರಗೆ ಕಳೆಗಟ್ಟುವ ಭೂಮಿ ತಾಯಿಯಂತೆ ಕ್ಷಮಾಗುಣಸಾಗರಿ.

ಬದುಕಿನಲ್ಲಿ ಯಾವುದೇ ಯಶಸ್ಸಿನ ಮೆಟ್ಟಿಲೇರಿದರೂ, ಅಮ್ಮನ ಕೈಯಡುಗೆಯ ಸವಿಯನ್ನು ಮರೆಯಲಾದೀತೇ? ಊರಿಗೆ ಅರಸನಾದರೂ ತಾಯಿಗೆ ಆತ ಮಗನೇ ಸೈ. ಮಗು ತಿಂದನೇ, ಕುಡಿದನೇ, ಸರಿಯಾಗಿ ಸಕಾಲಕ್ಕೆ ನಿದ್ದೆ ಮಾಡಿದನೇ, ಉದ್ಯೋಗ ಕ್ಷೇತ್ರದಲ್ಲಿ ಎಷ್ಟು ಒತ್ತಡಗಳಿರುತ್ತವೆಯೋ ಏನೋ ಎಂದು ಬೆಳೆದ ತನ್ನ ಕಾಲ ಮೇಲೆ ನಿಂತ ಮಗನಲ್ಲಿಯೂ ತಾನು ಎತ್ತಿಯಾಡಿಸಿದ ಮಗುವನ್ನೇ ಕಾಣುವ, ಅವನಿಗ್ಯಾವುದೇ ಒತ್ತಡಗಳಿರಬಾರದು ಎಂದು ನೋಡಿಕೊಳ್ಳುವ, ಸದಾ ಹಾರೈಸುವ, ಮಸುಕಿದೀ ಮಬ್ಬಿನಲಿ ಕೈಹಿಡಿದು ಮುನ್ನಡೆಸುವ ಮಮತಾಮಯಿ ಈ ತಾಯಿ.

ರಾತ್ರಿ ತಡವಾಗಿ ಬಂದರೆ, ನಿದ್ದೆ ಹಾಳಾಯಿತೆಂದು ಮುನಿಸಿಕೊಳ್ಳದೆ ಬಾಗಿಲು ತೆಗೆದು, ಮಗು ಸುಸ್ತಾಗಿರಬಹುದು ಅಂತ ಆರೈಕೆ ಮಾಡುವ ಕೈಗಳು, ಪರೀಕ್ಷೆ ಬಂದಾಗ ಕರುಳ ಕುಡಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಪ್ರತಿದಿನ ಬೆಳಗ್ಗೆ ಅಲಾರಂನಂತೆ ಪ್ರೀತಿಯಿಂದ ಎಬ್ಬಿಸುವ ಕೈಗಳು, ಪರೀಕ್ಷೆಯ ಫಲಿತಾಂಶ ದಿನದಂದು ಮಗನಿಗಿಂತ ಹೆಚ್ಚು ತಳಮಳಗೊಳ್ಳುವ, ಮಗ ಮಾಡಿದ ಸಾಧನೆಗೆ ‘ಇದಕ್ಕೆಲ್ಲ ನಾನೇ ಕಾರಣ’ ಎಂದು ಎಂದಿಗೂ ಕ್ರೆಡಿಟ್ ತೆಗೆದುಕೊಳ್ಳಲು ಎಳಸದ ಮನಸ್ಸು, ಕರುಳ ಕುಡಿಯ ಹೃದಯ ನುಚ್ಚುನೂರಾಗಿ, ಆಕಾಶವೇ ಕಳಚಿ ಬಿದ್ದಂತೆ ಆದಾಗ, ತನಗೆ ತಲೆಬುಡ ತಿಳಿಯದಿದ್ದರೂ ಮಗುವಿಗೇನೋ ಆಗಿದೆ ಅಂತ ತಲೆ-ಮನಸ್ಸು ನೇವರಿಸುವ, ಸಾಂತ್ವನಗೈಯುವ ಈ ಅಮ್ಮನಿಗೆ, ಮಗುವಿನ ಮನಸ್ಸು ಕಣ್ಣರಿಯದಿದ್ದರೂ ಕರುಳರಿಯದೇ? ಆಕೆಯ ಆ ಹಂಬಲ, ಆಕಾಂಕ್ಷೆ, ಸ್ವಾರ್ಥವಿಲ್ಲದ ಮಹದಾಸೆಯೇ ಆ ಮಗುವಿನ ಉನ್ನತಿಗೆ ಮೂಲಾಧಾರವಾಗುತ್ತದೆ, ಪ್ರೇರಣೆಯಾಗುತ್ತದೆ, ಚೈತನ್ಯವೂ ಆಗುತ್ತದೆ.

“ಒಬ್ಬ ಗಂಡಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿ ಸುಶಿಕ್ಷಿತನಾದಂತೆ, ಆದರೆ ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸುಶಿಕ್ಷಿತವಾದಂತೆ” ಎಂಬ ಮಾತು ಸುಮ್ಮನೇ ಹೇಳಿದ್ದಲ್ಲ. ಮಗುವಿನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುವವಳು ತಾಯಿ. ಆದರೆ ಆಕೆಯ ಕೈಗಳನ್ನು ಕಟ್ಟಿ ಹಾಕಿದರೂ, ಅವರಿವರಿಂದ ಕೇಳಿ ತಿಳಿದುಕೊಂಡು, ತನ್ನ ಮಗು ದೊಡ್ಡವನಾಗಬೇಕೆಂಬ ಹಂಬಲ, ತುಡಿತ ಸದಾ ಆಕೆಯ ಮನದೊಳಗಿರುತ್ತದೆ.

ಅಂಥದ್ದೊಂದು ಅಮ್ಮನೆಂಬ ಅಮ್ಮನನ್ನು ಪಡೆದ ನಾವೆಷ್ಟು ಧನ್ಯರು!

(ವೆಬ್‌ದುನಿಯಾ)

ಕೋಮುವಾದಿಗಳು, ಜಾತ್ಯತೀತರು ಮತ್ತು ಪಕ್ಷಾಂತರಿಗಳು!
ರಾಜಕೀಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ, ಅತ್ಯಂತ ಹೆಚ್ಚು ಟೀಕೆಗೆ, ನಿಂದನೆಗೆ, ವ್ಯಂಗ್ಯಕ್ಕೆ, ದೂಷಣೆಗೆ, ಛೀ-ಥೂಗಳಿಗೆ ಗುರಿಯಾಗಿದ್ದ ಸಂಪ್ರದಾಯವೊಂದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅದೇ ಪಕ್ಷಾಂತರ. ಅಲ್ಲಿಂದಿಲ್ಲಿಗೆ ಜಿಗಿಯುತ್ತಾ ರಾಜಕೀಯದಲ್ಲಿ ಪಕ್ಷ-ಸಿದ್ಧಾಂತಗಳೆಲ್ಲ “ಹೇಳಲು ಮಾತ್ರ” ಎಂಬ ಭಾವನೆ ಮೂಡಿಸುವಲ್ಲಿ ಈ ಪಕ್ಷಾಂತರಿಗಳ ಪಾತ್ರ ಮಹತ್ವದ್ದು. ಯಾವ ರಾಜಕೀಯ ಪಕ್ಷದಲ್ಲಿಯೂ ತತ್ವ ಸಿದ್ಧಾಂತಗಳೆಂಬ ಪದಗಳಿಲ್ಲ, ರಾಜಕೀಯ ಕ್ಷೇತ್ರವು “ವಸುಧೈವ ಕುಟುಂಬಕಂ” ಎಂಬಂತೆ. ಎಲ್ಲರೂ ಇಲ್ಲಿ ಒಂದೇ, ಜಾತಿ-ಮತ ಭೇದಗಳಿಲ್ಲ. ತಪ್ಪು-ಒಪ್ಪುಗಳ ಮಧ್ಯೆ ವ್ಯತ್ಯಾಸವಿಲ್ಲ, ಪ್ರಾಮಾಣಿಕರು-ಅಪ್ರಾಮಾಣಿಕರಿಗೆ ಭಿನ್ನತೆ ಇಲ್ಲ, ಪಕ್ಷದ್ರೋಹಿಗಳು-ಪಕ್ಷ ನಿಷ್ಠರ ಮಧ್ಯೆ ಯಾವುದೇ ವೈಪರೀತ್ಯಗಳಿಲ್ಲ. ಇಂತದ್ದೊಂದು ಭಾವನೆ ಮತದಾರರ ಮನದಲ್ಲಿ ಅಚ್ಚಳಿಯದೆ ಮೂಡುವಂತಾಗಿದೆ.

ಮಾಜಿ ಮುಖ್ಯಮಂತ್ರಿ, ರಾಜ್ಯದಲ್ಲಿ ಹಲವು ಪಕ್ಷಗಳ ಮುಖಂಡರಾಗಿ ಮೆರೆದು ತಮ್ಮತನವನ್ನು ಕಾಯ್ದುಕೊಂಡ ಎಸ್.ಬಂಗಾರಪ್ಪ ಅವರ ಇತಿಹಾಸವೇ ನಮ್ಮ ಕಣ್ಣ ಮುಂದಿದೆ. ಕಾಂಗ್ರೆಸ್, ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಾರ್ಟಿ, ಬಿಜೆಪಿ, ಸಮಾಜವಾದಿ ಪಕ್ಷ… ಹೀಗೆ ಎಲ್ಲ ಪಕ್ಷಗಳಾಗಿ ಇದೀಗ “ಮತ್ತೊಂದು ಬಾರಿ” ಮರಳಿದ್ದಾರೆ ಕಾಂಗ್ರೆಸಿಗೆ. ಅವರ ವರ್ಣಮಯ ಅಲ್ಲಲ್ಲ ವೈವಿಧ್ಯಮಯ ರಾಜಕೀಯ ಜೀವನದ ತಿರುಳೇ ಅದು.

ಇಂಥದ್ದೇ ಸಂಪ್ರದಾಯಕ್ಕೆ ಹೆಚ್ಚು ಕಾವು ದೊರೆತಿದ್ದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಾಗ. ಅಧಿಕಾರಕ್ಕಾಗಿ ಅತ್ತಿಂದಿತ್ತ ಜಿಗಿಯುವ ಸಂಪ್ರದಾಯ ಅಂದಿನಿಂದ ಇಂದಿನವರೆಗೂ ‘ಆಪರೇಶನ್ ಕಮಲ’ ಹೆಸರಿನಲ್ಲಿ ಮುಂದುವರಿದಿದೆ. ಅಲ್ಲಿ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ಬಂದವರ ಮಧ್ಯೆ ತೀವ್ರ ಗೊಂದಲದಲ್ಲಿ ಸಿಲುಕಿರುವುದು ಕರ್ನಾಟಕದ ಮತದಾರರು. ಈಗಲೂ ಕೂಡ, ಚುನಾವಣಾ ಕಣದಲ್ಲಿರುವ ಹೆಚ್ಚಿನ ಮುಖ ಪರಿಚಯ ಮತದಾರರಿಗಿದೆ. ಆದರೆ “ಈಗ” ಯಾರು, ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಗೊಂದಲದ ಸಂಗತಿ. ಚುನಾವಣೆ ಸಮೀಪಿಸುತ್ತಿರುವಂತೆಯೇ ವಿಧಾನಸಭೆಗೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡುತ್ತಾ ಇರುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ.

ಕಟ್ಟಾ “ಜಾತ್ಯತೀತ”ವಾದಿಗಳು ನಾವು ಎಂದು ಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಕೆಲವೇ ಕ್ಷಣದ ಹಿಂದಿನವರೆಗೂ “ಕೋಮುವಾದಿ” ಎಂದು ತೆಗಳುತ್ತಿದ್ದ ಪಕ್ಷದಲ್ಲಿ ದಿಢೀರ್ ಆಗಿ “ಹಿರಿಯ ಮುಖಂಡ”ರಾಗಿಬಿಡುತ್ತಾರೆ! ಕಾಂಗ್ರೆಸಿಗೆ ಗುಡ್ ಬೈ ಹೇಳಿದ್ದ ಮತ್ತೆ ಕೆಲವರು, “ಕೋಮುವಾದಿ” ಪಕ್ಷ ಬದಲಾಗಲೇ ಇಲ್ಲ ಎನ್ನುತ್ತಾ ಮಾತೃಪಕ್ಷಕ್ಕೆ ಮರಳುವುದನ್ನು ಕೂಡ ಭರ್ಜರಿಯಾಗಿಯೇ ಆಚರಿಸಿಕೊಂಡುಬಿಡುತ್ತಾರೆ. ಜಾತ್ಯತೀತ ಜನತಾ ದಳವನ್ನು ‘ತಂದೆ ಮಕ್ಕಳ ಪಕ್ಷ’ ಎನ್ನುತ್ತಾ ದೂರುತ್ತಿದ್ದವರಿಗೆ, “ಮಣ್ಣಿನ ಮಕ್ಕಳ ಕಲ್ಯಾಣಕ್ಕೆ, ಅಲ್ಪಸಂಖ್ಯಾತರ ರಕ್ಷಣೆಗೆ ಇರುವ ಏಕೈಕ ಪಕ್ಷವಿದು” ಎಂಬುದು ದಿಢೀರ್ ಆಗಿ ‘ಹೊಳೆದು’ಬಿಡುತ್ತದೆ!

ಒಟ್ಟಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಂದಾಗಿ ತತ್ವ-ಸಿದ್ಧಾಂತವುಳ್ಳ ನಿಷ್ಠಾವಂತ ನಾಯಕರ ಕೊರತೆ ಎದ್ದುಗಾಣುತ್ತಿದೆ. ಈ ಜಿಗಿತಗಾರರನ್ನು ಅತೀ ಹೆಚ್ಚು ಬುಟ್ಟಿಗೆ ಹಾಕಿಕೊಂಡಿದ್ದೆಂದರೆ ಆಡಳಿತಾರೂಢ ಬಿಜೆಪಿ. ಬೇರೆ ಪಕ್ಷಗಳ ಹಲವು ಶಾಸಕರು ತಮ್ಮ ಶಾಸಕತ್ವವನ್ನು ತೊರೆದು, ಬಿಜೆಪಿ ಸೇರಿ, ಬಿಜೆಪಿ ಟಿಕೆಟಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ, ಸ್ಪರ್ಧಿಸಲು ಹವಣಿಸುತ್ತಿದ್ದಾರೆ ಮತ್ತೆ ಕೆಲವರು ಲೋಕಸಭೆ ಟಿಕೆಟಿಗಾಗಿಯೂ ಈ ಹೈಜಂಪ್ ಮಾಡಿದ್ದಾರೆ. ಬಿಜೆಪಿ ಕೈಯಲ್ಲಿ ರಾಜ್ಯದಲ್ಲಂತೂ ಅಧಿಕಾರವಿದೆ, ರಾಷ್ಟ್ರದಲ್ಲಿಯೂ ಏನಾದರೂ ಇದೇ ರೀತಿ ಸಿಕ್ಕಿಬಿಟ್ಟರೆ ಎಂಬ ಆಶಾವಾದದಿಂದ ಈ ‘ಹೈಜಂಪರ್’ಗಳು ಬಿಜೆಪಿಯತ್ತ ಹೆಚ್ಚು ಹೆಚ್ಚು ಹಾರುತ್ತಿದ್ದಾರೆ.

ಅತ್ತ ಕಡೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಕೂಡ ಈ ರೀತಿಯಲ್ಲಿ “ಕೊಡು-ಕೊಳ್ಳುವಿಕೆ” ನಡೆದಿದೆ. ಅಲ್ಲಿ ಅಸಮಾಧಾನಗೊಂಡವರು ಇಲ್ಲಿಗೆ, ಇಲ್ಲಿ ಕೋಪಗೊಂಡವರು ಅಲ್ಲಿಗೆ ಲಾಂಗ್ ಜಂಪ್ ಕೈಗೊಂಡಿದ್ದಾರೆ.

ಅದರಲ್ಲಿ ತೀರಾ ಅಚ್ಚರಿ ಹುಟ್ಟಿಸುವಂತಹ ಕೆಲವು ಹೈ ಜಂಪ್‌ಗಳು ಕೂಡ ಇವೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸ್ಪರ್ಧಿಸಿ ಜಯಗಳಿಸಿದ್ದ ಬಂಗಾರಪ್ಪ, ಮತ್ತೆ ಸಮಾಜವಾದಿಯೂ ಆಗಿ ಸಂಸದರಾಗಿ, ಇದೀಗ ಮತ್ತೆ ಕಾಂಗ್ರೆಸ್ ಸಂಸದರಾಗಲು ಹವಣಿಸುತ್ತಿದ್ದಾರೆ.

ಇನ್ನು, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ನೆಲಕಚ್ಚಿದ್ದಾಗ 1978ರ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಗಾಗಿ “ಸುರಕ್ಷಿತ ನೆಲೆ” ರೂಪದಲ್ಲಿ ಚಿಕ್ಕಮಗಳೂರು ಕ್ಷೇತ್ರ ತೆರವುಗೊಳಿಸಿದ್ದ, “ನಿಷ್ಠಾವಂತ ಕಾಂಗ್ರೆಸಿಗ”, ರಾಜ್ಯದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಈಗ ಬಿಜೆಪಿ ಅಭ್ಯರ್ಥಿ! ಅವರು ಎದುರುಹಾಕಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರನ್ನು. ಇತ್ತೀಚೆಗೆ ಶರೀಫ್ ಕೂಡ ಪಕ್ಷ ಬದಲಿಸುತ್ತಾರೆ ಎಂಬ ಊಹಾಪೋಹಗಳಿದ್ದದ್ದಂತೂ ನಿಜ.

ಬಿಜೆಪಿಯ ರಣಾಂಗಣಕ್ಕೆ ಹೊಸ ಸೇರ್ಪಡೆ ಎಂದರೆ ಮಾಜಿ ಶಾಸಕ, ಕಾಂಗ್ರೆಸಿಗ ವಿ.ಸೋಮಣ್ಣ. ಅವರ ಜಂಪಿಂಗ್ ಇತಿಹಾಸವೂ ತೀರಾ ದೊಡ್ಡದು. ಜನತಾ ಪಾರ್ಟಿ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಅವರು, ಆ ಬಳಿಕ ಸಮಾಜವಾದಿ ಜನತಾ ದಳ ಸೇರಿದ್ದರು. ನಂತರ ಎಚ್.ಡಿ.ದೇವೇಗೌಡರನ್ನು ‘ಅಪ್ಪಾಜಿ’ ಎಂದೆ ಕರೆಯುತ್ತಿದ್ದ ಸೋಮಣ್ಣ ಜನತಾ ದಳದಲ್ಲಿ ಸುದೀರ್ಘ ಕಾಲ ಇದ್ದರು, ಮಂತ್ರಿಯೂ ಆದರು. 2000ರಲ್ಲಿ ದೇವೇಗೌಡರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು.

ಚಂದ್ರೇಗೌಡ ಅವರೊಂದಿಗೆ ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಸಚಿವ ಎಲ್.ಶಿವರಾಮೇಗೌಡರಿಗೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕಿದೆ. ಅಲ್ಲಿ ಅಂಬರೀಶ್ ಅವರು ಕಾಂಗ್ರೆಸ್ ಹಾಲಿ ಸಂಸದರಾಗಿದ್ದು, ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿತ್ತು.

ಉತ್ತರ ಕರ್ನಾಟಕದ ಕಾಂಗ್ರೆಸ್ ನೇತಾರರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಕೂಡ ಜೆಡಿಎಸ್‌ನಲ್ಲಿಯೂ ಅಧಿಕಾರದ ಸವಿಯುಂಡವರು. ಈಗ ಬಿಜೆಪಿ ತೆಕ್ಕೆಯಲ್ಲಿ ಸೇರಿಕೊಂಡಿದ್ದಾರೆ ಮತ್ತು ಬೀದರಿನಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಎಂ.ಧರ್ಮ ಸಿಂಗ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಮಗ ಸೂರ್ಯಕಾಂತ ನಾಗಮಾರಪಲ್ಲಿ ಕೂಡ ಬೀದರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ

ಇನ್ನುಳಿದಂತೆ, ಕಾಂಗ್ರೆಸ್ ಮತ್ತು ವಿಧಾನಸಭಾ ಸದಸ್ಯತ್ವ ತ್ಯಜಿಸಿ ಬಿಜೆಪಿ ತೆಕ್ಕೆಗೆ ಬಂದವರೆಂದರೆ ನಟ, ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಿ.ಪಿ.ಯೋಗೇಶ್ವರ್. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನ ಲೋಕಸಭಾ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹಾಲಿ ಸಂಸದೆ ತೇಜಸ್ವಿನಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ವಿಶೇಷವೇನೆಂದ್ರೆ, ಇದೇ ಯೋಗೇಶ್ವರ್ ಬೆಂಗಳೂರು ಹೊರವಲಯದ ಮೆಗಾ ಸಿಟಿ ಯೋಜನೆಯಲ್ಲಿ ಫ್ಲ್ಯಾಟ್ ನೀಡುವುದಾಗಿ ಜನರನ್ನು ನಂಬಿಸಿ ವಂಚಿಸಿದ್ದಾರೆ ಎಂದು ಇದೇ ಬಿಜೆಪಿಯು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ಈಗ ಎಲ್ಲವೂ ಠುಸ್.

ಬಿಜೆಪಿಯಿಂದ ಕಾಂಗ್ರೆಸ್ ತೆಕ್ಕೆಗೆ ಜಾರಿಕೊಂಡಿದ್ದೆಂದರೆ ಬೆಂಗಳೂರಿನ ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಸಂಸದರೂ ಆಗಿದ್ದ ಎಚ್.ಟಿ.ಸಾಂಗ್ಲಿಯಾನ. ಬೆಂಗಳೂರು ಉತ್ತರದಲ್ಲಿ ಅವರು ಬಿಜೆಪಿ ಟಿಕೆಟಿನಲ್ಲಿ ಕಳೆದ ಬಾರಿ ಸ್ಪರ್ಧಿಸಿ ಜಯಿಸಿದ್ದರು. ಆ ನಂತರ ಸಮಾಜವಾದಿ ಪಕ್ಷದಿಂದ ಮರಳಿ ಗೂಡಿಗೆ ಬಂಗಾರಪ್ಪ ಬಂದಿದ್ದು, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಪುತ್ರ, ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಆದರೆ ಜೆಡಿಎಸ್‌ಗೆ ಹೇಳಿಕೊಳ್ಳಬಹುದಾದ ಬಲಾಢ್ಯ ನಾಯಕರು ಯಾರೂ ವಲಸೆ ಬಂದಿಲ್ಲ. ಸಣ್ಣ ಪುಟ್ಟ ಮುಖಂಡರು ಅಲ್ಲಲ್ಲಿ ಸೇರಿಕೊಂಡಿದ್ದಾರಷ್ಟೆ.

ಜನರ ಹಣವನ್ನು ಅಷ್ಟೊಂದು ಪ್ರಮಾಣದಲ್ಲಿ ಖರ್ಚು ವೆಚ್ಚ ಮಾಡಿ, ಚುನಾವಣೆ ನಡೆಸಿ ಆರಿಸಿ ಕಳುಹಿಸಿದರೆ, ಇವರೆಲ್ಲರೂ ಸುಲಭವಾಗಿ ಪಕ್ಷಕ್ಕೆ, ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ, ಮರಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಾರೆ. ಅದಕ್ಕೆ ಮತ್ತಷ್ಟು ತೆರಿಗೆದಾರರ ಹಣ! ಕಳೆದ ಬಾರಿ ಎಂಟು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಬೇಕಾಯಿತು. ಈ ವರ್ಷದಲ್ಲಿ ಇನ್ನೆಷ್ಟು ಉಪ ಚುನಾವಣೆಗಳು ನಡೆಯಬೇಕೋ… ತೆರಿಗೆದಾರರ ಹಣ ಇದಕ್ಕಾಗಿ ವ್ಯರ್ಥ ಮಾಡಬೇಕೋ… ಬಲ್ಲವರಾರು?

ಇಷ್ಟಕ್ಕೂ ಬಿಜೆಪಿಯಿಂದ ಹೋಗಿ ಕಾಂಗ್ರೆಸ್ಸೋ, ಜೆಡಿಎಸ್ಸೋ ಸೇರಿಕೊಂಡು ಮರಳಿ ಬಿಜೆಪಿಗೆ ಬಂದವರು ಎಂಥೆಂಥ ದ್ರೋಹಗಳನ್ನು ಮಾಡಿಹೋಗಿದ್ದಾರೆ! ಅಂಥವರನ್ನು ಬಿಜೆಪಿ ಕೂಡ ಕ್ಷಮಿಸಿ ‘ಕ್ಷಮಯಾಧರಿತ್ರಿ’ ಅನ್ನಿಸಿಕೊಂಡು ಒಪ್ಪಿಕೊಂಡುಬಿಟ್ಟಿದೆ, ಅಪ್ಪಿಕೊಂಡುಬಿಟ್ಟಿದೆ.

ಒಟ್ಟಿನಲ್ಲಿ ಇವರು ಇಂತಹ ಪಕ್ಷ ಎಂದುಕೊಂಡು ಯಾರು ಕೂಡ ಮತ ಹಾಕದ ಪರಿಸ್ಥಿತಿ. ಜನ ನೋಡಿ ಮತಹಾಕಲು ಅಥವಾ ಅವರ ಕೆಲಸ ನೋಡಿ ಮತ ಹಾಕಲು ಇದು ಮತದಾರರಿಗೆ ಸಕಾಲ ಎಂದಷ್ಟೇ ತೃಪ್ತಿಪಟ್ಟುಕೊಳ್ಳಬಹುದು. ಯಾರು ಯಾವ ಪಕ್ಷದಲ್ಲಿದ್ದಾರೆ ಎಂದು ಹೇಳುವುದೇ ಕಷ್ಟವಾದಂತಹ ಪರಿಸ್ಥಿತಿ. ಒಟ್ಟಿನಲ್ಲಿ ಮತದಾರನಿಗೆ ಕೋಮುವಾದಿಗಳು ಯಾರು, ಜಾತ್ಯತೀತರು ಯಾರು, ಪಕ್ಷಾಂತರಿಗಳು ಯಾರು ಎಂದು ಪತ್ತೆ ಹಚ್ಚುವ, ಮೆದುಳಿಗೆ ಮೇವು, ಮೇಧಾಶಕ್ತಿಗೆ ಕಸರತ್ತು ನೀಡುವ ಅತ್ಯುತ್ತಮ ಪಝಲ್ ಗೇಮ್ ಈ ಬಾರಿಯ ಚುನಾವಣೆ!

(ವೆಬ್‌ದುನಿಯಾದಲ್ಲಿ ಪ್ರಕಟ)

ದಕ್ಷಿಣೆ-ವರದಕ್ಷಿಣೆ
ದಕ್ಷಿಣೆ

ಆತ ನಗ ತಾರದಿದ್ದರೆ

ಆಕೆ ನಗಲಾರಳು!

ಆತ ನೀಡದಿದ್ದರೆ ನಗದು

ಈಕೆಯ ಮುಖವೆಂದಿಗೂ ನಗದು!

ಆತನ ಬಳಿ ಇಲ್ಲದಿದ್ದರೆ ನಗದು

ನಂಬಿ ಬಂದವಳ ಮುಖಾರವಿಂದವೂ ನಗದು

ವರದಕ್ಷಿಣೆ

ಈಕೆ ನಗ ತಾರದಿದ್ದರೆ

ಆತ ನಗಲಾರನು!

ಈಕೆ ನಗದು ತಾರದಿದ್ದರೆ

ಆತನ ಮುಖವೆಂದಿಗೂ ನಗದು!

ಆಕೆಯ ಕೈಗಳಲ್ಲಿ ಇಲ್ಲದಿರೆ ನಗದು

ಅತ್ತೆಯ ವದನವೆಂದಿಗೂ ನಗದು!

(ತೋಚಿದ್ದು ಗೀಚಿದ್ದು!)

‘ವಿರೋಧಿ’ಗಾಗಿ ಪ್ರಣಾಳಿಕೆ ಸಿದ್ಧಪಡಿಸೋಣ!
ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ.

ಮತ್ತೆ ಬಂದಿದೆ ನವ ಯುಗ. ಪ್ರತೀ ಹೊಸ ಯುಗದ ಆದಿಯಲ್ಲಿ ನಾವು ಹೇಳೋದು “ಕಳೆದ ವರ್ಷ ತೀರಾ ಚಿಂತಾಜನಕವಾಗಿತ್ತು. ಸಿಹಿಗಿಂತ ಕಹಿಯೇ ಹೆಚ್ಚಿತ್ತು”!. ಈ ಬಾರಿಯೂ ಹೇಳುವುದು ಅದನ್ನೇ. ಬೇಕಿದ್ದರೆ ಒಂದಷ್ಟು ಜೋರಾಗಿಯೇ.

ಯಾಕೆ? ಸರ್ವಧಾರಿ ಸಂವತ್ಸರದತ್ತ ಕಣ್ಣು ಹಾಯಿಸಲು ಭಯಾತಂಕ. ಉಗ್ರರ ದಾಳಿಗಳು, ಹಿಂಸೆ, ಸಾವು ನೋವಿನ ಜೊತೆಗೆ ಈ ಬಾರಿ ಬಂದೆರಗಿತಲ್ಲ… ಬುಡಕ್ಕೇ ಕೊಡಲಿಯೇಟು! ಅದೇ ಆರ್ಥಿಕ ಹಿಂಜರಿತವೆಂಬ ಮಹಾಮಾರಿ. ಅದೆಷ್ಟು ಮಂದಿ ಉದ್ಯೋಗ ಕಳೆದುಕೊಂಡರು, ಅದೆಷ್ಟು ಮಂದಿಯ ವೇತನ ಕಡಿತವಾಯಿತು, ಅದೆಷ್ಟು ನಷ್ಟವಾಯಿತು! ಛೆ, ಛೆ… ಇದ್ದದ್ದೇ ಇದೆಲ್ಲಾ…ಮರೆತು ಬಿಡೋಣ ಅವನ್ನು…

ಪರಸ್ಪರ ಸಂಘರ್ಷಮಯ, ತದ್ವಿರುದ್ಧ ಗುಣಗಳ ಪ್ರತೀಕವಾಗಿರುವ ಬೇವು ಮತ್ತು ಬೆಲ್ಲದ ಬಗ್ಗೆ ಒಂದು ಮಾತು. ಬೇವನ್ನು ನೋವು ಎಂದೂ ಬೆಲ್ಲವನ್ನು ಗೆಲುವೆಂದೂ ನಿಜಜೀವನದಲ್ಲಿ ಪರಿಗಣಿಸಿ ನೋಡಿದರೆ, ಬೆಲ್ಲದ ಪಕ್ಕದಲ್ಲಿ ಬೇವು ಇದ್ದಾಗ ಮಾತ್ರವಷ್ಟೇ ಬಲ್ಲವನೇ ಬಲ್ಲ ಬೆಲ್ಲದಾ ರುಚಿಯ! ಹಂದಿಯಿದ್ದರಷ್ಟೇ ಕೇರಿ ಎನಿತು ಶುದ್ಧಿಯೋ ಹಾಗೆ, ಶುದ್ಧಾಚಾರಕ್ಕೆ ಮಹತ್ವ ಬರುವುದು ಅಲ್ಲೇ ಎಂದು ದಾಸರು ಹೇಳಿದ್ದೂ ಇದೇ ಕಾರಣಕ್ಕೆ. ಯುಗಾದಿಯ ಬೇವು-ಬೆಲ್ಲ, ವಿರಸ-ಸರಸದ ಪ್ರತೀಕವೂ ಹೌದು. ಅದಕ್ಕಲ್ಲವೇ ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂದಿದ್ದು ತಿಳಿದವರು!

ಯುಗದ ಆದಿಯ ದಿನ ಕೆಟ್ಟ ಘಳಿಗೆಗಳನ್ನೆಲ್ಲಾ ಬೇವು ಎಂಬಂತೆ ಮರೆತು ವಿರೋಧಿಯನ್ನು ಸ್ವಾಗತಿಸಲು ಸಿದ್ಧರಾಗೋಣ. ವಾಸ್ತವಿಕ ಪ್ರಪಂಚದಲ್ಲಿಯೂ ನಿಜ ವೈರಿಗಳನ್ನು ಪ್ರೀತಿಯಿಂದಲೇ ಗೆಲ್ಲಬಹುದಲ್ಲವೇ? ಸ್ವಾಗತಿಸೋಣವಂತೆ. ಆ ಒಂದು ಅನರ್ಘ್ಯ ನಿಯಮವನ್ನು ಅನುಸರಿಸಲು ಸಿದ್ಧರಾಗಬೇಕಿದೆ ಜನ. ಹೊಸ ವರ್ಷ, ಹೊಸ ಹರ್ಷ, ಹೊಸ ಆಶಾವಾದ, ನವ ಭರವಸೆಗಳ ಒಸಗೆ, ಸರ್ವರ ಜೀವನದಲ್ಲಿಯೂ ಚಿಗುರೊಡೆಯಬೇಕು. ಆಶಾವಾದವೇ ಮನುಷ್ಯನ ಜೀವನೋತ್ಸಾಹಕ್ಕೆ, ಬೆಟ್ಟದಷ್ಟು ಕನವರಿಕೆಗಳಿಗೆ ಮೂಲ ಪ್ರೇರಣೆಯಾಗುತ್ತದೆ. ಹೀಗಿರಲು, ಯುಗಾದಿ ಹಬ್ಬದಂದು ನೋವ ಮರೆತು ನಲಿವಿಗಾಗಿ ಕಾತರಿಸೋಣ. ಈ ಮೂಲಕ ತುಕ್ಕು ಹಿಡಿದಂತಿರುವ ಮನಸ್ಸಿಗೆ ಒರೆ ಹಚ್ಚಿ ಶುಭ್ರಗೊಳಿಸಿ, ಹೊಸ ಸಂವತ್ಸರಕ್ಕೆ ಸಿದ್ಧಗೊಳಿಸೋಣ.

ಬೇವು ಬೆಲ್ಲವು ಬೇಕು ಸುಖದ ಬಾಳುವೆಗೆ, ಬಾಳುವೆಯಾ ಆ ಸುಖಕೆ. ಅನಿವಾರ್ಯವೆನಿಸೋ ಕಹಿಯೊಡಗೂಡಿ ಬಾಳಲು ಕಲಿತು, ಸಿಹಿಯ ಬಾಳುವೆಗಾಗಿ ಹಂಬಲಿಸೋಣ. ಎಲ್ಲಕ್ಕೂ ಮಿಗಿಲಾಗಿ, ನವ ನವೋನ್ಮೇಷಕ್ಕಾಗಿ ಕಾತರಿಸುತ್ತಾ, ಹೊಸ ವರುಷದಲ್ಲಿ ಏನೆಲ್ಲಾ ಮಾಡಬಹುದೆಂಬುದರ ಪ್ರಣಾಳಿಕೆ ಸಿದ್ಧಪಡಿಸಿ, ‘ವಿರೋಧಿ’ಯನ್ನು ಎದುರುಗೊಳ್ಳೋಣ…

ವಿರೋಧಿ ಸಂವತ್ಸರವು ವಿರೋಧಿಗಳ ಮನ ಗೆಲ್ಲುವಲ್ಲಿ ಪೂರಕವಾಗಿರಲಿ, ಸಂಭ್ರಮ ಪಡುವ ಹೊಸ ಅವಕಾಶಗಳನ್ನು ಹೆಚ್ಚಿಸಲಿ. ಸಂತಸವುಳ್ಳ ಪ್ರತಿ ದಿನವೂ ಹೊಸ ಯುಗವಾಗಲಿ, ಆದರೆ ಬೇಸರವಿರುವ ಪ್ರತಿ ದಿನ ಮಾತ್ರ ಯುಗವಾಗಿ ಭಾಸವಾಗದಿರಲಿ..!

ಕೊರಡು ಕೊನರಲಿ, ಬರಡು ಹಯನು ಆಗಲಿ… ಸರ್ವರಿಗೂ ಒಳಿತಾಗಲಿ…

ಕೌನ್ ಬನೇಗಾ ಪ್ರಧಾನ ಮಂತ್ರಿ…?
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ ಇದು ಸಾಧ್ಯ. ಇಲ್ಲಿ ದೇಶದ ಪ್ರಧಾನ ಅಧಿಕಾರ ಕೇಂದ್ರವಾದ ಪ್ರಧಾನಮಂತ್ರಿ ಹುದ್ದೆಯನ್ನು ಯಾರು ಬೇಕಾದರೂ ಬಯಸಬಹುದು. ಅದಕ್ಕೇ ಕೇಂದ್ರ ಪಂಚಾಯತ್ ರಾಜ್ ಸಚಿವ ಮಣಿಶಂಕರ್ ಅಯ್ಯರ್ ಹೇಳಿದ್ದು :”ಪ್ರಧಾನಿ ಹುದ್ದೆ ಎಂಬುದು ಟಿವಿಯಲ್ಲಿ ಬರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಂತಾಗಿದೆ-ಕೌನ್ ಬನೇಗಾ ಪ್ರಧಾನಮಂತ್ರಿ!”.

ಪ್ರಧಾನಿ ಹುದ್ದೆಗೇರಬೇಕಾದರೆ ದೇಶ ಮುನ್ನಡೆಸುವ ಸಾಮರ್ಥ್ಯ, ರಾಜತಾಂತ್ರಿಕ ಪರಿಣತಿ, ದೇಶದ ಸಮಗ್ರ ಸಮಸ್ಯೆಗಳ ಅರಿವು, ಅಸ್ಖಲಿತ ವಾಕ್ಚಾತುರ್ಯ, ಸಮಸ್ಯೆಗಳಿಗೆ- ಪ್ರಶ್ನೆಗಳಿಗೆ ತತ್‌ಕ್ಷಣ ಉತ್ತರ ಕೊಡುವ ಚಾಣಾಕ್ಷತೆ, ಎಲ್ಲಕ್ಕೂ ಮುಖ್ಯವಾಗಿ ನಾಯಕತ್ವದ ಗುಣವಿರಬೇಕು. ಆದರೋ ಇಲ್ಲಿ ಇವೆಲ್ಲ ಅರ್ಹತೆಗಳು ಗೌಣ. ಹಣ ಬಲ, ಸಂಖ್ಯಾ ಬಲ, ರಾಜಕೀಯ ಬಲ- ಇವುಗಳೇ ಸಾಕು ಪ್ರಧಾನಿಯಾಗಲು. ಅಥವಾ ಇವ್ಯಾವುವೂ ಬೇಕಾಗಿಯೂ ಇಲ್ಲ, ಒಂದಿಷ್ಟು ರಾಜಕೀಯ ಅನುಭವವಿದ್ದರೆ ಸಾಕು ಎಂಬುದು ಈ ಹಿಂದಿನ ಕೆಲವೊಂದು ಆಕಾಂಕ್ಷಿಗಳ ಚರಿತ್ರೆಯನ್ನು ನೋಡಿದರೆ ತಿಳಿದುಬರುತ್ತದೆ.

ಅಮೆರಿಕಕ್ಕೆ ಹೋಲಿಸಿದರೆ, ಅಲ್ಲಿ ಅಧ್ಯಕ್ಷೀಯ ಪದ್ಧತಿಯಿದೆ. ರಾಷ್ಟ್ರಾಧ್ಯಕ್ಷನೇ ಮುಖ್ಯ. ಭಾರತದಲ್ಲಿ ಸಂಸದೀಯ ಪ್ರಜಾಸತ್ತೆಯಿದ್ದು, ಇಲ್ಲಿ ಪ್ರಧಾನಿಗೆ ಆದ್ಯತೆ. ಅದರೆ ಅಲ್ಲಿ, ರಾಷ್ಟ್ರಾಧ್ಯಕ್ಷ ಪದವಿಗೆ ಆಯ್ಕೆ ನೆರವೇರುವ ವಿಧಾನವಿದೆಯಲ್ಲ, ಅತ್ಯಂತ ಅದ್ಭುತ, ಅನೂಹ್ಯ. ದೇಶವನ್ನು ಯಾರ ಕೈಗಿಡಬೇಕೆಂದು ಜನರು ಎಚ್ಚರಿಕೆಯಿಂದ ನಿರ್ಧರಿಸಲು ಅಲ್ಲಿ ಅವಕಾಶವಿರುತ್ತದೆ.

ಹೆಚ್ಚೆಂದರೆ ಎರಡ್ಮೂರು ಪಕ್ಷಗಳು ತಮ್ಮ ಪಕ್ಷದೊಳಗೇ ಉಮೇದುವಾರರನ್ನು ಮತದಾನದ ಮೂಲಕ ಆರಿಸುತ್ತವೆ. ಅಂದರೆ ಈ ಪದವಿಗೆ ತಮ್ಮ ಪಕ್ಷದಿಂದ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆಯೇ ಒಂದು ಪಕ್ಷದೊಳಗೆ ಚುನಾವಣೆ. ಅವರಲ್ಲಿ ಆಯ್ಕೆಯಾದವ, ವಿರುದ್ಧ ಪಕ್ಷದಿಂದಲೂ ಇದೇ ರೀತಿ ಆಯ್ಕೆಯಾಗಿ ಬಂದ ಅಭ್ಯರ್ಥಿಯನ್ನು ಮಹಾ ಮತದಾನದಲ್ಲಿ ಎದುರಿಸಬೇಕು. ಈ ಪದವಿಗೆ ಚುನಾವಣೆಗಳು ನಡೆಯುವ ಮುನ್ನ ಆ ಅಭ್ಯರ್ಥಿಗಳ ಮಧ್ಯೆ ಅಲ್ಲಲ್ಲಿ ಮುಖಾಮುಖಿ ಚರ್ಚೆ ಏರ್ಪಡಿಸಲಾಗುತ್ತದೆ. ಒಂದು ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಹೇಗೆ ಕಂಡುಹುಡುಕುತ್ತೀರಿ (ಉದಾಹರಣೆಗೆ ಈಗ ಜಗತ್ತನ್ನೇ ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು) ಎಂಬ ಬಗ್ಗೆ ಅಭ್ಯರ್ಥಿಗಳಿಗಿರುವ ಜ್ಞಾನವೆಷ್ಟು ಎಂಬುದನ್ನೆಲ್ಲಾ ಅಳೆದು ತೂಗಲು ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಅಭ್ಯರ್ಥಿಗಳ ಮಧ್ಯೆ ನೇರಾನೇರ ಪ್ರಶ್ನೋತ್ತರ ಕಲಾಪ ನಡೆಯುತ್ತದೆ.

ಅವರಲ್ಲಿ ಈತ ನಮ್ಮ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಎಂಬುದು ಜನರಿಗೆ ಮನದಟ್ಟಾಗುವ ವೇದಿಕೆ ಸಿದ್ಧವಾಗಿರುತ್ತದೆ. ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಅವರು ರಿಪಬ್ಲಿಕನ್ ಪ್ರತಿಸ್ಪರ್ಧಿ ಜಾನ್ ಮೆಕೇನ್ ಎದುರು ಗೆದ್ದದ್ದು ಇದೇ ವಿಧಾನದ ಮೂಲಕ.

ಇಲ್ಲಿ ಈ ಸಂಗತಿಯನ್ನೇಕೆ ಪ್ರಸ್ತಾಪಿಸಿದ್ದು ಎಂದರೆ, ಚುನಾವಣೆ ಘೋಷಣೆಯಾಗುವ ಮುನ್ನವೇ ಮುಂದಿನ ಪ್ರಧಾನಿ ಹುದ್ದೆಗೆ ನಾನು ಅಭ್ಯರ್ಥಿ, ನಾನು ಅಭ್ಯರ್ಥಿ ಎಂಬ ಹೇಳಿಕೆಗಳು ಕೇಳಿಬರತೊಡಗಿದ್ದವು ನಮ್ಮಲ್ಲಿ. ಹೊಸ ಸೇರ್ಪಡೆ ಎಂದರೆ ಹಾಸ್ಯನಟ ಜಸ್ಪಾಲ್ ಭಟ್ಟಿ. ಚಂಡೀಗಢದಿಂದ ತಾವು ಹೊಸದಾಗಿ ಸ್ಥಾಪಿಸಿರುವ ‘ರಿಸೆಶನ್ ಪಾರ್ಟಿ’ ಮೂಲಕ ಪ್ರಧಾನಿಯಾಗುವ ಏಕೈಕ ಉದ್ದೇಶದಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಅವರ ಮಾತಿನಲ್ಲಿ ವ್ಯಂಗ್ಯದ ಮೊನಚಿದ್ದರೂ ಅದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಅಂತೆಯೇ, ಈ ಪರಮ ಪವಿತ್ರ ಹುದ್ದೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುಪಿಎಯ ಅಭ್ಯರ್ಥಿ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾರೆ, ಹಲವು ಸಮಯದಿಂದ ಕಾಯುತ್ತಿರುವ ಎಲ್.ಕೆ.ಆಡ್ವಾಣಿ ಇದ್ದಾರೆ, ನರಸಿಂಹರಾವ್ ಕಾಲದ ಬಳಿಕ ಇತ್ತ ಒಂದು ಕಣ್ಣು ನೆಟ್ಟಿದ್ದ ಶರದ್ ಪವಾರ್, ಈಗ ಬೇಡ ಎನ್ನುವ ರಾಹುಲ್ ಗಾಂಧಿ, ನಾನೂ ಯಾಕಾಗಬಾರದು ಎನ್ನುವ ಲಾಲೂ ಪ್ರಸಾದ್ ಯಾದವ್ ಮತ್ತು ರಾಮ ವಿಲಾಸ್ ಪಾಸ್ವಾನ್, ಇಲ್ಲ ಇಲ್ಲ ಎನ್ನುತ್ತಲೇ ಇರುವ ಎಚ್.ಡಿ.ದೇವೇಗೌಡ, ಅತ್ತಕಡೆಯಿಂದ ಚಂದ್ರಬಾಬು ನಾಯ್ದು, ‘ಸದ್ಯಕ್ಕೆ ಇಲ್ಲ’ ಎನ್ನುವ ಜಯಲಲಿತಾ, ನಂಗೂ ಒಂದು ಕೈನೋಡುವ ಆಸೆಯಿದೆ ಎಂದಿದ್ದ ಭೈರೋನ್ ಸಿಂಗ್ ಶೇಖಾವತ್… ಹೀಗೆ ಎಲ್ಲರೂ ಈ ಹಾಟ್ ಸೀಟ್ ಮೇಲೆ ಕಣ್ಣಿಟ್ಟವರೇ.

ಇಲ್ಲಿ ಅರ್ಹತೆ ಆಧಾರವಾಗುವುದಿಲ್ಲ, ಕಾರ್ಯಕ್ಷಮತೆ ಲೆಕ್ಕಕ್ಕೆ ಬರುವುದಿಲ್ಲ, ಅನುಭವಕ್ಕೆ ಬೆಲೆ ಇಲ್ಲ. ಇಲ್ಲಿರುವುದು ಚೌಕಾಶಿ ಸಾಮರ್ಥ್ಯಕ್ಕೆ ಬೆಲೆ ಮಾತ್ರ. ಇದಕ್ಕೆ ಕಾರಣವೂ ಇಲ್ಲದಿಲ್ಲ, ಯಾವುದೇ ಪಕ್ಷಕ್ಕೆ ಕೂಡ ನಾವಾಗಿಯೇ ಪರಿಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಬಲ್ಲೆವು ಎಂಬ ಆತ್ಮವಿಶ್ವಾಸವಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳದೇ ಕಾರು ಬಾರು. ಹತ್ತು ದಿಕ್ಕು, ನೂರು ದನಿ ಈ ಒಂದು ಪ್ರಧಾನಿ ಪದವಿಗೆ.

ಒಂದು ಪಂಗಡಕ್ಕೆ, ಒಂದು ಜಾತಿಗೆ, ಒಂದು ಕೋಮಿಗೆ, ಒಂದು ಪ್ರದೇಶಕ್ಕೆ, ಒಂದು ನಿರ್ದಿಷ್ಟ ಹಿತಾಸಕ್ತಿಗೆ ಸೀಮಿತವಾಗಿರುವ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಫಳ ಫಳನೆ ಹೊಳೆಯತೊಡಗುತ್ತವೆ. ಇದರಿಂದಾಗಿ ಯಾವುದೇ ಪ್ರಜೆ ಬೇಕಾದರೂ ಪ್ರಭುವಾಗುವ ಕನಸು ಕಾಣುತ್ತಿದ್ದಾರೆ. ಇದು ಅರಾಜಕತೆಗೆ ನಾಂದಿಯೇ? ಅಂದರೆ ನಮ್ಮ ಬಳಿ ಒಂದಷ್ಟು ಸಂಖ್ಯಾಬಲವಿದ್ದರೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣು ಇಡಬಹುದು. ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳ ಅಭಿವೃದ್ಧಿಗೆ ಅತ್ಯಗತ್ಯ ಎಂದು ಹೇಳಬಹುದಾದರೂ, ರಾಷ್ಟ್ರೀಯ ಮಟ್ಟದಲ್ಲಿ? ಹೆಚ್ಚು-ಕಡಿಮೆ ಅವುಗಳ ಅಜೆಂಡಾ ರಾಷ್ಟ್ರ ರಾಜಕಾರಣದಲ್ಲಿ ಅಪ್ರಸ್ತುತವಾಗಬಹುದು. ಈ ಬಗ್ಗೆ ಚಿಂತಿಸಬೇಕಾಗಿದೆ.

ಇನ್ನು, ಈಗಿನ ಪ್ರಧಾನಿ ಅಭ್ಯರ್ಥಿಗಳಲ್ಲಿ ಆ ಹುದ್ದೆಗೆ ತಕ್ಕುದಾದ ಛಾತಿ, ವರ್ಚಸ್ಸಿನ ಕೊರತೆ ಇರುವುದು ಎದ್ದುಕಾಣುತ್ತದೆ. ಇದು ಸಂಸತ್ಸದಸ್ಯ ಸ್ಥಾನಕ್ಕೆ ಟಿಕೆಟ್ ಯಾರಿಗೆ ಕೊಡುವುದು ಎಂಬಲ್ಲಿಂದ ತೊಡಗಿ ಪ್ರಧಾನಿ ಹುದ್ದೆವರೆಗೂ ಈ ನಾಯಕರ ಕೊರತೆ ವ್ಯಾಪಿಸಿದೆ. ಓಟು ಕೊಡುವುದು ಜನರಾದರೂ, ಯಾವುದಾದರೊಂದು ಪಕ್ಷದ ಅಧ್ಯಕ್ಷರು ಪ್ರಧಾನಿಯನ್ನು ‘ನೇಮಕ’ ಮಾಡುತ್ತಾರೆ. ಅಂದರೆ ಪ್ರಧಾನಿಯಾಗಬೇಕಿದ್ದವರು ಪ್ರಜಾಸತ್ತಾತ್ಮಕವಾಗಿ ಚುನಾಯಿಸಿ ಬರಬೇಕಾಗಿಲ್ಲ. ಹುದ್ದೆಗೆ ಏರಿದ ಬಳಿಕ ಚುನಾವಣೆ ಎದುರಿಸಿದರೂ ಸಾಕು! ಕಳೆದ ಲೋಕಸಭೆಯಲ್ಲಿ ಆಗಿದ್ದೂ ಇದೇ. ಭಾರತದ ಸಂಸದೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹುಶಃ ತೀರಾ ನಿರಾಶಾದಾಯಕ ಬೆಳವಣಿಗೆಯೂ ಹೌದಾಗಿದ್ದರೂ, ಪ್ರಧಾನಿ ಯಾರಾಗುವರು ಎಂಬುದು ಕೊನೆಯವರೆಗೂ ಸಸ್ಪೆನ್ಸ್ ಆಗಿಯೂ, ಥ್ರಿಲ್ಲರ್ ಆಗಿಯೂ ಮಾರ್ಪಡುವ ಪ್ರಕ್ರಿಯೆಯಿದೆಯಲ್ಲ, ಅಲ್ಲಿ ಸಾಕಷ್ಟು ಮನೋರಂಜನೆಯೂ ಇರುತ್ತದೆ ಎಂಬುದು ಅಷ್ಟೇ ದಿಟ.

ಯಾರೇ ಆದರೂ ಪ್ರಧಾನಿ ಆಗಬಹುದು ಎಂಬುದು ಒಂದು ರೀತಿಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ನೀತಿಗೆ ತಾರ್ಕಿಕವಾಗಿ ಪೂರಕವಾದರೂ, ಪ್ರಜಾಸತ್ತೆಗೆ ಹಿನ್ನಡೆಯೂ ಹೌದು. ಯಾಕೆಂದರೆ ಜನ ಯಾರಿಗೋ ಮತ ಹಾಕುತ್ತಾರೆ, ಯಾರೋ ಒಬ್ಬರು ಪ್ರಧಾನಿಯಾಗುತ್ತಾರೆ. ಇಲ್ಲಿ ಸಂಖ್ಯೆಗಳೇ ಮುಖ್ಯವಾಗಿಬಿಡುತ್ತವೆ. ಪ್ರಧಾನಿಯಾಗುವವರಿಗೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಎಂದರೇನು, ಪರಮಾಣು ಒಪ್ಪಂದವೇಕೆ, ದೇಶದ ಭಯೋತ್ಪಾದನೆ ನಿಗ್ರಹಿಸುವುದು ಹೇಗೆಂಬ ದೂರದೃಷ್ಟಿಯಿರಬೇಕಿಲ್ಲ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟರ ಮಟ್ಟಿಗೆ ಪಾವಿತ್ರ್ಯ ಕಳೆದುಕೊಂಡಿದೆಯೆಂದರೆ, ಇಲ್ಲಿ ಕ್ರಿಮಿನಲ್ ಕೇಸುಗಳಿದ್ದರೂ ಉನ್ನತ ಹುದ್ದೆಗೇರಬಹುದು. ಇದು ಕೆಲವು ರಾಜ್ಯಗಳ ಮುಖ್ಯಮಂತ್ರಿ ಪಟ್ಟದವರೆಗೆ ಹೋಗಿದೆ, ಅಷ್ಟೇಕೆ ಕೇಂದ್ರದ ಸಚಿವ ಪದವಿವರೆಗೂ ಕ್ರಿಮಿನಲ್‌ಗಳು ತಲುಪಿದ್ದಾರೆ. ಭಾರತಾಂಬೆಯ ಪುಣ್ಯ, ಪ್ರಧಾನಿ ಹುದ್ದೆ ಆ ಮಟ್ಟಕ್ಕೆ ಇನ್ನೂ ಇಳಿದಿಲ್ಲ.

ಹಾಗಿದ್ದರೆ, ಪ್ರಾದೇಶಿಕ ಪಕ್ಷಗಳ ಈ ಪರಿಯ ಬೆಳವಣಿಗೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದೆಯೇ? ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಹಂಗಿಗೆ ಬೀಳುವಂತಾಗಿರುವುದೇಕೆ? 20-30 ಸಂಸದರನ್ನಿಟ್ಟುಕೊಂಡು 545 ಸದಸ್ಯಬಲದ ಲೋಕಸಭೆಯಲ್ಲಿ ಪ್ರಧಾನಿಯಾಗಬಹುದಾದರೆ, ಅಥವಾ ಯಾವುದಾದರೂ ಅಧಿಕಾರಕ್ಕೇರಿದ ರಾಷ್ಟ್ರೀಯ ಪಕ್ಷವನ್ನು ಗಡಗಡನೆ ನಡುಗಿಸಬಹುದಾದರೆ (ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಎಡಪಕ್ಷಗಳು ಮಾಡಿದಂತೆ) ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವೇ ಅಥವಾ ಅಣಕವೇ? ಬಹುಶಃ ನಮ್ಮ ಸಂವಿಧಾನವನ್ನು ರಚಿಸಿದವರಿಗೆ ಇಂಥದ್ದೊಂದು ಪರಿಸ್ಥಿತಿಯ ಕಲ್ಪನೆಯೇ ಇದ್ದಿರಲಾರದು.

ಒಟ್ಟಾರೆ ಪರಿಣಾಮ? ಒಬ್ಬ ಯಾವುದೇ ಅಧಿಕಾರವಿಲ್ಲದ ದುರ್ಬಲ ಪ್ರಧಾನಮಂತ್ರಿ! ಏನೇ ನಿರ್ಧಾರ ಕೈಗೊಳ್ಳಬೇಕಿದ್ದರೂ, ಪರಿಸ್ಥಿತಿಯ ಕೈಗೊಂಬೆಯಾಗಿರುವ ಆತನಿಗೆ ಎಡದಿಂದ, ಬಲದಿಂದ, ಮೇಲಿಂದ, ಕೆಳಗಿಂದ ‘ಬೆಂಬಲ ಹಿಂತೆಗೆದುಕೊಳ್ತೀವಿ’ ಎಂಬ ಬೆದರಿಕೆ ಯಾವುದೇ ಕ್ಷಣ ಎದುರಾಗಬಹುದು. ಒಂದು ಸಮಷ್ಟಿಯ ಹಿತಕ್ಕಾಗಿ ಅಲ್ಲೊಂದು ಸರ್ವಸಮ್ಮತ ನಿರ್ಧಾರ ಮೂಡಬೇಕಿದ್ದರೆ ಆಕಾಶ ಭೂಮಿ ಒಂದು ಮಾಡಬೇಕಾಗುತ್ತದೆ.

ಈ ಬಾರಿಯ ಚುನಾವಣಾ ದೃಶ್ಯಾವಳಿಗಳನ್ನು ಗಮನಿಸಿದರೆ, ಒಂದು ಪಕ್ಷಕ್ಕೆ, ಒಂದು ಪ್ರಧಾನಿ ಅಭ್ಯರ್ಥಿಗೆ ಪೂರ್ಣ ಬಹುಮತ ದೊರೆಯುವುದೇ ಕಷ್ಟ. ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್‌ಗಳಾಗುತ್ತವೆ ಮತ್ತು ಕಿಂಗ್ ಕೂಡ ಆಗಬಹುದಾಗಿದೆ. ಹಾಗಿದ್ದರೆ ರಾಷ್ಟ್ರೀಯ ಮಟ್ಟದಲ್ಲಿ ದ್ವಿ-ಪಕ್ಷ ಸಿದ್ಧಾಂತ ಒಳ್ಳೆಯದೇ? ನೀವೇನಂತೀರಿ?

[ವೆಬ್‌ದುನಿಯಾದಲ್ಲಿ ಪ್ರಕಟ]

ಇಲ್ಲದ ಚಾಪ್ಲಿನ್ ಪ್ರತಿಮೆ ಮೇಲೆ ದಾಳಿ!
ಬ್ರೇಕಿಂಗ್ ನ್ಯೂಸ್ ಆವಾಂತರಗಳ ಸಾಲಿಗೆ ಮತ್ತು ಇದೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಚಾರ ಗಳಿಸುವವರ ತಂತ್ರಗಾರಿಕೆಗೆ ಇದು ಮತ್ತೊಂದು ಸೇರ್ಪಡೆ. ಹಾಗೆಯೇ ಮಾಧ್ಯಮಗಳ ವಸ್ತುನಿಷ್ಠತೆಗೆ, ಅದರ ವಿಶ್ವಾಸಾರ್ಹತೆಗೆ ಸವಾಲು ಕೂಡ. ಈ ಕಾರಣಕ್ಕೆ, ನಿನ್ನೆಯ ಲೇಖನವನ್ನು ಮತ್ತೆ ಮುಂದುವರಿಸಬೇಕಾಯಿತು, ಮತ್ತಷ್ಟು ಮಾಹಿತಿಗಳೊಂದಿಗೆ.

ಮಾಧ್ಯಮವನ್ನು ತಮ್ಮಿಚ್ಛೆಗಾಗಿ ಯಾವೆಲ್ಲಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ಅಥವಾ ಮಾಧ್ಯಮಗಳು ಯಾವ ರೀತಿ ಒಂದು ವಿಷಯದ ಮೇಲೆ ಪ್ರಭಾವ ಬೀರಬಹುದು (!) ಎಂಬುದಕ್ಕೂ ಇದೇ ಉದಾಹರಣೆಯಾಗಲೂಬಹುದು. ದೇವಸ್ಥಾನದ ಸಮೀಪ 67 ಅಡಿ ಎತ್ತರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು (ಯಾವುದೇ ಅನುಮತಿ ಇಲ್ಲದೆ) ಬಂದವರನ್ನು ತಡೆದ ಪ್ರಕರಣವನ್ನು, ವಿವೇಚಿಸದೆ (ಅಥವಾ ವಿವೇಚನೆಯಿಂದಲೇ, ಉದ್ದೇಶವೊಂದರ ಸಾಧನೆಗಾಗಿ) ಮುಖಪುಟದಲ್ಲಿ ‘ಕ್ರಿಶ್ಚಿಯನ್’ ಚಾಪ್ಲಿನ್‌ಗೆ ದಾಳಿ ಎಂದೆಲ್ಲಾ ಬ್ಯಾನರ್ ಹೆಡ್ಡಿಂಗ್ ಹಾಕಿ ಪ್ರಕಟಿಸಿಬಿಟ್ಟಿತು. ನೆನಪಿಡಿ. ಇದು ಇಲ್ಲದ ಪ್ರತಿಮೆಯ ಮೇಲೆ ಬಿಜೆಪಿ ದಾಳಿ! ಖಂಡಿತ ಇದು ಕೋಮು ಭಾವನೆ ಕೆರಳಿಸುವ ಹುನ್ನಾರ.

ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸಾಮಾಜಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳುವುದು ಮಾಧ್ಯಮಗಳ ಧರ್ಮ. ಸಮಾಜದ ಏಕತೆಗೆ ಭಂಗ ಬಾರದಂತೆ ವರ್ತಿಸುವುದು, ಜನರ ಭಾವನೆಗೆ ಧಕ್ಕೆಯಾಗದಂತೆ ಕಾಳಜಿ ವಹಿಸುವುದು ಅವುಗಳ ಕರ್ತವ್ಯವೂ ಹೌದು. ಹೀಗಿರುವಾಗ ಸಮಸ್ಯೆ ಏನೆಂಬುದನ್ನು ವಿವೇಚಿಸದೆ, ಅದನ್ನು ದೊಡ್ಡಕ್ಷರಗಳಲ್ಲಿ ಪ್ರಕಟಿಸಿ, ಅದು ಕೂಡ ದೆಹಲಿಯ ಆವೃತ್ತಿಯಲ್ಲಿ ಮಾತ್ರ ‘ಕ್ರಿಶ್ಚಿಯನ್ ಚಾಪ್ಲಿನ್‌ಗೆ ಬಿಜೆಪಿ ಅಡ್ಡಿ’ ಎಂದೆಲ್ಲಾ ಡಂಗೂರ ಸಾರಿರುವುದು ಯಾವ ದೆಹಲಿ ದೊರೆಗಳನ್ನು ಮೆಚ್ಚಿಸುವುದಕ್ಕೋಸ್ಕರ? ಹೀಗಾಗಿ ಸಂಪಾದಕರ ಜವಾಬ್ದಾರಿ ಇಲ್ಲಿ ಪ್ರಶ್ನಾರ್ಹವಾಗುತ್ತದೆ.

ದೇವಸ್ಥಾನದ ದೈವಿಕತೆಗೆ ಭಂಗವಾಗದಂತೆ, ಭಕ್ತಾದಿಗಳಿಗೆ ತೊಂದರೆಯಾಗದಂತೆ ಸ್ಥಳೀಯರು ಪ್ರತಿಭಟಿಸಿದ್ದಿರಬಹುದಲ್ಲವೇ? ಅವರಿಗೆ ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಅಂತ ಹೇಳಿಕೊಟ್ಟವರಾರು? ಮುಗ್ಧತೆಯಿಂದಲೇ ಹಳ್ಳಿಗರು, ‘ಯಾರೋ ಚಾಪ್ಲಿನ್ ಪ್ರತಿಮೆ ಮಾಡ್ತಾರಂತೆ, ದೇವಸ್ಥಾನದೆದುರು ಇದು ಮಾಡೋದು ತಪ್ಪು’ ಅಂದಿದ್ದಿರಬಹುದು. ನಾವು ಕೂಡ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂದು “ಅರಿತು”ಕೊಂಡದ್ದು ಈಗಲೇ!

ಇಲ್ಲಿ ಜಾತಿ-ಧರ್ಮವನ್ನು ಎಳೆದು ಹಾಕಿದ್ದೇಕೆ ಎಂಬುದು ಪ್ರಶ್ನೆ. ಜೀವನದಲ್ಲಿ ಶ್ರೇಷ್ಠತೆ ಮೆರೆದವರನ್ನು ಜಾತಿಯಲ್ಲಿ ಗುರುತಿಸಲು ಹೇಳಿಕೊಟ್ಟವರಾರು? ಅಬ್ದುಲ್ ಕಲಾಂ ಅವರನ್ನು ಮುಸಲ್ಮಾನ ಅಂತನೋ, ಇಂದಿರಾ ಗಾಂಧಿ ಹಿಂದೂ ಅಂತಾನೋ ನಾವು ಗುರುತಿಸುತ್ತೇವೆಯೋ?

ದೇವಸ್ಥಾನದ ಎದುರೇ ಮೂರ್ನಾಲ್ಕು ಅಂತಸ್ತಿನಷ್ಟು ಎತ್ತರದಲ್ಲಿ ಶಾಶ್ವತ ಪ್ರತಿಮೆ ಕಟ್ಟುವ ಉದ್ದೇಶವೇಕೆ? ಅದರ ಔಚಿತ್ಯ ಏನು ಅಂತ ಸ್ವಲ್ಪ ಯೋಚಿಸಬೇಕು. ಮೊದಲೇ ಇತ್ತೀಚಿನ ಬೆಳವಣಿಗೆಗಳಿಂದಾಗಿ ಆ ಪ್ರದೇಶದಲ್ಲಿ ಪ್ರತಿಯೊಬ್ಬರ ಮನದಲ್ಲಿಯೂ ಕೆರಳಿದ ಭಾವನೆ ಇದೆ. ಹೀಗಾಗಿ ಹಿಂದೂ ಭಾವನೆಗಳನ್ನು ಕೆರಳಿಸಿದರೆ, ಅಂದರೆ ಅವರಿಗೆ ಸೂಜಿ ಚುಚ್ಚಿದರೆ (ಸಣ್ಣಪುಟ್ಟ ಸಂಗತಿಗಳಿಗೆಲ್ಲ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಗೊತ್ತಿದ್ದೂ) ತಮ್ಮ ಉದ್ದೇಶ ಈಡೇರುತ್ತದೆ ಎಂಬ ತಂತ್ರಗಾರಿಕೆಯ ಫಲ ಈಗ ಇಡೀ ಕರಾವಳಿಯ ಜನತೆಯ ಮುಖಕ್ಕೆ ಮಸಿ ಬಳಿದಿರುವುದು.

ಚಾಪ್ಲಿನ್ ಮೊದಲು ಚರ್ಚ್ ಆಫ್ ಇಂಗ್ಲೆಂಡ್‌ನಿಂದ ಕ್ರೈಸ್ತ ಧರ್ಮ ದೀಕ್ಷೆ ಸ್ವೀಕರಿಸಿದ್ದರೂ, ಆ ಬಳಿಕ ತನ್ನನ್ನು ನಾಸ್ತಿಕ ಎಂದು ಘೋಷಿಸಿಕೊಂಡವನು. ಸ್ಥಳೀಯರು ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಆಕ್ಷೇಪಿಸಿದ್ದು ಖಂಡಿತಾ ಅಲ್ಲ ಎಂಬುದು ಆ ಸ್ಥಳದಲ್ಲಿದ್ದ ನನ್ನ ಗೆಳೆಯರೊಬ್ಬರು ಹೇಳಿದ ಮಾತು. ಅವರು ಆಕ್ಷೇಪಿಸಿದ್ದು ದೇವಸ್ಥಾನದ ಎದುರು ಇಷ್ಟು ದೊಡ್ಡ (62 ಅಡಿ ಎಂದರೆ ಸಾಧಾರಣ ಮೂರ್ನಾಲ್ಕು ಮಹಡಿ ಮನೆಯೆತ್ತರದಷ್ಟು) ಪ್ರತಿಮೆ ನಿರ್ಮಿಸುವುದಕ್ಕೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಬೈಲೈನ್ ಸಹಿತವಾದ ವರದಿಯೊಂದಿದೆ ನೋಡಿ.  ಅಂತೆಯೇ ಆಡಳಿತದಿಂದ ಎನ್ಒಸಿ ಪಡೆದುಕೊಂಡಿಲ್ಲ, ಅದು ಪಡೆಯಲು ಕಷ್ಟ ಎಂದು ಸ್ವತಃ ನಿರ್ದೇಶಕರೇ ಒಪ್ಪಿಕೊಂಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಹೇಮಲತಾ ಕೂಡ “ನಾವು ಶೂಟಿಂಗ್‌ಗೆ ಅನುಮತಿ ನೀಡಿದ್ದೆವು, ಆದರೆ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿ ದೊರೆಯುವವರೆಗೆ ಕಾಯಬೇಕು” ಎಂದಿದ್ದರು. ಅಂತೆಯೇ ಪಡುವರಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ ಅವರ ಹೇಳಿಕೆಯೂ ಇಲ್ಲಿದೆ. ಆ ಸ್ಥಳದಲ್ಲಿ ಬೇಡ, ಬೇರೆ ಸ್ಥಳ ನೋಡುವಂತೆ ಚಿತ್ರ ತಂಡಕ್ಕೆ ಹೇಳಿದ್ದೇವೆ, ಅನುಮತಿ ಪಡೆಯುವಂತೆ ಸೂಚಿಸಿದ್ದೇವೆ ಎಂದಿದ್ದಾರವರು.

ಗ್ರಾಮಸ್ಥರು ದೇವಸ್ಥಾನದ ಎದುರು ಇಷ್ಟೆತ್ತರದ ಪ್ರತಿಮೆ ಸ್ಥಾಪಿಸಿದ್ದಕ್ಕೆ ಆಕ್ಷೇಪಿಸಿದ್ದಾರೆ. ಚರ್ಚಿನ ಸಮೀಪ ಅದರ ಗೋಪುರಕ್ಕಿಂತಲೂ ಎತ್ತರದ  ಹಿಂದೂ ಪುಣ್ಯ ಪುರುಷನೊಬ್ಬನ ಪ್ರತಿಮೆ ಸ್ಥಾಪಿಸುತ್ತೇವೆ ಎಂದರೆ ಯಾರಾದರೂ ಬಿಡುತ್ತಾರೆಯೇ? ಆಕ್ಷೇಪಿಸ್ತಾರೆ ಅನ್ನೋದು ಖಂಡಿತ. ಇದು ಲಾಜಿಕ್ಕು. ಇದು ಧಾರ್ಮಿಕವಾಗಿ ಸೂಕ್ಷ್ಮ ವಿಚಾರ. ಧಾರ್ಮಿಕ ಸ್ವಾತಂತ್ರ್ಯ ಹಿಂದೂಗಳಿಗಿಲ್ಲವೇ?

ಒಟ್ಟಿನಲ್ಲಿ ಇದು ದೇಶದ ಹೆಸರಿಗೆ, ಕರ್ನಾಟಕದ ಹೆಸರಿಗೆ, ಕರಾವಳಿಯ ಶಾಂತಿಪ್ರಿಯ ಮಣ್ಣಿನ ಜನರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಂತೂ ಖಂಡಿತ. ದೇಶದ ಹೆಸರಿಗೆ ಮಸಿ ಬಳಿದರೂ ಪರವಾಗಿಲ್ಲ, ನನ್ನ ಚಿತ್ರಕ್ಕೆ ಪ್ರಚಾರ ಸಿಗಬೇಕು ಎಂಬ ಧೋರಣೆಯ ಪ್ರತೀಕವಿದು.

ಇದರ ಪರಿಣಾಮವೇನಾಯ್ತು? ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತೆ ತಲೆ ತಗ್ಗಿಸುವಂತಾಯಿತು. ಇಲ್ಲಿ ಬ್ರಿಟನ್‌ನ ಪತ್ರಿಕೆ ಪ್ರಕಟಿಸಿರುವ ಸುದ್ದಿ ನೋಡಿ…  ಹಿಂದೂ ಜಾಗರಣ ವೇದಿಕೆಯ ಹೆಸರು ಅವರಿಗೆ ಎಲ್ಲಿಂದಲೋ ಸಿಕ್ಕಿದೆ. ಅರ್ದಂಬರ್ಧ ವರದಿ, ಸುತ್ತಿ ಬಳಸಿ ಬರುವ ಸುದ್ದಿಯ ಒಟ್ಟಾರೆ ಸಾರಾಂಶವೆಂದರೆ, “ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಕ್ರಿಶ್ಚಿಯನ್ನರನ್ನು ಮಟ್ಟ ಹಾಕಲಾಗುತ್ತಿದೆ”

ಅದರಲ್ಲಿ Karnataka has one of the poorest records for anti-Christian violence in the country. According to the Global Council of Indian Christians, at least 112 anti-Christian attacks were recorded in the state last year. ಅಂತಾನೂ ಇದೆ!

ನಮ್ಮ ಬಗ್ಗೆ ಛೀಥೂ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಳಿದುಕೊಳ್ಳಲು ನಮಗೆ ಹೇಸಿಗೆಯಿಲ್ಲ… ನಾವು ತಾಲಿಬಾನೀಕರಣಗೊಳ್ಳುತ್ತಿದ್ದೇವೆ, ಹಿಂದೂ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.

ಇಲ್ಲೊಂದು ತೀರಾ ಸರಳ ಪ್ರಶ್ನೆ. ದೇಶದಲ್ಲಿ ಎಲ್ಲಿಯೂ ಇಲ್ಲದ, ದೇಶಕ್ಕೆ ದೇಶವೇ ಹೆಮ್ಮೆ ಪಡುವಂತಹ ಮಹಾನ್ ಹಾಸ್ಯ ನಟ ಚಾಪ್ಲಿನ್‌ನ ಬೃಹತ್ ಪ್ರತಿಮೆ ನಿರ್ಮಾಣವಾಗುತ್ತದೆಂದರೆ ಎಲ್ಲರೂ ಹೆಮ್ಮೆ ಪಡುವ ವಿಚಾರವೇ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಹಾಡಿನ ಚಿತ್ರೀಕರಣ ಮುಗಿದ ಬಳಿಕ ಪ್ರತಿಮೆಯನ್ನು ಪ್ರವಾಸೋದ್ಯಮ ಇಲಾಖೆಗೆ ಬಿಟ್ಟು ಕೊಡುವುದು ನಮ್ಮ ಉದ್ದೇಶವಾಗಿತ್ತು ಎಂಬ ಚಿತ್ರ ತಂಡದ ಹೇಳಿಕೆ ಒಳ್ಳೆಯ ಉದ್ದೇಶವೇ. ದೇಶಕ್ಕೇ ಹೆಮ್ಮೆಯಾಗಬಹುದಾದ ಈ ಪ್ರತಿಮೆ ನಮ್ಮಲ್ಲಿದೆ ಎಂಬುದು ಅಲ್ಲಿನ ಪಡುವರಿ ಗ್ರಾಮಸ್ಥರೂ ಎದೆತಟ್ಟಿಕೊಂಡು ಹೇಳಬಹುದು. ಯಾರೂ ಆಕ್ಷೇಪಿಸುತ್ತಲೂ ಇರಲಿಲ್ಲ. ಆದರೆ ದೇವಸ್ಥಾನದ ಸಮೀಪವೇ ಆಗಬೇಕು ಎಂಬುದೇಕೆ? ಮತ್ತು ಆ ಊರಿನ ಮಿತ್ರರೊಬ್ಬರು ಹೇಳುವಂತೆ, ಈ ಚಿತ್ರ ತಂಡವು ಗುದ್ದಲಿ-ಹಾರೆ ಹಿಡಿದುಕೊಂಡು ಅಲ್ಲಿ 67 ಅಡಿಯ ಬೃಹತ್ ವಿಗ್ರಹ ಸ್ಥಾಪನೆಗೆ ಒಂದು ತೆಂಗಿನ ಸಸಿ ನೆಡುವುದಕ್ಕೆ ತೋಡಿದಂತೆ ಗುಂಡಿ ತೋಡಲು ಸಜ್ಜಾಗಿತ್ತಂತೆ! ಅದನ್ನು ಆಕ್ಷೇಪಿಸಿದ್ದಕ್ಕೆ ಪತ್ರಿಕೆ ಬರೆದದ್ದು ಇಲ್ಲದ “ಚಾಪ್ಲಿನ್ ಪ್ರತಿಮೆಗೆ ಬಿಜೆಪಿ ದಾಳಿ”!

ಇಂಥದ್ದೊಂದು ದೊಡ್ಡ ಯೋಜನೆ, ಲಕ್ಷಾಂತರ ರೂಪಾಯಿ ವೆಚ್ಚದ ಒಳ್ಳೆಯ ಪ್ರವಾಸೋದ್ಯಮಕ್ಕೆ ಪೂರಕವಾಗಬಹುದಾದ ಯೋಜನೆ, ಇದಕ್ಕೆ ಜಿಲ್ಲಾಡಳಿತ, ಸ್ಥಳೀಯ ಪಂಚಾಯತ್ ಇತ್ಯಾದಿಗಳಿಂದ ಮೊದಲೇ ಒಪ್ಪಿಗೆ ಪಡೆದು, ಯೋಜಿತ ರೀತಿಯಲ್ಲಿ ಮುಂದುವರಿದಿಲ್ಲವೇಕೆ? ಈಗಾಗಲೇ ಶೇ.90 ಚಿತ್ರೀಕರಣ ಮುಗಿದಾಗಿದೆ, ಈ ಒಂದು ಪ್ರತಿಮೆಗಾಗಿ 35 ಲಕ್ಷ ಖರ್ಚು ಮಾಡುತ್ತಾರೆ ಎಂದಾದರೆ ಹಣ ಎಲ್ಲಿಂದ ಎಂಬುದು ಯಾರೂ ಕೇಳಬಹುದಾದ ಸಾಮಾನ್ಯ ಪ್ರಶ್ನೆ. ಹಾಗಿದ್ದರೆ, 35 ಲಕ್ಷ ರೂ ಖರ್ಚು ಮಾಡದೆಯೇ ತಮ್ಮ ಚಿತ್ರಕ್ಕೆ ಅದಕ್ಕಿಂತಲೂ ಮಿಗಿಲಾದ ಪ್ರಚಾರ ದಕ್ಕಿಸಿಕೊಳ್ಳುವುದು ಉದ್ದೇಶವಾಗಿರಬಹುದೇ? ಎಲ್ಲ ಪತ್ರಿಕೆಗಳಲ್ಲಿಯೂ ಬರುತ್ತದೆ, ಜಾಹೀರಾತಿಗೆ ಹಣ ಖರ್ಚು ಮಾಡಬೇಕಾಗಿಲ್ಲ ಎಂಬ ಲಾಜಿಕ್ಕೇ?

ಇತ್ತೀಚೆಗೆ ಸ್ಥಳೀಯವಾಗಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಮಾಧ್ಯಮಗಳು ಅಂತಾರಾಷ್ಟ್ರೀಕರಣ ಮಾಡಲಾಗುತ್ತಿರುವುದೇಕೆ ಮತ್ತು ಮಾಧ್ಯಮಗಳ ಜವಾಬ್ದಾರಿ ಏನು ಎಂಬ ಬಗ್ಗೆ ಒಂದಿಷ್ಟು ಯೋಚಿಸಬೇಕಾಗಿದೆ.

ಚಾರ್ಲಿ ಚಾಪ್ಲಿನ್ನೂ… ಮಾಧ್ಯಮಗಳೂ…
ಮಿತ್ರರೇ,

ಬೈಂದೂರು ಸಮೀಪದ ಒತ್ತಿನೆಣೆ ಕಡಲ ತೀರದಲ್ಲಿ ಸೋಮೇಶ್ವರ ದೇವಸ್ಥಾನದ ಎದುರು ಬಳಿ ಚಾರ್ಲಿ ಚಾಪ್ಲಿನ್ ಪ್ರತಿಮೆ ವಿವಾದ ಎಲ್ಲರಿಗೂ ತಿಳಿದಿದೆ. ದೇಶದಲ್ಲಿ, ಈ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪತ್ರಿಕೆಗಳು, ಟಿವಿ ಚಾನೆಲುಗಳಿವೆ. ಆದರೂ ಈ ವಿಷಯದಲ್ಲಿ ಸತ್ಯಾಂಶ ಏನು ಎಂಬುದು ಜನರಿಗೆ ಇನ್ನೂ ಅಸ್ಪಷ್ಟವಾಗಿದೆ.

ದೇವಸ್ಥಾನದ ಎದುರೇ ಆ ಚಾಪ್ಲಿನ್ ಪ್ರತಿಮೆ ಯಾಕೆ ಸ್ಥಾಪಿಸಬೇಕು ಎಂದು ಸ್ಥಳೀಯರು ಅಡ್ಡಿಪಡಿಸಿದ್ದಾರೆ ಅಂತ ಒಂದು ವಾದ. ಆತ ಕ್ರಿಶ್ಚಿಯನ್. ಈ ಕಾರಣಕ್ಕೆ ನಮ್ಮ ದೇಶದಲ್ಲಿ ಆತನ ಪ್ರತಿಮೆ ಯಾಕೆ ಬೇಕು ಅಂತ ಮತ್ತೊಂದು ವಾದ. ಈ ವಿಷಯವನ್ನೇ ಮುಂದಿಟ್ಟು ಪತ್ರಿಕೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದವು.

ಸಿಆರ್‌ಝಡ್ ಪ್ರದೇಶದಲ್ಲಿ ಈ ಪ್ರತಿಮೆ ಸ್ಥಾಪಿಸಲು ನಿರ್ದೇಶಕ ಹೇಮಂತ್ ಹೆಗಡೆ ಜಿಲ್ಲಾಧಿಕಾರಿಯಿಂದ ಮೌಖಿಕ ಅನುಮತಿಯಷ್ಟೇ ಪಡೆದುಕೊಂಡಿದ್ದಾರೆ ಎಂದೂ ವರದಿಗಳು ತಿಳಿಸಿವೆ. ಒಂದು ಕೋಟಿ ಚಿತ್ರಕ್ಕೆ 35 ಲಕ್ಷ ರೂಪಾಯಿಯನ್ನು ಈ ಪ್ರತಿಮೆಗೇ ವ್ಯಯಿಸುತ್ತಾರೇಕೆ ಎಂಬುದು ಮತ್ತೊಂದು ಪ್ರಶ್ನೆ. ಇದು ಶಾಶ್ವತ ಪ್ರತಿಮೆಯಲ್ಲ, ಶೂಟಿಂಗ್ ಮಾಡಿದ ಬಳಿಕ ತೆಗೆಯಲಾಗುತ್ತದೆ ಎಂಬುದು ಇನ್ನೊಂದು ಮಾಹಿತಿ. ಸೋಮೇಶ್ವರದ ಇತಿಹಾಸ ಪ್ರಸಿದ್ಧ ದೇವಸ್ಥಾನದ ಎದುರು ಅದರ ಗೋಪುರಕ್ಕಿಂತ ಹೆಚ್ಚು ಎತ್ತರಕ್ಕೆ ಈ ಪ್ರತಿಮೆ ಸ್ಥಾಪಿಸಿ, ದೇವಳದ ಪಾವಿತ್ರ್ಯ ಹಾಳುಗೆಡಹಲಾಗುತ್ತದೆ ಎನ್ನುತ್ತದೆ ಮತ್ತೊಂದು ಮಾಹಿತಿ. ಅವರೇಕೆ ಮಸೀದಿ ಎದುರು ಅಥವಾ ಚರ್ಚ್ ಎದುರು ಇಂಥ ಪ್ರತಿಮೆ ಸ್ಥಾಪಿಸುವ ಧೈರ್ಯ ಮಾಡಲಿಲ್ಲ ಎಂಬುದು ಮತ್ತೊಂದು ಉಗ್ರ – ವಾದ.

ಹೀಗೆಲ್ಲ ಗಾಳಿ ಸುದ್ದಿಗಳಿರುವಾಗ, ಟೈಮ್ಸ್ ಆಫ್ ಇಂಡಿಯಾದ ದೆಹಲಿ ಆವೃತ್ತಿಯಲ್ಲಿ “ಕ್ರಿಶ್ಚಿಯನ್ ಚಾಪ್ಲಿನ್ ಮೇಲೆ ಬಿಜೆಪಿ ದಾಳಿ” ಎಂದು ಐದು ಕಾಲಂ ಲೀಡ್ ಸುದ್ದಿ ಪ್ರಕಟಿಸಿತು. ಮಂಗಳೂರು ಆವೃತ್ತಿಯಲ್ಲಿ “ಈ ಕಲ್ಚರ್ ಪೊಲೀಸಿಂಗ್‌ಗೆ ನಾಗರಿಕ ಸಮಾಜದ ಧಿಕ್ಕಾರ” ಎಂಬ ತಲೆಬರಹದೊಂದಿಗೆ ರಾಷ್ಟ್ರಮಟ್ಟದ ಸುದ್ದಿಯಾಯಿತು. ಹಿಂದೂ ತಾಲಿಬಾನ್‌ಗಳು, ಹಿಂದೂ ಜೋಕರ್‌ಗಳು, ಹಿಂದೂ ಮೂಲಭೂತವಾದಿಗಳು ಎಂದೆಲ್ಲಾ ದೊಡ್ಡ ಚರ್ಚೆಯೇ ನಡೆಯಿತು. ಬುದ್ಧಿವಂತರ ಜಿಲ್ಲೆ, ತಾಳುವಿಕೆಗೆ ಹೆಸರಾದವರ ತಾಣ, ಕರಾವಳಿಯ ಮಾನ ಹರಾಜಾಯಿತು.

ಇಷ್ಟೆಲ್ಲಾ ಆಗುವುದರಲ್ಲಿ ಮಾಧ್ಯಮಗಳ ಪಾತ್ರ ಎಷ್ಟು? ಸತ್ಯಾಂಶವೇನು? ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಇದು ನಿಜಕ್ಕೂ ಪಬ್ಲಿಸಿಟಿ ಸ್ಟಂಟ್ ಆಗಿತ್ತೇ? ಪ್ರತಿಮೆ ಸ್ಥಾಪನೆಗೆ ಪ್ರಯತ್ನಿಸಿದ್ದು ಸಿಆರ್‌ಝಡ್ ಪ್ರದೇಶದಲ್ಲಿ ಆಗಿರುವುದರಿಂದ, ಇದರಲ್ಲಿ ತಮ್ಮ ತಪ್ಪು ಇರುವುದರಿಂದ ಹೇಮಂತ್ ಹೆಗಡೆ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಇಂದಿನ ಪತ್ರಿಕೆಗಳು ಹೇಳುತ್ತವೆ. ಪಬ್ಲಿಸಿಟಿಗಾಗಿ ಈ ರೀತಿ ಒಂದು ಸಭ್ಯ ಊರಿನ ಹೆಸರೇ ಹಾಳು ಮಾಡುವಷ್ಟರ ಮಟ್ಟಕ್ಕೆ ಇಳಿಯುವುದು (ಇಳಿದಿದ್ದರೆ) ಎಷ್ಟು ಸರಿ ಮತ್ತು ಇದಕ್ಕೆ ಮಾಧ್ಯಮಗಳು ಈ ರೀತಿ ಹಿಂದು-ಮುಂದು ನೋಡದೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಮಾಡುವುದು ಎಷ್ಟು ಸರಿ? ಆರಂಭಿಕ ವರದಿಗಳಲ್ಲಿ ಗೊಂದಲಗಳೇ ತುಂಬಿರುವುದರಿಂದ ನನಗೂ ಯಾವುದು ಸರಿ ಯಾವುದು ತಪ್ಪು ಎಂಬುದು ಗೊಂದಲ.

ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸದೇ ಇರುವುದು ಮಾಧ್ಯಮಗಳ ಜವಾಬ್ದಾರಿ ಆಗಿರುವುದರಿಂದ ಬಲ್ಲವರು ಯಾರಾದರೂ ಮಾಹಿತಿ ನೀಡುವಿರೇ? ಜನರಿಗೆ, ದೇಶಕ್ಕೆ, ವಿಶ್ವಕ್ಕೆ ಸತ್ಯಾಂಶವನ್ನೇ ತೋರಿಸಿಕೊಟ್ಟು ನಮ್ಮ ಜವಾಬ್ದಾರಿಯನ್ನು ತೋರಿಸಿಕೊಡುವುದು, ಸಮಾಜದ ಹಿತರಕ್ಷಣೆ ಒಳಿತಲ್ಲವೇ?

‘ಬದಲಾವಣೆ…’ ನಾಲ್ಕನೇ ವರ್ಷಕ್ಕೆ!
ಬ್ಲಾಗು ಎಂದರೇನೆಂದು ತಿಳಿಯದೇ ಇದ್ದ ದಿನಗಳವು. ಆವಾಗ ಅದು ಹೇಗೋ ಅಂತರಜಾಲ ಕ್ಷೇತ್ರದಿಂದ ಫಕ್ಕನೇ ಸೆಳೆಯಲ್ಪಟ್ಟವನಾಗಿ, ನಮ್ಮದೇ ಉಚಿತ ಪುಟ್ಟ ಜಾಲತಾಣವೊಂದನ್ನು ಸೃಷ್ಟಿಸಬಹುದು ಎಂದು ಆಕಸ್ಮಿಕವಾಗಿ ತಿಳಿದದ್ದು.

ಅಗಸ ಮೊಟ್ಟ ಮೊದಲು ಕೆಲಸ ಪ್ರಾರಂಭಿಸುವಾಗ ಬಟ್ಟೆಯನ್ನು ಎತ್ತಿ ಎತ್ತಿ ಒಗೆದನಂತೆ. ಹೀಗೇ ಆಯಿತು ನನ್ನ ಪರಿಸ್ಥಿತಿಯೂ. ಏನೋ ಒಂದು ಸಿಕ್ಕಿಬಿಟ್ಟಿತು ಅಂತ ಹತ್ತು ಹಲವಾರು ಸೈಟುಗಳಿಗೆ ಜಾಲಾಡಿ, ಇದ್ದಲ್ಲಿ, ಹೋದಲ್ಲೆಲ್ಲಾ ಬ್ಲಾಗುಗಳನ್ನು ಸೃಷ್ಟಿ ಮಾಡಿದೆ. ಕೆಲವನ್ನು ಪ್ರಯೋಗಕ್ಕಾಗಿ, ಮತ್ತೆ ಕೆಲವನ್ನು ಶೋಕಿಗಾಗಿ.. ಮತ್ತೆ ಕೆಲವು ಕುತೂಹಲಕ್ಕಾಗಿ, ಇನ್ನು ಕೆಲವು ಪ್ರಯೋಗಕ್ಕಾಗಿ… ಅಂದರೆ ಇದರಲ್ಲಿ ಏನಿದೆ, ವರ್ಡ್‌ಪ್ರೆಸ್‌ಗಿಂತ ಹೇಗೆ ಭಿನ್ನ, ಬ್ಲಾಗುಸ್ಪಾಟು ಯಾಕೆ ಚೆನ್ನ ಅಂತೆಲ್ಲಾ ಪ್ರಯೋಗ ಮಾಡುವುದಕ್ಕೆ…

ಅಂತೂ ಇಂತೂ ಜಾಲಾಡಿ ಜಾಲಾಡಿ, ಇದೊಂದು ಚಟವೇ ಆಗುತ್ತಿದೆಯಲ್ಲ ಅಂತ ಅದೊಂದು ದಿನ ಅರಿವಿಗೆ ಬಂತು. ನನ್ನ ಸಮಯವೂ ಸಾಕಷ್ಟು ವ್ಯಯವಾಗುತ್ತಿತ್ತಲ್ಲ ಎಂಬ ಕೊರಗು. ಕೊನೆಗೆ ಉಳಿದುಕೊಂಡದ್ದು ಈ ಬ್ಲಾಗು. ಬ್ಲಾಗುಸ್ಪಾಟಿನಲ್ಲಿಯೇ ನಾಲ್ಕಾರು, ರಿಡಿಫ್‌ನಲ್ಲಿ, ಯಾಹೂದಲ್ಲಿ, ಸಿಫಿಯಲ್ಲಿ, ಸುಲೇಖಾ ಡಾಟ್ ಕಾಂನಲ್ಲಿ… ಹೀಗೆ.. ಎಷ್ಟೆಷ್ಟೋ ಬ್ಲಾಗುಗಳಿದ್ದವು. ಅವೆಲ್ಲ ಈಗ ಗೊಟಕ್ ಅಂದಿವೆ. ಉಳಿದದ್ದು ಇದೊಂದು, ಉಳಿಸಿಕೊಂಡದ್ದು ಇದನ್ನು ಮಾತ್ರ.

2006ರ ಮಾರ್ಚ್ 16ರಂದು ಈ ಬ್ಲಾಗು ತೆರೆದಾಗ ಏನು ಬರೆಯಬೇಕೆಂಬ ನಿರ್ಧಾರವಿರಲಿಲ್ಲ. ಹೇಗೆ ಮುಂದುವರಿಯುವುದೆಂಬ ಗುರಿ ಇರಲಿಲ್ಲ. ಹಾಗೆಯೇ ಅಂತರಜಾಲದಲ್ಲಿ ಜಾಲಾಡುತ್ತಾ ಜಾಲಾಡುತ್ತಾ, ಅಲ್ಲಿಂದ ಇಲ್ಲಿಂದ ಕೆಲವನ್ನು ಎತ್ತಿಕೊಂಡು, ಇ-ಮೇಲ್ ಫಾರ್ವರ್ಡುಗಳನ್ನು ಹಾಕಿಕೊಂಡು ಇರುತ್ತಿದ್ದೆ. ನನ್ನ ಬಗ್ಗೆ ನಾನು ಬರೆದುಕೊಂಡ ‘ನಾನು ಹೀಗಿದ್ದೇನೆ’ ಪುಟದಲ್ಲಿ ಬಿದ್ದ ಮೊದಲ ಕಾಮೆಂಟ್ ಶ್ರೀವತ್ಸ ಜೋಷಿಯವರದು. ಆಗ ಕನ್ನಡ ಬ್ಲಾಗ್ ನಕ್ಷತ್ರಗಳಿದ್ದದ್ದು ಕೇವಲ 27 ಅಂತ ಅವರ ಕಾಮೆಂಟಿನಲ್ಲಿರುವ ಸಂಗತಿಯನ್ನು ಗಮನಿಸಿದರೆ, ಇಂದು ಕನ್ನಡದಲ್ಲಿ ಬ್ಲಾಗೆಂಬ ಲೋಕ ಯಾವ ಪರಿ ಬೆಳೆದಿದೆ ಎಂದು ಅರ್ಥೈಸಿಕೊಳ್ಳಬಹುದು.

ಆ ಮೇಲೆ, ನನ್ನ ಬರವಣಿಗೆಯನ್ನು ಮತ್ತಷ್ಟು ಹದಗೊಳಿಸಲು ಇದನ್ನೊಂದು ವೇದಿಕೆಯಾಗಿ ಯಾಕೆ ಪರಿವರ್ತಿಸಬಾರದು ಎಂದು ಮನಸ್ಸಿನಲ್ಲಿ ಮೂಡಿತು. ಕವನಗಳು ಎಂದರೆ ದೂರವೇ ಇದ್ದ ನಾನು ಕವನ ಬರೆಯಲೂ ಪ್ರಯತ್ನಿಸಿದೆ. ಅದು ನನಗೆ ಒಲಿಯಿತೋ… ಗೊತ್ತಿಲ್ಲ. ಮತ್ತೆ ಮಾಮೂಲಿ ರಾಜಕೀಯ ವಿಷಯವಿದ್ದೇ ಇದೆಯಲ್ಲ, ಸಾಕಷ್ಟು ಮನರಂಜನೆಗೆ   . ಹೀಗಾಗಿ ರಾಜಕೀಯದತ್ತಲೂ ನನ್ನ ಅಭಿಪ್ರಾಯ ಹೊರಗೆಡಹುತ್ತಾ ಬಂದೆ.

ಈ ಮೂರು ವರ್ಷಗಳಲ್ಲಿ ಹಲವು ಬಾರಿ ಬ್ಲಾಗಿನ ವಿನ್ಯಾಸ ಬದಲಾಯಿಸಿದ್ದೇನೆ. ಯಾಕೆಂದರೆ ಬದಲಾವಣೆಯೇ ಪ್ರಕೃತಿ ನಿಯಮವಲ್ಲವೇ ?   ಇಷ್ಟು ವರ್ಷಗಳಲ್ಲಿ ಅದೆಷ್ಟೋ ಮಂದಿ ಹಿರಿಯರು, ನನ್ನ ಹಿಂದಿನ ಬಾಸ್‌ಗಳು, ಕಿರಿಯರು, ಸಹೋದ್ಯೋಗಿಗಳು, ಸಹವರ್ತಿಗಳು, ಸಹ-ಬ್ಲಾಗಿಗರು ಬಂದು ಶುಭ ಕೋರಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಮತ್ತು ಆತ್ಮೀಯರಾಗಿಬಿಟ್ಟಿದ್ದಾರೆ, ಮಿತ್ರರಾಗಿದ್ದಾರೆ. ಅವರಿಗೆಲ್ಲ ಚಿರಋಣಿ ಮತ್ತು ಕಾಮೆಂಟುಗಳಿಗೆ ಉತ್ತರಿಸಲು ಕೆಲವು ದಿನ ತಡವಾದದ್ದಿದೆ. ಅದಕ್ಕೆ ಅದೇ ನೆಪ ಕೊಡುತ್ತಿದ್ದೇನೆ – Busy ಸ್ವಾಮೀ ಅಂತ. ಹೊಟ್ಟೆಗೆ ಹಾಕಿಕೊಳ್ಳಿ. ಬರುತ್ತಾ ಇರಿ, ಅಭಿಪ್ರಾಯ ಮಂಡಿಸ್ತಾ ಇರಿ. ಅನಿಸಿಕೆ, ಸಲಹೆ ನೀಡುತ್ತಾ ಇರಿ.

ನೆಟ್ ಕನ್ನಡಿಗರಿಗೆಲ್ಲರಿಗೂ ಆತ್ಮೀಯ ಧನ್ಯವಾದಗಳು.

ರಣಾಂಗಣ ಸಜ್ಜಾಗಿದೆ; ನಾಯಕರು ಎಲ್ಲಿದ್ದಾರೆ?
ಯಾವುದೇ ಮತದಾರರನ್ನು ಕೇಳಿನೋಡಿ… ರಾಜಕೀಯವೆಂಬುದು ‘ತತ್ವಸಿದ್ಧಾಂತಗಳೆಲ್ಲ ಧೂಳೀಪಟವಾಗಿರುವ ಅಕ್ರಮಗಳ ಆಗರವಾಗಿಬಿಟ್ಟಿದೆ’ ಎಂಬರ್ಥದ ಜುಗುಪ್ಸೆಯ ಭಾವನೆ ಅಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಪಕ್ಷ ನಿಷ್ಠೆ, ಪಕ್ಷ ಅನುಸರಿಸುತ್ತಿರುವ ಸಿದ್ಧಾಂತಕ್ಕೆ ಬದ್ಧವಾಗುವುದು ಇವೆಲ್ಲವೂ ಎಲ್ಲೋ ಕೇಳಿದ ಪದಗುಚ್ಛಗಳ ಹಾಗಿವೆಯಲ್ಲ ಅಂತನ್ನಿಬಿಟ್ಟಿವೆ. ಒಂಚೂರು ಅಸಮಾಧಾನವಾದರೂ ಸಾಕು, ಅದನ್ನು ಚರ್ಚಿಸಿ ಪರಿಹರಿಸಿಕೊಳ್ಳುವುದು ಬಿಟ್ಟು, ವೈರುಧ್ಯಮಯ ಸಿದ್ಧಾಂತಗಳಿರುವ ಮತ್ತೊಂದು ಪಕ್ಷಕ್ಕೆ ನೆಗೆದಾಟ ಆಗಿಬಿಡುತ್ತದೆ. ಸ್ವಪ್ರತಿಷ್ಠೆ, ಹಣದ ಬಲ ಇತ್ಯಾದಿಗಳೇ ಇಲ್ಲಿ ಪ್ರಧಾನ ಪಾತ್ರ ವಹಿಸುವ ಪರ್ವ ಕಾಲವಿದು. ಇದು ಭಾರತೀಯ ರಾಜಕಾರಣದ ಈಗಿನ ಸ್ಥಿತಿ ಮತ್ತು ಗತಿ.

ದೇಶವಿಡೀ ವ್ಯಾಪಿಸಿರುವ ಈ ಪರಿಸ್ಥಿತಿಗೆ ಕರ್ನಾಟಕವೂ ಹೊರತಾಗಿಲ್ಲ. ಇನ್ನೂ ಯಾವ ಪಕ್ಷದಲ್ಲಿದ್ದೇನೆ ಎಂದು ತಮಗೇ ಅರಿವಿಲ್ಲದಿರುವ ನಾಯಕರೂ ಅಥವಾ ‘ನಾಯಕರು’ ಅಂತ ಕರೆಸಿಕೊಳ್ಳುವವರೂ ಇರಬಹುದು. ಪರಿಣಾಮವೇನು? ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಬಲ್ಲ, ಸಮರ್ಥವಾಗಿ ಕ್ಷೇತ್ರೋದ್ಧಾರ ಮಾಡುವ ಕಳಕಳಿಯುಳ್ಳ, ರಾಜ್ಯದ ಧ್ವನಿಯನ್ನು ಕೇಂದ್ರದಲ್ಲಿ ಎತ್ತಿ, ರಾಜ್ಯಕ್ಕಾಗಿ ದುಡಿಯಬಲ್ಲ ಸಮರ್ಥ ನಾಯಕರು ಯಾರು ಎಂದು ಹಗಲಲ್ಲೂ ಟಾರ್ಚ್ ಲೈಟ್ ಹಾಕಿ ಹುಡುಕುವಂತಹ ಪರಿಸ್ಥಿತಿ ಉದ್ಭವಿಸಿದೆ.

ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಅದನ್ನು ಒತ್ತಟ್ಟಿಗಿರಿಸಿ, ಯಾವುದೇ ಕ್ಷೇತ್ರ ತೆಗೆದುಕೊಂಡರೂ, ಸಾಧನೆಯ ಆಧಾರದಲ್ಲಿ ನಾವು ಓಟು ಕೊಡಬಹುದು ಎಂದು ಯಾವ ಜನನಾಯಕನನ್ನು ಪರಿಗಣಿಸುತ್ತೀರಿ? ಕರ್ನಾಟಕದಲ್ಲಿ ರಾಜ್ಯದ ಪರವಾಗಿ ದಿಲ್ಲಿಯಲ್ಲಿ ಸಮರ್ಥವಾಗಿ ವಾದ ಮಂಡಿಸಬಲ್ಲ ನಾಯಕರು ಯಾರಿದ್ದಾರೆ ಎಂಬ ಬಗ್ಗೆ ಒಂದಿಷ್ಟು ಯೋಚಿಸಿ ನೋಡಿ. ಯಾರ ಹೆಸರಾದರೂ ನೆನಪಾಗುತ್ತದೆಯೇ? ಹಾಗಿದ್ದರೆ ಐದಾರು ಕೋಟಿ ಕನ್ನಡಿಗರಲ್ಲಿ, ಎರಡನೇ ಪೀಳಿಗೆಯ ಪ್ರಭಾವೀ ನಾಯಕರ ಕೊರತೆ ಇದೆ ಎಂಬುದು ಎದ್ದು ಕಾಣುತ್ತಿರುವುದು ಈಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳು ಸೂಕ್ತ ಅಭ್ಯರ್ಥಿಗಳಿಗಾಗಿ ಪರದಾಡುತ್ತಿರುವುದನ್ನು ನೋಡಿದರೆ ವೇದ್ಯವಾಗುವ ಸಂಗತಿ.

ಪಕ್ಷಗಳೆಲ್ಲ ಕಲಸು ಮೇಲೋಗರವಾಗಿಬಿಟ್ಟಿವೆ. ಮೊನ್ನೆ ಕಾಂಗ್ರೆಸ್ಸಲ್ಲಿದ್ದವರು ಇಂದು ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರೆ, ಜೆಡಿಎಸ್‌ನಲ್ಲಿದ್ದವರು ಕಾಂಗ್ರೆಸಿನಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷ ನೋಡಿ ಓಟು ಹಾಕುವ ಯುಗ ಅಂತ್ಯವಾಗುವ ಹಂತದಲ್ಲಿದೆಯೇ? ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹಲವರಲ್ಲಿ ಇದ್ದರೂ ಅವರು ಪ್ರಚಾರದಲ್ಲಿಲ್ಲ ಎಂಬುದು ಒಂದು ಅಂಶವಾದರೆ, ಪಕ್ಷಗಳು ಕೂಡ ಗೆಲ್ಲುವ ಅಭ್ಯರ್ಥಿಗೆ ತಡಕಾಡಿ ಬಸವಳಿಯುತ್ತಿವೆ ಎಂಬುದು ಮತ್ತೊಂದು ಅಂಶ.

ಲೋಕಸಭೆಗೆ ಯಾರು ಸ್ಪರ್ಧಿಸಬಹುದು ಎಂದು ಚಿಂತನೆಗೆ ಹಚ್ಚುವಾಗ, ಜನಾರ್ದನ ಪೂಜಾರಿ, ದೇವೇಗೌಡ, ವೀರಪ್ಪ ಮೊಯಿಲಿ, ಧನಂಜಯ ಕುಮಾರ್, ಬಂಗಾರಪ್ಪ, ಪ್ರಹ್ಲಾದ ಜೋಷಿ, ಅನಂತಕುಮಾರ್, ಬಸವರಾಜ ಪಾಟೀಲ್ ಸೇಡಂ, ಜಾಫರ್ ಶರೀಫ್, ಸದಾನಂದ ಗೌಡರೇ ಮುಂತಾದ ಹಳೇ ಹುಲಿಗಳ ಹೆಸರಷ್ಟೇ ನೆನಪಿಗೆ ಸುಳಿಯುತ್ತವಾದರೂ, ಅವರೆಲ್ಲರೂ ಸಂಸದರಾಗಿ ಸಾಧಿಸಿದ್ದೇನು ಎಂದು ಯೋಚಿಸಿದರೆ ಅವರಲ್ಲಿ ಕೆಲವರ ಹೆಸರಾದರೂ ಜನರಿಗೆ ಮರೆತುಹೋಗಬಹುದು! ಅದರ ಮಧ್ಯೆ ಪಕ್ಷದ ಆಂತರಿಕ ರಾಜಕೀಯಗಳು, ವೈರುಧ್ಯಗಳು ಸಮರ್ಥ ಅಭ್ಯರ್ಥಿಗೆ ಟಿಕೆಟ್ ತಪ್ಪಿಸುವಲ್ಲಿ ನಿರತವಾಗಿವೆ. ಇಲ್ಲಿ ರಾಜ್ಯದ ಹಿತಕ್ಕಿಂತ ಪಕ್ಷದ ಹಿತ, ಸ್ವಹಿತಗಳೇ ಮುಖ್ಯವಾಗಿಬಿಡುವುದು ವಿಪರ್ಯಾಸ.

ಹೀಗಾಗಿ ಇಂದು, ರಾಜ್ಯದ ಅಭಿವೃದ್ಧಿಯ ಏಕೈಕ ಗುರಿಯಿರುವ ಛಾತಿ ಇರುವ ನಾಯಕತ್ವದ ಅಗತ್ಯತೆ ಕರ್ನಾಟಕದಲ್ಲಿ ಹಿಂದೆಂದಿಗಿಂತ ಹೆಚ್ಚು ಅನಿವಾರ್ಯವಾಗುತ್ತಿದೆ. ನಮ್ಮಲ್ಲೇನಾಗುತ್ತಿದೆ ಎಂದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುತ್ತದೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಕೇಂದ್ರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತಿರುತ್ತದೆ. ಹಿಂದೆ ಎರಡೂ ಅಧಿಕಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಇದ್ದರೂ, ಆ ಬಳಿಕ ಕಾಂಗ್ರೆಸ್ಸೇತರ ಸರಕಾರಗಳು ಬಂದಾಗ ಆಗಿದ್ದು ಹೀಗೆಯೇ. ಈ ಬಾರಿಯೂ ಇದೇ ಸಂಪ್ರದಾಯ ಅನೂಚಾನವಾಗಿ ಮುಂದುವರಿದಿದೆ. ಹೀಗಾಗಿ ಕೇಂದ್ರದಿಂದ ಬರಬೇಕಾದ ನಿಧಿಯಲ್ಲಿಯೂ ರಾಜಕೀಯ ನಡೆಯುತ್ತದೆ, ಎಲ್ಲ ರೀತಿಯಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗುತ್ತಿರುತ್ತದೆ. ಕೇಂದ್ರವೇನಾದರೂ ನಿಧಿ ಬಿಡುಗಡೆ ಮಾಡಲು ಮನಸ್ಸು ಮಾಡಿತು ಎಂದಿಟ್ಟುಕೊಳ್ಳಿ, ಅದರ ಕ್ರೆಡಿಟ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬೇರೆ ಪಕ್ಷದ ಸರಕಾರಕ್ಕೆ ಹೋಗಬಹುದು ಎಂಬ ಆತಂಕ ಅಲ್ಲಿ ಮನೆಮಾಡಿರುತ್ತದೆ. ಹೀಗಾಗಿ ಅಭಿವೃದ್ಧಿಯ ಕನಸು ಕನಸಾಗಿಯೇ ಉಳಿಯುತ್ತದೆ. ಹಿಂದಿನ ಮತ್ತು ಇತ್ತೀಚೆಗಿನ ಬಜೆಟ್‌ನಲ್ಲಿ ಆಗಿದ್ದೂ ಇದೇ ಅಲ್ಲವೇ?

ಆದರೆ ತಮಿಳುನಾಡಿನಲ್ಲಿ ನೋಡಿ… ಕೇಂದ್ರದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ, ಅವರ ಹಿಂದೆ ರಾಜ್ಯದ ಆಡಳಿತಾರೂಢರು ಸೇರಿಕೊಂಡು ರಾಜ್ಯ ಅಭಿವೃದ್ಧಿಯಲ್ಲಿ ತೊಡಗುತ್ತಾರೆ. ಅಲ್ಲಿ ಆಯ್ಕೆಯಾದ ಯಾರೇ ಆದರೂ ರಾಜ್ಯದ ಉದ್ಧಾರದ ಏಕೈಕ ಉದ್ದೇಶದಿಂದ ಕೇಂದ್ರದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ, ಅವರೊಂದಿಗೆ ಸೇರಿಕೊಳ್ಳುತ್ತಾರೆ. ತಮ್ಮ ರಾಜ್ಯಕ್ಕೆ ಕೋಟಿ ಕೋಟಿ ನಿಧಿಯನ್ನು ಹರಿಸುತ್ತಾರೆ. ಈ ಕಾರಣಕ್ಕೆ ನೆನಪಾಗುವುದು ಪ್ರಾದೇಶಿಕ ಪಕ್ಷಗಳ ಅಗತ್ಯತೆ. ಅಲ್ಲಿ 2004ರ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಪಡೆದುಕೊಂಡ ಡಿಎಂಕೆ, ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ಸಚಿವ ಪಟ್ಟವನ್ನೂ ಗಿಟ್ಟಿಸಿಕೊಂಡಿತು. ಅದಕ್ಕೂ ಮುಂಚೆ ಜಯಲಲಿತಾ ನೇತೃತ್ವದ ಎಐಎಡಿಎಂಕೆಯು ಎನ್‌ಡಿಎ ಜೊತೆ ಸೇರಿಕೊಂಡು ತನ್ನ ರಾಜ್ಯಕ್ಕಾಗಿ ಸಾಕಷ್ಟು ನಿಧಿ ಬಾಚಿಕೊಂಡಿತು. ಒಟ್ಟಿನಲ್ಲಿ ತಮಿಳುನಾಡು ಜನತೆ ಸುಖಿಗಳಾದರು.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯು ಒಂದು ವರ್ಚಸ್ವೀ ನಾಯಕರ ಗಡಣವಿರುವ ಕಾಡಾಕಾಡಿ ಸ್ಪರ್ಧೆ ಎಂದು ಹೇಳಲಾಗದು. ಏನಿದ್ದರೂ ಅದೃಷ್ಟದಾಟ. ಇಲ್ಲಿ ಸಾಧನೆಯನ್ನು ಪಣವಾಗಿಟ್ಟು ಯಾರಾದರೂ ಕಣಕ್ಕಿಳಿಯುತ್ತಾರೆಯೇ? ಖಂಡಿತಾ ಇಲ್ಲ. ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿಯುವ ಹೊಸಬರಿಗೆ ಇದು ಅತ್ಯುತ್ತಮ ವೇದಿಕೆಯಾಗಿ ಮಾರ್ಪಟ್ಟಿದೆಯಷ್ಟೆ. ಈ ಮಾತಿಗೆ ಕಾರಣವೆಂದರೆ, ಕೆಲವೊಂದಷ್ಟು ಕ್ಷೇತ್ರಗಳನ್ನು ಹೊರತುಪಡಿಸಿ, ಹೆಚ್ಚಿನ ಕ್ಷೇತ್ರಗಳಲ್ಲಿ ಸಾಧನೆಯ ಆಧಾರವಿಲ್ಲದೆ, ಚುನಾವಣಾ ಕಣಕ್ಕೆ ಧುಮುಕುವವರೇ ಹೆಚ್ಚು. ಅಷ್ಟು ಮಾತ್ರವೇ? ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕೃತರಾದವರು, ಆ ಪಕ್ಷದಿಂದ ಈ ಪಕ್ಷಕ್ಕೆ ಹಾರುತ್ತಾ ಕಾಲ ಕಳೆಯುತ್ತಿರುವವರು, ಯಾರಪ್ಪಾ ಇದು, ಇಷ್ಟರವರೆಗೆ ಹೆಸರು ಕೇಳಿಯೇ ಇಲ್ಲವಲ್ಲ ಎಂಬ ಭಾವನೆ ಬರುವಂತೆ ಮಾಡುವವರು, ತಮ್ಮ ತಂದೆ-ತಾಯಿಯ ರಾಜಕೀಯ ಸಾಧನೆ, ಹಣಬಲ, ತೋಳ್ಬಲ ಆಧಾರದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟವರ ದಂಡೇ ಹೆಚ್ಚು.

ಸಂಸತ್ತಿಗೆ ಹೊಸ ಮುಖಗಳು, ಯುವ ಮುಖಗಳು ಈ ಬಾರಿ ರಾಜ್ಯದಿಂದ ಹೊರಡುವ ನಿರೀಕ್ಷೆ ಇದೆಯಾದರೂ ಅನುಭವದ ಕೊರತೆ ಮತ್ತು ಪಕ್ಷ ರಾಜಕೀಯಗಳು ಅವರನ್ನು ಕಟ್ಟಿ ಹಾಕದಿದ್ದರೆ, ರಾಜ್ಯಕ್ಕೆ ದೂರದರ್ಶಿತ್ವವುಳ್ಳ, ಪಕ್ಷಭೇದ ಮರೆತು ರಾಜ್ಯದ ಅಭಿವೃದ್ಧಿಯ ಔದಾರ್ಯ ಮನೋಭಾವವಿರುವ ಹೊಸ ಸಂಸದರಿಂದ ಹೊಸ ಭರವಸೆ ನಿರೀಕ್ಷಿಸಬಹುದು. ಇಲ್ಲವಾದರೆ, ‘ಇವರದ್ದು ಬರೀ ಹಾಳು ರಾಜಕೀಯ’ ಅಂದುಕೊಂಡು ಎಂದಿನಂತೆಯೇ ಸುಮ್ಮನಾಗಿಬಿಡಬೇಕಾಗುತ್ತದೆ. ಅಷ್ಟೆ.

[ವೆಬ್ ದುನಿಯಾದಲ್ಲಿ ಪ್ರಕಟವಾದ ಲೇಖನ]

ಅದಕ್ಕಿಲ್ಲದ ಅವಸರ ಇದಕ್ಕೇಕೆ?
ಹೀಗೇ ಯೋಚಿಸ್ತಾ ಕೂತಿದ್ದಾಗ ಹೊಳೆದದ್ದು:

ಪೊಲೀಸರು, ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಐದಾರು ಜನರ ಸಾವಿಗೆ ಕಾರಣವಾಗಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನು ಮಾಡುತ್ತಿರುವ ರೀತಿಯಲ್ಲಿಯೇ, ನೂರಾರು ಜೀವಗಳನ್ನು ಬಲಿತೆಗೆದುಕೊಂಡ ಅಹಮದಾಬಾದ್, ದೆಹಲಿ, ಜೈಪುರ, ಅಸ್ಸಾಂ, ಮುಂಬೈ ಮುಂತಾದೆಡೆ ನಡೆದ ಸರಣಿ ಬಾಂಬ್ ಸ್ಫೋಟಗಳಿಗೂ ಮಾಡಿದ್ದಿದ್ದರೆ, ಒಂದಷ್ಟು ದೇಶದ್ರೋಹಿಗಳನ್ನಾದರೂ ತಮ್ಮ ಕಪಿಮುಷ್ಟಿಯೊಳಗೆ ಸಿಲುಕಿಸಬಹುದಿತ್ತಲ್ವಾ….? ಯಾಕೆಂದರೆ ಎಲ್ಲ ರೀತಿಯ ಅಧಿಕಾರವೂ ಸರಕಾರದ ಕೈಯಲ್ಲಿದೆ.

ಹೀಗೆ ಕೇಳಿದ್ರೆ ಎಲ್ಲಾದ್ರೂ ನಮ್ಮನ್ನು ಕೋಮುವಾದಿ ಅನ್ನಬಹುದು ಎಂಬ ಆತಂಕ ನನಗೆ ಹುಟ್ಟಿಕೊಂಡಿದ್ದು ಸಹಜ ಅಲ್ವಾ? ಯಾಕೆಂದರೆ, ನಾನು ಮಾತೆತ್ತಿದ್ದು “ಹಿಂದೂ”ಗಳು ಸಿಕ್ಕಿಹಾಕಿಕೊಂಡಿರುವ ಮಾಲೆಗಾಂವ್ ಸ್ಫೋಟ ಪ್ರಕರಣದ ಬಗ್ಗೆ ಅಂತ ಬುದ್ಧಿಜೀವಿಗಳು ಖಂಡಿತಾ ಹೇಳುತ್ತಾರೆ ಅಂತ ನನಗೆ ಗೊತ್ತಿದೆ. ಆದರೆ ನಾನು ಇಲ್ಲಿ ವಿಷಯ ಎತ್ತಿದ್ದು, ತನಿಖಾ ಸಂಸ್ಥೆಗಳು ಎಷ್ಟು ಬೇಕಾದರೂ ತಿಣುಕಾಡಲಿ, ಒತ್ತಡಕ್ಕೊಳಗಾಗಲಿ ಅಥವಾ ಯಾವುದೇ ಆಮಿಷಕ್ಕೂ ಈಡಾಗಲಿ. ಆದ್ರೆ, ಅದೇ ಧಾವಂತವನ್ನು, ಅದೇ ಉತ್ಸಾಹವನ್ನು, ಅದೇ ಕರ್ತವ್ಯ ಪ್ರಜ್ಞೆಯನ್ನು ಬೇರೆ ಭಯೋತ್ಪಾದನಾ ಪ್ರಕರಣಗಳಲ್ಲಿಯೂ ತೋರಿಸಿದ್ದಿದ್ದರೆ ಖಂಡಿತವಾಗಿಯೂ ದೇಶದ್ರೋಹಿಗಳು ಸಿಕ್ಕಿಬೀಳುತ್ತಿದ್ದರು ಅಂತ ಮಾತ್ರ ತಾನೇ? ನನಗೇ ಡೌಟ್ ಆಗತೊಡಗಿದೆ ಈಗ!

ನೀವೇನಂತೀರಿ?

‘ನಾಯಕರು’ ಒಳಗೆ, ನೈತಿಕತೆ ಹೊರಗೆ!
ಅಲ್ಲಿ ಚಾರಿತ್ರ್ಯ, ಸನ್ನಡತೆ, ನೈತಿಕತೆ ಮುಂತಾದವುಗಳ ಸುಳಿವಿರಲಿಲ್ಲ. ನಮ್ಮ ನಾಯಕರು ಒಳಗೆ ಬಂದ ತಕ್ಷಣ ಅವುಗಳೆಲ್ಲಾ ಹೊರಗೆ! ವಿಷಯ ಜ್ಞಾನ, ಪೂರ್ವಸಿದ್ಧತೆ ಎಲ್ಲವೂ ಅದೆಲ್ಲೋ ಕೇಳಿದ ಶಬ್ದಗಳಂತಿವೆಯಲ್ಲ ಎಂಬಂತಾಗಿತ್ತು. ಬೆಳಗಾವಿಯ ಅಧಿವೇಶನವನ್ನೊಮ್ಮೆ ಟಿವಿಯಲ್ಲಿ ನೇರಪ್ರಸಾರದಲ್ಲಿ ನೋಡಿದ ರಾಜ್ಯದ ಪ್ರಜೆಗಳು ಇಂಥದ್ದೊಂದು ಆಲೋಚನೆಯ ಸುಳಿಯಲ್ಲಿ ಸಿಲುಕದಿದ್ದರೆ, ಛೀ… ಥೂ… ಅಂದುಕೊಳ್ಳದಿದ್ದರೆ ಮತ್ತೆ ಕೇಳಿ. ಸದನದೊಳಗಿದ್ದ ಯಾರ ಮುಖದಲ್ಲಾದರೂ ರಾಜ್ಯದ ಅಭಿವೃದ್ಧಿ ಬಗೆಗಿನ ಕಾಳಜಿ ಕಂಡುಬರುತ್ತಿತ್ತೇ? ಎಂದು ಟಾರ್ಚ್ ಹಚ್ಚಿ ಹುಡುಕುವಂತಾಗಿತ್ತು ಈ ಬೆಳಗಾವಿ ವಿಧಾನಮಂಡಲ ಅಧಿವೇಶನ.

ಅಷ್ಟೂ ದಿನಗಳ ಕಲಾಪವು ರೆಡ್ಡಿ ಸಹೋದರರು ಮತ್ತು ಎಚ್‌ಡಿ ಸಹೋದರರ ಆರೋಪ-ಪ್ರತ್ಯಾರೋಪಗಳಿಂದೊಡಗೂಡಿದ ವಾಕ್ಸಮರಕ್ಕೆ ಸಮರ್ಥ ವೇದಿಕೆಯಾಯಿತೇ ಹೊರತು, ಸದನದ ಹೊರಗೆ ಜೋರಾಗಿಯೇ ಕೇಳಿಬರುತ್ತಿದ್ದ ಗಡಿ ವಿವಾದವಾಗಲಿ, ರಾಜ್ಯದ ಜನತೆ ಬೆಲೆ ಏರಿಕೆಯಿಂದ ಇನ್ನೂ ತತ್ತರಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವಾಗಲಿ, ಸದನದೊಳಗೆ ಅಪ್ಪಿ ತಪ್ಪಿ ನುಸುಳಿದ್ದು ಕಡಿಮೆ.

ಆಡಳಿತ ಪಕ್ಷದ ಕಡೆಯಿಂದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ ಮತ್ತು ವಿರೋಧ ಪಕ್ಷದ ವತಿಯಿಂದ ಎಚ್.ಡಿ.ಕುಮಾರಸ್ವಾಮಿ-ಎಚ್.ಡಿ.ರೇವಣ್ಣ ಸೋದರರ ಆಟಾಟೋಪ ನೋಡಬೇಕಿತ್ತು. ಪ್ರತಿಯೊಂದು ವಿಷಯದಲ್ಲೂ ಒಬ್ಬರಲ್ಲ ಒಬ್ಬರು ಎದ್ದು ನಿಲ್ಲುತ್ತಿದ್ದುದು ನಮ್ಮ ವ್ಯವಸ್ಥೆಯನ್ನೇ ಅಣಕಿಸಿದಂತಿತ್ತು. (ಇಡೀ ಕಲಾಪದಲ್ಲಿ ಈ ‘ಸೋದರರ ಸವಾಲ್’ ಘಟನಾವಳಿಗಳೇ ಎದ್ದು ಕಾಣುತ್ತಿದ್ದುದರಿಂದ ಅದನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ. ಉಳಿದ ‘ಸವಾಲ್-ಜವಾಬ್’ಗಳೂ ಇದ್ದವೆಂಬುದು ಬೇರೆ ವಿಷಯ.)

ಹೊರಗೆ, ಸಭೆ-ಸಮಾರಂಭಗಳಲ್ಲಿ, ಚುನಾವಣಾ ಭಾಷಣಗಳಲ್ಲಿ ಮಾಡುತ್ತಿದ್ದ ಕೆಸರೆರಚಾಟಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ತೂರಿಬಿಡುತ್ತಿದ್ದ ವಾಕ್ಬಾಣಗಳು ನೇರಾನೇರ ಕದನಕ್ಕೆ ಎದುರು-ಬದುರಾದಾಗ ಮತ್ತೆ ವಿಜೃಂಭಿಸಿದವು. ಹೊರಗೆ ನಡೆಯುತ್ತಿದ್ದದ್ದೇ ಮತ್ತಷ್ಟು ತೀಕ್ಷ್ಣವಾಗಿ ಒಳಗೆ ನಡೆದು ಸಮಯ ವ್ಯರ್ಥವಾಯಿತೇ ಹೊರತು ಅಲ್ಲಿ ಜನಪರ ಕಾಳಜಿಯ ಲವಲೇಶವೂ ಕಂಡುಬಾರದಿರುವುದು ಅಭಿವೃದ್ಧಿ ಬಗೆಗೆ ಜನಪರ ಕಾಳಜಿ, ಚಿಂತನೆ ನಡೆಯಬೇಕಾಗಿದ್ದ ಬೆಳಗಾವಿ ಅಧಿವೇಶನದಲ್ಲಿ ಕಂಡುಬಂದ ವಿಪರ್ಯಾಸ ಪ್ರಸಂಗ.

ಎಂಥ ಪರಿಸ್ಥಿತಿ ಬಂತು ನಮ್ಮ ಸಂವಿಧಾನದ ಪ್ರಮುಖ ಅಂಗವಾಗಿರುವ ಶಾಸಕಾಂಗಕ್ಕೆ! ಒಂದು ಕಾಲವಿತ್ತು. ಸದನದಲ್ಲಿ ಕಲಾಪ ನಡೆಯುತ್ತದೆ ಎಂದಾಗ ಎಲ್ಲ ಸದಸ್ಯರು ಅಂದರೆ ವಿಧಾಯಕವರೇಣ್ಯರು ಯಾವ ರೀತಿಯೆಲ್ಲಾ ವಿಧೇಯರಾಗಿ ತಯಾರಿ ನಡೆಸಿಕೊಂಡು ಸದನದೊಳಕ್ಕೆ ಕಾಲಿಡುತ್ತಿದ್ದರು. ಲೋಕಸಭೆಯಲ್ಲಿ ಏನಾದರೂ ಚರ್ಚೆಯಾಗುತ್ತಿತ್ತೆಂದರೆ, ಅಂದಿನ ಮುತ್ಸದ್ಧಿಗಳಾದ ಪಂಡಿತ್ ನೆಹರೂ, ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಇಂದ್ರಜಿತ್ ಗುಪ್ತಾ, ಹರಕಿಶನ್ ಸಿಂಗ್ ಸುರ್ಜೀತ್ ಮುಂತಾದವರು ನಡೆಸುತ್ತಿದ್ದ ಪೂರ್ವ ತಯಾರಿ ಎಂಥವರಿಗೂ ಆದರ್ಶಪ್ರಾಯ. ಅದೇ ರೀತಿ ಇಂದು ಕೂಡ, ವಿಶೇಷವಾಗಿ ಕಮ್ಯೂನಿಸ್ಟ್ ಪಕ್ಷಗಳಲ್ಲಿ, ಇಂಥ ಪೂರ್ವ ತಯಾರಿಯನ್ನು ಕಾಣಬಹುದಷ್ಟೆ.

ಆದರಿಲ್ಲಿ? ಉತ್ತರ ಕರ್ನಾಟಕದಲ್ಲಿ ಅಧಿವೇಶನ ಯಾಕಾಗಿ ನಡೆಸಲಾಗುತ್ತದೆ ಎಂಬುದರ ಸದುದ್ದೇಶವನ್ನು ಎಲ್ಲರೂ ಮರೆತಂತಿದ್ದರು. ಅದೇನೋ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೊಡುಗೆಗಳ ಮಹಾಪೂರ ಹರಿಸಿ ಕೈತೊಳೆದುಕೊಂಡರೆ ಸಾಕಾಗುವುದಿಲ್ಲ. ಈ ಬಗ್ಗೆ ಒಂದು ಪೂರ್ವ ತಯಾರಿಯ, ಯೋಜನಾಬದ್ಧವಾದ, ದೂರದೃಷ್ಟಿಯ ಯೋಜನೆಯ ಕುರಿತು ಸಮಗ್ರ ಚರ್ಚೆಯಾಗಬೇಕಿತ್ತು, ಎಲ್ಲಿ ಹುಳುಕುಗಳು ಬರಬಹುದು, ಎಲ್ಲಿ ಮತ್ತಷ್ಟು ಅಭಿವೃದ್ಧಿ ಬಗ್ಗೆ ಯೋಚಿಸಬಹುದು ಎಂದೆಲ್ಲಾ ಚಿಂತಿಸಬಹುದಿತ್ತು. ಆದರೆ ಇಡೀ ಅಧಿವೇಶನವನ್ನು ನುಂಗಿಹಾಕಿದ್ದು ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯ “ಪ್ರತಿಷ್ಠೆಯ ಮೇಲಿನ ಚರ್ಚೆ”ಯೇ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಿತು ಎಂದಷ್ಟೇ ಎದೆತಟ್ಟಿಕೊಳ್ಳುವಂತಾಯಿತು.

ಇಡೀ ರಾಜ್ಯದ ಜನತೆ ತಮ್ಮನ್ನು ನೋಡುತ್ತಿದ್ದಾರೆ, ನಮ್ಮ ಅಭಿವೃದ್ಧಿಗಾಗಿಯೇ ನಾವು ಆರಿಸಿ ಕಳುಹಿಸಿದವರು ಅಲ್ಲೇನು ಮಾತನಾಡುತ್ತಾರೆ ಎಂದು ಕೇಳಲು, ನೋಡಲು ಕಾತುರರಾಗಿದ್ದಾರೆ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ, ಅಪಾಪೋಲಿಗಳು ಪರೀಕ್ಷೆಗೆ ಹಾಜರಾಗುವಂತೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಕೈಬೀಸಿಕೊಂಡು ಸದನಕ್ಕೆ ಬಂದವರು ಕೂಡ ಮಾಡೋದು ಬರೇ ಗದ್ದಲ. ಮತ್ತೆ ಕೆಲವರು, ತಮ್ಮ (ಅಪ) ಹಾಸ್ಯ ಪ್ರಜ್ಞೆಯನ್ನು ಮೆರೆಯಲು ಹೋಗಿ, ಗಂಭೀರ ವಿಷಯದ ಮಧ್ಯೆ ಮೂಗು ತೂರಿಸಿ ವಿಷಯಾಂತರ ಮಾಡುತ್ತಲೋ ಕಾಲ ಕಳೆಯುತ್ತಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಇವರಿಗೆ ಗಂಭೀರ ಚರ್ಚೆಯಾಗಬೇಕಿದ್ದ, ಈ ರಾಜ್ಯದ ಪ್ರಕೃತಿಗೇ ಮಾರಕವಾಗಿರುವ ಗಣಿ ಹಗರಣ ಎಂಬ ಆತಂಕಕಾರಿ ವಿಷಯದ ಬಗ್ಗೆ, ಕೇವಲ ರಾಜಕೀಯಕ್ಕಾಗಿ ಮತ್ತು ದ್ವೇಷಸಾಧನೆಗಾಗಿ ವ್ಯರ್ಥ ಚರ್ಚೆ ನಡೆಸಲು ಸಾಧ್ಯವಾಗುತ್ತದೆ, ರಾಜ್ಯದ ಅಭಿವೃದ್ಧಿ ಬಗೆ ಕನಿಷ್ಠ ನಾಲ್ಕಾರು ತಾಸಾದರೂ ಚಿಂತಿಸುವ ಪರಿಜ್ಞಾನ ಬೇಡವೇ ಎಂದು ಕೇಳುವಂತಾಗಿದೆ.

ಲೋಕಾಯುಕ್ತ ವರದಿಯನ್ನೇ ತಿದ್ದುಪಡಿ ಮಾಡಿ, ರಾಜಕೀಯ ತೂರಿಸಿ, ವರದಿಯನ್ನು ತಿರುಚಿರುವ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರು, ಸಹಜವಾಗಿ ಆಕ್ರೋಶಗೊಂಡಿದ್ದಾರೆ, “ಹಾಗಿದ್ದರೆ ನಮ್ಮಿಂದ ತನಿಖೆ ಮಾಡಿಸಿದ್ದೇಕೆ, ಇಷ್ಟು ವರ್ಷ ವೃಥಾ ಶ್ರಮ ಪಡುವಂತೆ ಮಾಡಿದ್ದೇಕೆ, ನೀವು ಮೊದಲೇ ಅರಣ್ಯ ಇಲಾಖೆಯಿಂದಲೇ ವರದಿ ತಯಾರಿಸಿಕೊಳ್ಳಬಹುದಿತ್ತಲ್ಲ” ಎಂಬ ಪ್ರಶ್ನೆಯಲ್ಲಿ ಎಲ್ಲವೂ ಹುದುಗಿದೆ. ಗಣಿಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 36 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು ಹೇಗೆ, ಅದಿರು ಲಾರಿಗಳಿಂದಾಗಿ ರಸ್ತೆಗಳು ಹಾಳಾಗಿ ಎಷ್ಟು ನಷ್ಟವಾಯಿತು, ಅಕ್ರಮ ನಡೆದಿದೆ, ಒತ್ತುವರಿಯಾಗಿದೆ ಎಂಬಿತ್ಯಾದಿಯಾಗಿ ಒಂದೂವರೆ ವರ್ಷ ಸಮಗ್ರ ತನಿಖೆ ನಡೆಸಿ ತಯಾರಿಸಿದ ವರದಿಯನ್ನು ಕೆಲವೇ ಗಂಟೆಗಳಲ್ಲಿ ತಿರಸ್ಕರಿಸಿ ಬದಲಿಸುವುದೆಂದರೆ? ಜನಪ್ರತಿನಿಧಿಗಳ ಈ ವೈಖರಿಗೆ ಜನರೇ ಉತ್ತರ ನೀಡಬೇಕು. ತಮ್ಮ ಶ್ರಮವು ಈ ಸರಕಾರಕ್ಕೆ ತಮಾಷೆಯಾಯಿತೇ ಎಂದು ಲೋಕಾಯುಕ್ತರು ಪ್ರಶ್ನಿಸಿರುವುದರಲ್ಲಿ ಹುರುಳಿಲ್ಲದಿಲ್ಲ. ಸರಕಾರವೇನು ಆಟ ಆಡ್ತಿದೆಯೇ? ಅಂತನೂ ಕೇಳಬಹುದು.

ಈ ಸಂವಿಧಾನದ ಪವಿತ್ರ ಮಂದಿರದೊಳಗೆ ಎಂಥಾ ಮಾತುಗಳು ಉದುರುತ್ತಿದ್ದವು ಎಂಬುದಕ್ಕೆ ಕೆಲವೊಂದು ಸ್ಯಾಂಪಲ್ ನೋಡಿ: ಬಳ್ಳಾರಿ ಏನು ನಿಮ್ ಅಪ್ಪಂದಾ? ಬಳ್ಳಾರಿಗೆ ಬಂದ್ರೆ ಒಂದ್ ಕೈ ನೋಡ್ಕೋತೀವಿ. ನಿಮ್ ಬಗ್ಗೆ ಸೀರಿಯಲ್ ತೆಗೀತೀವಿ, ಹಲ್ಲು ಬಿಗಿ ಹಿಡಿದು ಮಾತಾಡಿ…. ಕಲ್ಲೇಟು, ಚಪ್ಪಲಿಯೇಟು ಮಾಡಿ ಮುಖ್ಯಮಂತ್ರಿಯಾಗಿದ್ದು ನಮಗೊತ್ತಿಲ್ವಾ, ‘ನೀವೆಂತ ಮಾಡಿದ್ದೀರಿ’ ಅಂತ ಅವರು, ‘ನಾವು ಬಾಯಿಬಿಟ್ರೆ ನಿಮ್ಮದೆಲ್ಲಾ ಹೊರಗೆ ಬರ್ತದೆ, ಹೇಳಲಾ’ ಅಂತ ಇವರು ಕೇಳೋದು, ‘ಹೇಳಿ’ ಅಂತ ಅವರು ಹೇಳೋದು… ಇವರು ಇಲ್ಲ ಸಲ್ಲದ್ದನ್ನೆಲ್ಲಾ ‘ಬಿಚ್ಚಿಡುತ್ತಾ’ ಹೋಗೋದು, ಅವರು ಅದನ್ನು ನಿರಾಕರಿಸುತ್ತಾ ಇರೋದು… ಇದರಲ್ಲೇ ಕಾಲಹರಣ ಮಾಡಿದ ಈ ಕಲಾಪದ ಬಗ್ಗೆ ಅಯ್ಯೋ ವಿಧಿಯೇ ಎನ್ನದೆ ಬೇರೆ ದಾರಿಯಿಲ್ಲ.

ಯೋಗ ಪ್ರಾಣಾಯಾಮ ಇತ್ಯಾದಿಗಳನ್ನೆಲ್ಲಾ ಮಾಡಲು ಹೋಗಿ, ಅದನ್ನು ಸದನದಲ್ಲೇ ಪ್ರಯೋಗಿಸುತ್ತಾ, ವಿಭಿನ್ನ ರೀತಿಯ ಭಂಗಿಗಳಲ್ಲಿ, ನಿದ್ರಾಸನಗಳಲ್ಲಿ, ಆರಾಮಾಸನಗಳಲ್ಲಿ ಪವಡಿಸುತ್ತಾ, ತೂಕಡಿಸುತ್ತಾ, ಗಂಭೀರ ವಿಷಯಗಳ ಚರ್ಚೆಯಾಗುತ್ತಿರುವಾಗ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದುದನ್ನು ನೋಡಿದರೆ, ಯಾವ ಪ್ರಜೆಗೂ ಅಸಹ್ಯ ಎನ್ನಿಸದಿರದು. ಇಂಥವರು ನಮ್ಮ “ನಾಯಕರು”! ಹುಡುಕಿದರೆ ಕೈಬೆರಳಿನಷ್ಟು ಸಂಖ್ಯೆಯಲ್ಲಿ ಈ ಆರೋಪಕ್ಕೆ ಅಪವಾದವೂ ಇರಬಹುದು. ಆದರೆ, ಅವುಗಳೆಲ್ಲವೂ ಇಂಥವರಿಂದಾಗಿ ತೆರೆಯಮರೆಗೆ ಸರಿಯುತ್ತಿದ್ದವು.

ಇನ್ನೊಬ್ಬರನ್ನು ಚುಚ್ಚುವುದು, ಕಾಲೆಳೆಯುವುದು ಮನಸ್ಸು ಘಾಸಿಗೊಳಿಸುವುದೇ ಗುರಿಯಾಗಿತ್ತು ಎಂಬುದು ಈ ಕಲಾಪ ನೋಡಿದವರಿಗೆ ವೇದ್ಯವಾಗುತ್ತದೆ. ಬಹುಶಃ ಅವರು ಸದನದಿಂದ ಹೊರಬಂದ ಬಳಿಕ ಬೆಂಬಲಿಗರು “ಚೆನ್ನಾಗಿ ಮಾತಾಡ್ದೆ ಮಗಾ… ಎದುರು ಪಕ್ಷದೋರ‌್ನ ಸರೀಗೆ ಅಟಕಾಯ್ಸಿಬಿಟ್ಟೆ… ಶಭಾಷ್” ಎಂಬ ಮಾತು ಕೇಳಲೆಂದೇ ಸದನಕ್ಕೆ ಹಾಜರಾಗುವಂತೆ ಸಾಮಾನ್ಯ ನೋಡುಗನಿಗೆ ಅನ್ನಿಸದಿರದು.

ರಾಜ್ಯದ ಅಭಿವೃದ್ಧಿಗೇನಾದರೂ ಉಪಕಾರವಾಯಿತೋ? ಛೆ, ಅದರ ಬಗ್ಗೆ ಏನು ಕೇಳುತ್ತೀರಿ…. ಬೆಳಗಾವಿಯಲ್ಲಿ ಅಧಿವೇಶನ ಮಾಡುವ ಮೂಲಕ ಉತ್ತರ ಕರ್ನಾಟಕವನ್ನೇ ಅಭಿವೃದ್ಧಿಪಡಿಸಿದ್ದೇವೆ ಅಂತ ಬೀಗಬಹುದು, ಅಷ್ಟು ಕೋಟಿ ಬಿಡುಗಡೆ ಮಾಡಿದ್ದೇವೆ ಅಂತಾನೂ ಎದೆತಟ್ಟಿಕೊಂಡು ಹೇಳಬಹುದು. ಆದರೆ ಅದರ ಅನುಷ್ಠಾನ? ಅದರ ಬಗ್ಗೆ ಕೇಳಲೇಬೇಡಿ!

ವಿಧಾನಮಂಡಲ ಕಲಾಪವನ್ನು ನೋಡಿದರೆ, ಎಲ್ಲೋ ಅಪಾಪೋಲಿಗಳ ಬೀದಿ ಜಗಳವನ್ನು ನೋಡಿದ ಹಾಗಾಗುತ್ತಿತ್ತು ಅಂತ ಓದುಗರೊಬ್ಬರ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸದೆ ವಿಧಿಯಿಲ್ಲ. ಒಟ್ಟಿನಲ್ಲಿ ಬೆಂಗಳೂರಿನ ಅವಸರದ, ಯಾಂತ್ರಿಕ ಬದುಕಿನಿಂದ ಒಂದಷ್ಟು ಮುಕ್ತರಾಗಿ, ಬೆಳಗಾವಿಯ ಹವೆಯಲ್ಲಿ ಒಳ್ಳೆಯ ಮನರಂಜನಾ ಯಾತ್ರೆಯನ್ನು, ಜತೆ ಜತೆಗೇ ಪಕ್ಕದ ಗೋವಾಕ್ಕೆ “ತೀರ್ಥ”ಯಾತ್ರೆಯನ್ನೂ ಮಾಡಿಸಿಕೊಂಡು ಬಂದರು ಎಂಬ ಮಾತ್ರಕ್ಕೇ ಈ ಅಧಿವೇಶನ ಸಾರ್ಥಕವಾಯಿತು.

ಈ ರೀತಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ, ರಾಜ್ಯದ ಜನತೆಯ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದ್ದು, ಪರಸ್ಪರ ದೂಷಣೆಗಾಗಿಯೇ? ಸದನದ ಪಾವಿತ್ರ್ಯ, ಗೌರವವನ್ನೇ ಗಾಳಿಗೆ ತೂರಿದ, ಸದನದ ಗಾಂಭೀರ್ಯ ಎಲ್ಲಿ ಹೋಯಿತೂಂತ ಸೂಕ್ಷ್ಮ ದರ್ಶಕ ಹಿಡಿದು ಹುಡುಕಬೇಕಾದ ಪರಿಸ್ಥಿತಿ ತಂದೊಡ್ಡಿದ ಈ ಅಧಿವೇಶನ ಯಾವ ಪುರುಷಾರ್ಥ ಸಾಧಿಸಿದಂತಾಯಿತು? ಓ ಜನಪ್ರತಿನಿಧಿಗಳೇ ಒಂದಿಷ್ಟಾದರೂ ಆತ್ಮಾವಲೋಕನ ಮಾಡಿಕೊಳ್ಳಿ.

(ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟ)

ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
ಇದು ಅತಿಯಾಯಿತು. ಕೆಟ್ಟ ಮೇಲೂ ಬುದ್ಧಿ ಬಾರದಿದ್ದರೆ ಅದಕ್ಕೆ ತಕ್ಕ ಶಾಸ್ತಿಯಾಗಲೇಬೇಕು. ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲುಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಕರ್ನಾಟಕ ವಿರೋಧಿ ಸಮಿತಿಯು, ಈಗಾಗಲೇ ತನ್ನ ಆಂತರಿಕ ಒಡಕಿನಿಂದ ಕುಲಗೆಟ್ಟು ಹೋಗುತ್ತಿದ್ದರೂ, ರಾಜ್ಯವನ್ನು ಒಡೆಯಬೇಕು, ಉಭಯ ರಾಜ್ಯಗಳ ನಡುವೆ ಅಶಾಂತಿಯ ವಾತಾವರಣ ಸೃಷ್ಟಿಸಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಭಾಷೆಯ ಹೆಸರಿನಲ್ಲಿ ದ್ವೇಷದ ಕಿಚ್ಚು ಹಚ್ಚಲು ಹೊರಟಿದೆ. ಕನ್ನಡಿಗರ ಸ್ವಾಭಿಮಾನವನ್ನು ಮತ್ತೆ ಕೆದಕಲು ಹೊರಟಿದೆ.

ಪ್ರಜಾಪ್ರಭುತ್ವ ಸರಕಾರಕ್ಕೇ ಸವಾಲೊಡ್ಡುವಷ್ಟರ ಮಟ್ಟಕ್ಕೆ ಈ ಸಣ್ಣ ಸಂಘಟನೆಯೊಂದು ಸಣ್ಣತನ ಮೆರೆಯುತ್ತಲೇ ಬಂದು ತಲುಪಿದೆ ಎಂದರೆ ಅವರ ಮನಸ್ಥಿತಿ ಎಷ್ಟರ ಮಟ್ಟಿಗಿದೆ ಎಂಬುದು ಅರಿವಿಗೆ ಬಂದೀತು. ಆಂತರಿಕ ಗೊಂದಲಗಳಿಂದ ಹೊರಬರುವುದಕ್ಕೆ ಹೆಣಗಾಡುತ್ತಿರುವ ಅದು, ಆಗಾಗ್ಗೆ ತನ್ನ ಪುಂಡಾಟಿಕೆಯ ಕ್ರಮಗಳಿಂದಾಗಿ ಜನರೆದುರು ನಗೆಪಾಟಲಿಗೀಡಾಗುತ್ತಿದ್ದರೂ, ಇಲ್ಲಿ ಗಲಭೆಯ ಕಿಡಿ ಹೊತ್ತಿಸಲು, ಅಂಥವರನ್ನೇ ಕರೆಸುವ ಸಂಚು ನಡೆಸಿತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ. ಇಡೀ ದೇಶದ ಏಕತೆಗೇ ಧಕ್ಕೆ ತಂದೊಡ್ಡಿರುವ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಕರೆಸಲು ಯೋಜಿಸಿದ್ದೂ ಅದೇ ಕಾರಣಕ್ಕಾಗಿ- ಆತ ಬಂದಲ್ಲಿ, ತನ್ನ ಹರಿತ ನಾಲಿಗೆಯ ಮೂಲಕ, ಭೀಷಣ ಭಾಷಣದ ಮೂಲಕ ಜನರನ್ನು ಕೆರಳಿಸಿ, ಶಾಂತಿಗೆ ಬೆಂಕಿ ಹಚ್ಚಿ ಹೋಗುತ್ತಾರೆ ಎಂಬುದು ಯಾರಿಗೂ ಅರ್ಥವಾಗದ ಸಂಗತಿಯೇನಲ್ಲ.

ಬೆಳಗಾವಿ, ಕಾರವಾರ, ಖಾನಾಪುರ, ನಿಪ್ಪಾಣಿ ಮುಂತಾಗಿ ಕರ್ನಾಟಕದ ಸುಮಾರು 856 ನಗರಗಳು, ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡುತ್ತಿರುವ ಎಂಇಎಸ್, ಕರ್ನಾಟಕದ ಶಕ್ತಿ ಕೇಂದ್ರವಾದ ಸರಕಾರವೇ ಬೆಳಗಾವಿಗೆ ಬಂದು ಅಧಿವೇಶನ ಮಾಡುತ್ತಿರುವುದರಿಂದ ಉಡುಪಿನೊಳಗೆ ಇರುವೆ ಬಿಟ್ಟುಕೊಂಡಂತೆ ಆಡುತ್ತಿದೆ. ಈ ಕಾರಣಕ್ಕಾಗಿಯೇ ಅದು ‘ಮಹಾ ಮೇಳಾವ’ ಎಂಬ ಮರಾಠಿಗರ ಸಮಾವೇಶ ನಡೆಸಲು ಸಿದ್ಧವಾಗಿದ್ದು. ವಿಧಾನಮಂಡಲದ ಅಧಿವೇಶನಕ್ಕೆ ಸೆಡ್ಡು ಹೊಡೆದು ಸಮಾವೇಶ ನಡೆಸಲು ಇಂಥ ಧಾರ್ಷ್ಟ್ಯ ಅವರಿಗೆ ಬಂದದ್ದಾದರೂ ಎಲ್ಲಿಂದ? ಮಹಾರಾಷ್ಟ್ರದ ಸೋ ಕಾಲ್ಡ್ “ಮರಾಠಿಗರ ರಕ್ಷಣೆಯ ನೇತಾರರು” ಎಂದು ಹೇಳಿಕೊಳ್ಳುತ್ತಿರುವವರ ಚಿತಾವಣೆಯೇ ಅಲ್ಲವೇ? ಇಲ್ಲವಾದಲ್ಲಿ, ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದ, ಮಹಾರಾಷ್ಟ್ರದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದ ಎನ್.ಡಿ.ಪಾಟೀಲ, ಪರ ರಾಜ್ಯಕ್ಕೆ ಬಂದು ಪುಂಡಾಟ ಮಾಡುತ್ತಿರುವವರಿಗೆ ಕುಮ್ಮಕ್ಕು ಕೊಡುತ್ತಿದ್ದರೇ? ದಶಕಗಳಷ್ಟು ಹಳೆಯ ಈ ಗಡಿ ವಿವಾದಕ್ಕೆ ಇನ್ನು ಕೂಡ ಪರಿಹಾರ ದೊರೆಯದಿರುವುದಕ್ಕೆ ಇಂಥ ಓಟ್ ಬ್ಯಾಂಕ್ ರಾಜಕಾರಣ, ಭಾಷಾಂಧತೆಗಳೇ ಕಾರಣ ಎಂಬುದಂತೂ ಇಲ್ಲಿ ಸ್ಪಷ್ಟವಾಗುತ್ತಿದೆ.

ತಮ್ಮ ರಾಜ್ಯದಿಂದ ಬಿಹಾರಿಗಳನ್ನು, ಉತ್ತರ ಭಾರತೀಯರನ್ನು ಒದ್ದೋಡುತ್ತಿಸುತ್ತಿದ್ದವರು ಇದೀಗ, ಕರ್ನಾಟಕದ ಅನ್ನ ತಿಂದು “ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಿ” ಎಂದು ವ್ಯರ್ಥಾಲಾಪ ಮಾಡುತ್ತಿರುವವರ ಮೇಲೆ ‘ದೌರ್ಜನ್ಯ ನಡೆಯುತ್ತಿದೆ, ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ, ಯಡಿಯೂರಪ್ಪ ಸರಕಾರ ಮರಾಠಿಗರ ತಲೆ ಒಡೆಯುತ್ತಿದೆ’ ಎಂದು ಹುಯಿಲೆಬ್ಬಿಸುತ್ತಿರುವುದು ವಿಪರ್ಯಾಸವಲ್ಲವೇ? ಈ ಹಿಂದೆಯೂ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆದಾಗಲೂ ಮೈಪರಚಿಕೊಂಡಿದ್ದ ಈ ಎಂಇಎಸ್, ತದನಂತರ ಬೆಳಗಾವಿ ಮಹಾನಗರ ಪಾಲಿಕೆಯ ಹಿಡಿತ ಕಳೆದುಕೊಂಡರೂ, ವಿಧಾನ ಸಭೆ ಚುನಾವಣೆಯಲ್ಲಿ ಜನತೆಯಿಂದ ಪಾಠ ಹೇಳಿಸಿಕೊಂಡು ಎರಡನೇ ಆಘಾತ ಅನುಭವಿಸಿದರೂ, ಬುದ್ಧಿ ಕಲಿತಂತೆ ತೋರುತ್ತಿಲ್ಲ.

2008ರ ಮೇ ತಿಂಗಳಲ್ಲಿ ಚುನಾವಣೆಯಲ್ಲಿ ಎಂಇಎಸ್‌ನ ಬೆಳಗಾವಿ ಶಾಸಕರಾಗಿದ್ದ ಮನೋಹರ ಕಿಣೇಕರ್ ಮತ್ತು ಖಾನಾಪುರ ಶಾಸಕ ದಿಗಂಬರ ಪಾಟೀಲ ಅವರನ್ನು ಹೆಸರಿಲ್ಲದಂತೆ ಜನರು ತಿರಸ್ಕರಿಸಿ, ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದರು. ಮನೋಹರ ಕಿಣೇಕರ್ ಕ್ಷೇತ್ರದಲ್ಲಂತೂ 73 ಸಾವಿರ ಮರಾಠಿಗರಿದ್ದಾರೆ ಎಂದು ಹೇಳಿಕೊಳ್ಳಲಾಗುತ್ತಿದ್ದರೂ, ಎಂಇಎಸ್‌ಗೆ ಇಲ್ಲಿ ದೊರೆತ ಮತಗಳು 10 ಸಾವಿರಕ್ಕೂ ಕಡಿಮೆ! ಅಂದರೆ ಜನರು ಭಾಷಾ ರಾಜಕೀಯವನ್ನು ತಿರಸ್ಕರಿಸಿ ಅಭಿವೃದ್ಧಿ ಬಯಸಿ ಪ್ರೌಢಿಮೆ ಮೆರೆದಿದ್ದರು. ಮರಾಠಿಗರೇ ಹೆಚ್ಚಾಗಿರುವ ಬೆಳಗಾವಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನ ಗೆದ್ದುಕೊಳ್ಳಲು ಮತ್ತು ಇದ್ದ ಸ್ಥಾನ ಉಳಿಸಿಕೊಳ್ಳಲೂ ಎಂಇಎಸ್ ವಿಫಲವಾಗಿರುವುದು ಅದರ ರಾಜ್ಯ ಒಡೆಯುವ ರಾಜಕೀಯಕ್ಕೆ ಸ್ಥಳೀಯರು ನೀಡಿದ ದಿಟ್ಟ ಉತ್ತರ.

ಭಾಷೆಯ ಹೆಸರಿನಲ್ಲಿ ಜನರ ಮನಸ್ಸು ಒಡೆಯುವುದು, ಅಶಾಂತಿ ಮೂಡಿಸುವುದು ಅಕ್ಷಮ್ಯ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದೊಂದೇ ಅವರ ಏಕೈಕ ಉದ್ದೇಶವೆಂಬುದು ಜನರಿಗೆ ತಿಳಿದಿದೆ. ಇಷ್ಟಾದರೂ “ನಾವು ಮರಾಠಿಗರ ಹಿತರಕ್ಷಕರು” ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವವರು ಬದಲಾಗುವ ಲಕ್ಷಣಗಳು ತೋರುತ್ತಿಲ್ಲ.

ಗಡಿ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡುತ್ತಿರುವ ಇದೇ ಎಂಇಎಸ್ ಕಾರ್ಯಕರ್ತರು, ನಮ್ಮದೇ ರಾಜ್ಯದ ಸರಕಾರಿ ಬಸ್ಸುಗಳಿಗೆ, ಪೊಲೀಸ್ ಜೀಪುಗಳಿಗೆ ಕಲ್ಲೆಸೆಯುತ್ತಾರೆ. ಬ್ಯಾಂಕಿಗೆ ಕಲ್ಲೆಸೆಯುತ್ತಾರೆ. ಇವರ ಪುಂಡಾಟಿಕೆ ನಿಯಂತ್ರಿಸಲು ಪೊಲೀಸರು ಬೇರೆ ದಾರಿಗಾಣದೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದನ್ನೇ ಮಹಾರಾಷ್ಟ್ರದಲ್ಲಿ ಕುಳಿತ ನಾಯಕರು “ದನಕ್ಕೆ ಬಡಿದಂತೆ ಬಡಿದರು” ಎಂದು ಹುಯಿಲೆಬ್ಬಿಸಿದ್ದು. ಕಾನೂನು ಯಾರಿಗಾದರೂ ಒಂದೇ. ಬೆಳಗಾವಿಯಲ್ಲಿ ಎರಡನೇ ಬಾರಿಗೆ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದರೂ ಪಾಲಿಕೆ ಕಟ್ಟಡದಲ್ಲಿ ಕನ್ನಡ ಧ್ವಜವೇಕಿಲ್ಲ ಎಂದು ನ್ಯಾಯಬದ್ಧವಾಗಿ ಪ್ರಶ್ನಿಸಿದರೂ, ನಿಷೇಧಾಜ್ಞೆ ಸಂದರ್ಭದಲ್ಲಿ ಪ್ರತಿಭಟನೆಗಿಳಿದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಯ ಬಣದ ಕಾರ್ಯಕರ್ತರನ್ನು ಚದುರಿಸಲೂ ಪೊಲೀಸರು ಲಾಠಿ ಬೀಸಿದ್ದರು. ಹಾಗಂತ, ಕನ್ನಡಿಗರ ಮೇಲೂ ಪೊಲೀಸರು ಪ್ರಾಣಿಗೆ ಬಡಿದಂತೆ ಬಡಿದಿದ್ದಾರೆ ಎಂದು ಹೇಳಿದರೆ ಹೇಗಾದೀತು?

ಖಾನಾಪುರದಲ್ಲಿ “ಮಹಾ ಮೇಳ” (ಮರಾಠಿಯಲ್ಲಿ ಮಹಾ ಮೇಳಾವ್) ನಡೆಸಲು ಸಿದ್ಧತೆಗಳಾಗಿದ್ದರೂ, ಅಲ್ಲಿನ ಜಿಲ್ಲಾಡಳಿತವು ಇದನ್ನು ನಿಷೇಧಿಸಿದೆ. ಹೀಗಾಗಿ ಬಂಧನದ ಭೀತಿಯಿಂದ ಅದರ ಮುಖಂಡರೇ ಒಂದೊಂದೇ ನೆಪ ಹೇಳಿ ಜಾರಿಕೊಂಡಿರುವುದು ಏಕೀಕರಣ ಸಮಿತಿಯ “ಏಕತೆ”ಯ ಬಲ ಎಷ್ಟಿದೆ ಎಂಬುದರ ಪ್ರತೀಕ. ಮೇಳಾವ್‌ಗೆ ಕುಮ್ಮಕ್ಕು ನೀಡುತ್ತಿದ್ದ ಮಾಜಿ ಶಾಸಕ ದಿಗಂಬರ ಪಾಟೀಲ, ವಸಂತರಾವ್ ಪಾಟೀಲ ಅವರು ಬೆಳಗಾವಿಯಲ್ಲಿ ಬಂಧನಕ್ಕೊಳಗಾಗುವ ಮೂಲಕ ಮೇಳಾವ್ ತಪ್ಪಿಸಿಕೊಂಡಿದ್ದರೆ, ಅವರ ಜತೆಗಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾಜಿ ಸಚಿವ ವಿ.ವೈ.ಚವ್ಹಾಣ ಅವರಂತೂ ಅನಾರೋಗ್ಯದಿಂದ ಕೊಲ್ಲಾಪುರ ಸೇರಿದ್ದಾರೆ. ಹೀಗಾಗಿ ಖಾನಾಪುರದಲ್ಲಿ ಮೇಳಾವ್ ಬಗ್ಗೆ ಅಂಥ ಪ್ರತಿಕ್ರಿಯೆಯೇನೂ ಕಂಡುಬರಲಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿಯೂ ಅವರು ಸಮಾವೇಶ ನಡೆಸಿಯೇ ತೀರುತ್ತೇವೆ ಎಂದು ಹೊರಟಿರುವುದು ನೆಲದ ಕಾನೂನಿನ ಬಗ್ಗೆ ಎಂಇಎಸ್‌ನವರಿಗೆಷ್ಟು ಗೌರವವಿದೆ ಮತ್ತು ಅವರ ಉದ್ದೇಶವೇನು ಎಂಬುದನ್ನು ಬಟಾಬಯಲಾಗಿಸಿದೆ.

ಕನ್ನಡ ನಾಡೊಳಗೇ ಇದ್ದುಕೊಂಡು, ರಾಜ್ಯವನ್ನು ಒಡೀತೀವಿ ಎನ್ನೋ ದುಸ್ಸಾಹಸಕ್ಕೆ ಕೈಹಾಕಿರುವುದು ಎಂಇಎಸ್ ಇದೇ ಮೊದಲೇನಲ್ಲ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಬೆಳಗಾವಿಯಲ್ಲಿ ವಿಧಾನಸಭೆಯ ಪ್ರಥಮ ಅಧಿವೇಶನ ನಡೆದಾಗಲೂ ಎಂಇಎಸ್ ಇದೇ ರೀತಿ ಕೂಗಾಡಿತ್ತು. ಇತ್ತೀಚೆಗಷ್ಟೇ ಮುಂಬಯಿ ದಾಳಿ ಪ್ರಕರಣದಲ್ಲಿ ಅಸಂಬದ್ಧ ಹೇಳಿಕೆಗಳಿಗಾಗಿ ಉಪಮುಖ್ಯಮಂತ್ರಿ/ಗೃಹ ಸಚಿವ ಪಟ್ಟ ಕಳೆದುಕೊಂಡಿದ್ದ ಆರ್.ಆರ್.ಪಾಟೀಲ್ ಅಂದು ಅಲ್ಲಿಗೆ ಬಂದು, ತಮ್ಮ ಅದೇ ಅಸಂಬದ್ಧ ಹೇಳಿಕೆಗಳ ಮೂಲಕ ಹುಳಿ ಹಿಂಡಿ ಹೋಗಿದ್ದರು. ಈ ವರ್ಷವೂ ಆಗಿದ್ದು ಅದೇ, ರಾಮದಾಸ್ ಕದಂ ಎಂಬ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ನಮ್ಮ ನೆಲಕ್ಕೆ ಬಂದು, ಮುಂಬಯಿಯಲ್ಲಿ ಕನ್ನಡಿಗರನ್ನು ಬಿಡುವುದಿಲ್ಲ ಎಂಬ ಬೆಂಕಿ ಹಚ್ಚಿ ಹೋಗಿದ್ದಾರೆ. ಹೀಗಾಗಿ, ಕನ್ನಡ ಮಣ್ಣಿನಲ್ಲೇ ಮರಾಠೀ ಮೇಳಕ್ಕೆ ಅನುಮತಿ ಕೊಟ್ಟು, ಕನ್ನಡ ಮಕ್ಕಳಿಗೆ ಉಗೀರಿ ಅಂತ ಯಾರಾದರೂ ಹೇಳುತ್ತಾರೆಯೇ? ಸಾಧ್ಯವಿಲ್ಲದ ಮಾತು.

ಪ್ರತಿವರ್ಷ ನವೆಂಬರ್ 1ರಂದು ಇಡೀ ರಾಜ್ಯವೇ ರಾಜ್ಯೋತ್ಸವ ಸಡಗರದಲ್ಲಿದ್ದರೆ ಇದೇ ಎಂಇಎಸ್ ಅಂದು ಕರಾಳ ದಿನವನ್ನಾಗಿ ಆಚರಿಸುತ್ತಿದೆ. ಹೀಗಾಗಿ, ಸರಕಾರ ಈ ಬಗ್ಗೆ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಳ್ಳಬೇಕು. ಯಾವತ್ತಿಗೂ ರಾಜ್ಯ ಒಡೆಯುವ, ಭಾಷಾ ಸಾಮರಸ್ಯ ಕದಡುವ ಇಂಥ ಶಕ್ತಿಗಳಿಗೆ ಸೊಲ್ಲೆತ್ತಲು ಅವಕಾಶ ಕೊಡಲೇಬಾರದು.

(ಇದು ವೆಬ್‌ದುನಿಯಾದಲ್ಲಿ ಪ್ರಕಟ)

ಅಂತಕನ ಆತಂಕ ಮರೆಸಲೀ ನವ ವಸಂತ
ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಮೊನ್ನೆ ಮೊನ್ನೆಯಷ್ಟೇ ಮನೆಯ ಗೋಡೆಯಲ್ಲಿದ್ದ ಕ್ಯಾಲೆಂಡರ್ ಬದಲಾಯಿಸಿದ್ದವಲ್ಲ…? ಇಷ್ಟು ಬೇಗ ಕಳೆದು ಹೋಯಿತೇ ಈ ಒಂದು ವರ್ಷ? ಅಬ್ಬ, ಹೇಗಾದ್ರೂ ಮುಗೀತು. ಇಷ್ಟೊಂದು ದುರಂತಮಯ ವರ್ಷ ಇದುವರೆಗೆ ಕಂಡಿಲ್ಲ ಅನ್ನೋ ಭಾವನೆ ಸುಳಿದು ಮಾಯವಾಗುತ್ತದೆ. ಬಹುಶಃ ಇದು ಪ್ರತಿಯೊಬ್ಬರನ್ನೂ ಪ್ರತಿ ವರ್ಷವೂ ಕಾಡುವ ಸಂಗತಿ ಎಂಬುದೇ ವಿಶೇಷ. ನೋವಿಗೆ ಕೊನೆಯಿಲ್ಲ ಹೇಗೆಯೋ, ಹಾಗೆಯೇ ನಲಿವಿಗೂ ಕೂಡ. ನೋವಿನ ಹಿಂದೆ ನಲಿವಿನ ಮೆರವಣಿಗೆ. ಇದು ಜೀವನ.

ಸಂಘ ಜೀವಿಯಾದ ಮಾನವನಿಗೆ ಸಂಭ್ರಮಿಸುವುದಕ್ಕೆ ಕಾರಣಗಳು ಬೇಕಿಲ್ಲ. ಕ್ರಿಸ್ತ ಶಕೆ ಆರಂಭವಾದ ದಿನ ಎಂಬ ಕಾರಣಕ್ಕೆ ಜನವರಿ 1ನ್ನು ವಿಶ್ವವೇ ಹೊಸ ವರ್ಷದ ದಿನ ಎಂದು ಒಪ್ಪಿಕೊಂಡು ಅಪ್ಪಿಕೊಂಡು ಸಂಭ್ರಮದಿಂದ ನಲಿದಾಡುತ್ತಿದ್ದರೆ, ಇಂಗ್ಲಿಷ್ ಕ್ಯಾಲೆಂಡರನ್ನೇ ಅನುಸರಿಸುವ ಭಾರತೀಯರೂ ಇದನ್ನು ಆಚರಿಸುವುದರಲ್ಲಿ ತಪ್ಪಿಲ್ಲ ಎಂಬ ಸಮರ್ಥನೆಯೊಂದಿಗೆ, ಮತ್ತೊಂದು ಹೊಸ ವರ್ಷದಾಚರಣೆ ಬಂದಿದ್ದಂತೂ ನಿಜ.

ಹಳೆಯ ನೋವುಗಳನ್ನು ಮರೆತು, ಹೊಸ ನಿರೀಕ್ಷೆಗಳಿಗೆ ಒಡ್ಡಿಕೊಳ್ಳುವುದೋ, ಅಥವಾ ಹೊಸ ಹೊಸದಾದ ಚಿತ್ರ ವಿಚಿತ್ರ ನೋವುಗಳಿಗೆ ಮನಸ್ಸನ್ನು ಸಜ್ಜುಗೊಳಿಸುವುದೋ… ಜನರು ಇದನ್ನು ಬಹಿರಂಗದಲ್ಲಿ ಅಲ್ಲದಿದ್ದರೂ ಆಂತರಂಗಿಕವಾಗಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ವ್ಯಾಖ್ಯಾನಿಸಬಹುದು. ಇಂಥದ್ದೊಂದು ನಿರಾಶಾವಾದಕ್ಕೆ ಕಾರಣವೇನು? ಸಂದು ಹೋದ ವರ್ಷವು ಅಚ್ಚಳಿಯದಂತೆ ಪಡಿಮೂಡಿಸಿದ ದುರಂತಮಯ ಕ್ಷಣಗಳು, ಹಿಂಸಾ ಸರಣಿಗಳು, ರಾಜಕಾರಣಿಗಳ ಅರಾಜಕ ನೀತಿಗಳು, ಮತ್ತು ಇನ್ನೇನು ಈ ವರ್ಷ ಮುಗಿಯಿತೆನ್ನುವಾಗ ಧುತ್ತನೇ ಎದುರಾದ ಹಣಕಾಸಿನ ಬಿಕ್ಕಟ್ಟು, ಜತೆಗೇ ಮುಂಬಯಿ ದಾಳಿಯ ಕರಾಳ ಮುಖ.

ಕಾಲನಿಗೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಈ ಮಾತು ನೋವಿನ ಕ್ಷಣಗಳಿಗೂ ಹೊರತಲ್ಲ. ಕಾಲನ ಬದಲಾವಣೆ ಅನಿವಾರ್ಯ. ಹಳೆಯ ಯುಗ ಕಳೆದು ಹೊಸ ಯುಗವೊಂದರ ಉದಯವಾಗುತ್ತಲೇ ಹೊಸ ಹೊಸ ನಿರೀಕ್ಷೆಗಳು, ಸಡಗರ ಸಂಭ್ರಮಗಳ ಚಿಲುಮೆಯಾಗಲು, ಹೊಸ ವರ್ಷದ ಆಚರಣೆಯು ಒಂದು ವೇದಿಕೆ ಒದಗಿಸುತ್ತದಷ್ಟೆ. ಯಾಕೆಂದರೆ ಮನುಷ್ಯ ಯಾವತ್ತೂ ಭವ್ಯ ಭವಿತವ್ಯದ ನಿರೀಕ್ಷೆಯಲ್ಲೇ ಬದುಕುತ್ತಿರುವವನು. ಈಗೇನಿದ್ದರೇನಂತೆ, ಮುಂದೊಂದು ದಿನ ಎಲ್ಲವೂ ಸರಿ ಹೋದೀತು ಅಂತ ಆ ವರ್ಷದಲ್ಲಿ ಕುಗ್ಗಿ ಹೋದವರು ಆಶಾಭಾವನೆಯಿಂದ ಹೊಸ ವರ್ಷಕ್ಕೆ ಕಾಲಿಟ್ಟರೆ, ಈಗಿನ ಸುಖ ಸಂತಸಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು, ಜೀವನವನ್ನು ಪರಿಪೂರ್ಣವಾಗಿ ಅನುಭವಿಸಲು ಮಗದೊಂದು ವರುಷ ಬಂದು ಪುನರಪಿ ಅವಕಾಶ ನೀಡಲಿದೆ ಎಂಬ ಯೋಚನೆ, ಅದಾಗಲೇ ಸುಖ ಸಂತೋಷದಲ್ಲಿ ತೇಲಾಡುತ್ತಿರುವವರ ಮನದಲ್ಲಿ.

ಈ ನಿರೀಕ್ಷೆಗಳೇ ತಾನೇ ಮಾನವ ಜೀವನವನ್ನು ರಂಗು ರಂಗಾಗಿಸುವುದು? ಆತನ ಮನದ ಈ ತುಡಿತಗಳೇ ಬರಲಿರುವ ಭವಿಷ್ಯತ್ತಿನ ಸವಾಲುಗಳನ್ನು ಎದುರಿಸಲು ಪ್ರೇರಣೆಯೂ ಆಗುತ್ತದೆ. ಕವಿವಾಣಿಯಂತೆ, ಬಯಕೆ ತೋಟದ ಬೇಲಿಯೊಳಗೆ ಹೊಸ ನಿರೀಕ್ಷೆಗಳು ರಿಂಗಣಿಸುತ್ತಲೇ ಇರುತ್ತವೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? ಅಂತಲೂ ಕೇಳಿದ್ದಾರೆ ಅಡಿಗರು. ಕವಿಯ ಆಶಯವೇನಿತ್ತೋ… ಆದರೆ ಈ ಸಾಲು ನೀಡುವ ಅರ್ಥ ನೂರಾರು. ಇದರ ಕೊನೆಯಲ್ಲಿ ದೃಢ ಭಾವ ಇಲ್ಲ, ಬದಲಾಗಿ ಪ್ರಶ್ನಾರ್ಥಕ ಚಿಹ್ನೆಯಿದೆ. ಬದುಕು ಕೂಡ ಇದೇ ರೀತಿ ಪ್ರಶ್ನಾರ್ಥಕವಾಗಿಯೇ ಮುನ್ನಡೆಯುತ್ತಿರುವ ಪಯಣ.

ಹೊಸ ವರ್ಷದ ಮೆಟ್ಟಿಲೇರುವ ಮುಂಚೆಯೊಮ್ಮೆ ಹಳೆಯ ವರ್ಷದ ಮೆಟ್ಟಿಲಲ್ಲಿ ನಿಂತು, ಏರಿ ಬಂದ ಪಯಣದ ಹಾದಿಯ ಹಿಂದೊಮ್ಮೆ ದೃಷ್ಟಿ ಹರಿಸಿ, ಶನಿ ಹೋಯಿತು ಅಂತ ಹಳೆಯ ನೋವುಗಳನ್ನೆಲ್ಲಾ ಮರೆತು ನೆಮ್ಮದಿಯ ನಿಟ್ಟುಸಿರಿನೊಂದಿಗೆ ಹೊಸ ಬದುಕಿಗೆ ಅಡಿಯಿಡೋಣ. ಬದುಕು ಭವಿತವ್ಯ ಸವಿಜೇನಾಗಲಿ, ಸುಖದ ಗೂಡಾಗಲಿ, ಸಂತಸದ ಹೊನಲಾಗಲಿ.

ನಾಳೆ ಎಲ್ಲವೂ ಬದಲಾಗುತ್ತದೆ, ಹೊಸ ಸಂವತ್ಸರ, ಹೊಸ ರೂಪ, ಹೊಸ ಹೊಳಪು, ಹೊಳ ದಿಕ್ಕು, ಹೊಸ ಗಾಳಿ, ಹೊಸತನದ ಕ್ಷಣಗಳನು ವರ್ಷಧಾರೆಯಾಗಿಸಲಿ ಎಂಬ ನಿರೀಕ್ಷೆಯೊಂದಿಗೆ…

ಹೊಸ ವರ್ಷಕ್ಕೆ ಸರ್ವರಿಗೂ ಶುಭಾಶಯಗಳು.

(ವೆಬ್‌ದುನಿಯಾದಲ್ಲಿ ಪ್ರಕಟ)

ನಾವೇಕೆ ಮನುಷ್ಯರನ್ನು ಪ್ರೀತಿಸಬೇಕು?
ಹೌದಲ್ವಾ… ಈ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀವಾ? ಮನುಷ್ಯರನ್ನು ಬಿಟ್ಟು ಪ್ರಾಣಿಗಳನ್ನು ಪ್ರೀತ್ಸೋದಾ ಅಂತ ಕೆಲವರು ಕೇಳಬಹುದು. ಅದಿರ್ಲಿ, ಮನುಷ್ಯನ ಸಂಬಂಧಗಳ ಬಗ್ಗೆ ಒಂದಷ್ಟು ಮಾತು. ಪ್ರೇಮದ ಬಲೆಯೋ, ಮಾತೃವಾತ್ಸಲ್ಯವೋ, ಸಹೋದರತೆಯ ಪ್ರೀತಿಯೋ, ಮೈತ್ರಿಯ ಆತ್ಮೀಯತೆಯೋ… ಇವೆಲ್ಲವೂ ಮನುಷ್ಯ-ಮನುಷ್ಯರ ನಡುವಣ ಪ್ರೀತಿಗೆ ಹೇತುವಾಗುತ್ತದೆ ಎಂಬುದು ಹಾಲಿನಷ್ಟೇ ಬೆಳ್ಳಗಿನ ಸತ್ಯ.

ಈ ರೀತಿಯ ಯಾವುದೇ ಒಂದು ಅನುಬಂಧವನ್ನು, ಮಾನವೀಯ ಸಂಬಂಧವನ್ನು ಬೆಸೆಯುವ ಅತ್ಯಂತ ಸೂಕ್ಷ್ಮ ಎಳೆಗಳಲ್ಲಿ ಅತಿಮುಖ್ಯವಾದುದೆಂದರೆ ಮಾತು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಂತ ಹಿರಿಯರು ಹೇಳಿದ್ದು ಬರೇ ಇದೇ ಕಾರಣಕ್ಕೆ. ಒಂದು ಮಾತಿನ ಮೇಲೆಯೇ ನಮ್ಮ ನಡುವಿನ ಸಂಬಂಧ ನಿಂತಿದೆ. ಇದು ಅತ್ಯಂತ ಪವಿತ್ರವೂ, ಕುಸುಮದಷ್ಟು ಕೋಮಲವೂ ಆದ ಬಂಧ.

ಪ್ರೀತಿ ಎಂಬುದು ಬರೇ ಇನ್‌ಕಮಿಂಗ್ ಎಂದಾದರೆ ಬದುಕಿಗೆ ಅರ್ಥವಿಲ್ಲ. ಔಟ್ ಗೋಯಿಂಗ್ ಕೂಡ ಇದ್ದರೆ, ಅಂದರೆ ಪ್ರೀತಿಯು ಕೊಟ್ಟು ತೆಗೆದುಕೊಳ್ಳುವಂತಿದ್ದರೆ ಅದಕ್ಕಿಂತ ಸುಮಧುರ ಸುಂದರ ಜೀವನ ಮತ್ತೊಂದಿಲ್ಲ.

ಮಾತು ಮನೆ ಕೆಡಿಸುತ್ತದೆ ಎಂಬುದು ಎಷ್ಟು ಸತ್ಯವೋ, ಮಾತು ಮನವನ್ನೂ ಕೆಡಿಸಬಲ್ಲುದು. ಈ ಪ್ರೀತಿ ಮತ್ತು ಮಾತು ಎಂಬುದು ಒಂದಕ್ಕೊಂದು ಪೂರಕವಾಗಿದ್ದರೆ ಬದುಕು ಚೆನ್ನ ಚೆನ್ನ. ಈ ಪ್ರೀತಿಯ ಬಂಧಕ್ಕೆ ಆಘಾತವಾಗುವುದು ಯಾವಾಗ? ಮಾತು ತಪ್ಪಿದಾಗ ಅಥವಾ ತಪ್ಪು ಮಾತು ನುಡಿದಾಗ! ಅಂದರೆ ಮಾತಿಗೂ ಮನಸಿಗೂ ನೇರಾನೇರ ಸಂಬಂಧ.

ಹೌದು. ಒಬ್ಬರ ಮೇಲೆ ಪೂರ್ತಿಯಾಗಿ ಪ್ರೀತಿಯ ಧಾರೆ ಎರೆಯುತ್ತೇವೆ. ಒಡಹುಟ್ಟಿದ ತಂಗಿ ಇಲ್ಲ ಅಂತ, ಪಕ್ಕದ ಮನೆಯವರೋ, ಅಥವಾ ಜತೆಯಲ್ಲಿ ಕೆಲಸ ಮಾಡುತ್ತಿರುವವರನ್ನೋ ತಂಗಿಯಾಗಿ ಸ್ವೀಕರಿಸಿ, ಅವರಿಗೆ ಬಂಧುವಾಗಿ, ಅಣ್ಣನಾಗಿ, ಮಮತೆಯನ್ನು ಧಾರೆಯೆರೆಯುತ್ತೇವೆ. ಅಂಥವರಿಗೆ ಪ್ರೀತಿ ತೋರಿಸದಿದ್ದರೂ ಪರವಾಗಿಲ್ಲ, ದ್ವೇಷ ಮಾಡಲು ಯಾವುದಾದರೂ ಕಾರಣಗಳಿರುತ್ತವೆಯೇ? ಖಂಡಿತಾ ಇರುವುದಿಲ್ಲ. ಹಾಗಿರುವುದರಿಂದ ಅವರಿಗೆ ನಮ್ಮ ಸೋದರ ಪ್ರೀತಿಯನ್ನು ಧಾರೆಯೆರೆಯುತ್ತೇವೆ.

ಅಂಥವರು ನಮ್ಮನ್ನೇ ಅನುಸರಿಸಬೇಕು, ನಾವು ಹೇಳಿದ್ದನ್ನೇ ಕೇಳಬೇಕು ಎಂಬ ಭಾವನೆ ಬಂದರೆ ಅದು ಪ್ರೀತಿಯಲ್ಲ, ಸ್ವಾರ್ಥ. ಅಂಥ ಭಾವನೆಯಿಲ್ಲದೆ, ಅವರು ನಮ್ಮವರು, ನಮ್ಮಂತೆಯೇ ಒಳ್ಳೆಯ ಹಾದಿಯಲ್ಲಿ ಮುಂದುವರಿಯಬೇಕು, ಜೀವನದಲ್ಲಿ ಮೇಲೆ ಬರಬೇಕು ಎಂಬ ಭಾವನೆಯೊಂದಿಗೆ ನಿಷ್ಕಳಂಕ ಪ್ರೀತಿಯನ್ನು ನೀಡಿದಾಗ ಅದಕ್ಕೆ ಅರ್ಹರಾದವರು ಇದರ ಹಿಂದಿನ ನಿಸ್ವಾರ್ಥ ಪ್ರೀತಿಯನ್ನು ಗುರುತಿಸಿದರೆ ಜೀವನವೇ ಸ್ವರ್ಗ.

ಆದರೆ ತಪ್ಪು ಹಾದಿ ತುಳಿದಾಗ ತಿದ್ದಿ ತಿಳಿಹೇಳುವುದನ್ನೇ ದಬ್ಬಾಳಿಕೆ, ಶೋಷಣೆ ಅಂತ ಅವರು ತಿಳಿದುಕೊಂಡರೆ? ವಿನಾಕಾರಣ ಕೋಪಿಸಿಕೊಂಡು, ಬೆನ್ನಿಗೆ ಚೂರಿ ಹಾಕಿದರೆ? ನಿನ್ನಿಂದಾಗಿ ನನ್ನ ಜೀವನ ನರಕವಾಯ್ತು ಅಂತ ವೃಥಾರೋಪ ಮಾಡಿದರೆ? ಬೇರೆಯವರ ಮಾತು ಕೇಳಿ ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ ಅಂತ ಕನಸು ಮನಸಿನಲ್ಲೂ ಯೋಚಿಸದ ಆರೋಪ ಮಾಡಿದರೆ? ನಿರ್ವ್ಯಾಜ, ನಿಷ್ಕಳಂಕ, ಫಲಾಪೇಕ್ಷೆಯಿಲ್ಲದ, ನಿಸ್ವಾರ್ಥ ಪ್ರೀತಿಯ ಹೊಳೆ ಹರಿಸಿದವರ ಪಾಡು ಯೋಚಿಸಿ ನೋಡಿ!

ಆದರೂ, ಏನೂ ತಪ್ಪು ಮಾಡದೇ ಇದ್ದಾಗ, ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಕೇಡು ಬಯಸದೇ ಇದ್ದರೂ, ‘ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ’ ಎಂಬ ಆರೋಪ ಬಂದಾಗ, ಮಾತು ಮೌನವಾಗುತ್ತದೆ, ಮನಸ್ಸು ಮುರಿಯುತ್ತದೆ, ಹೃದಯ ಭಾರವಾಗುತ್ತದೆ. ಈ ಸಂಬಂಧಗಳ ಬಗೆಗೇ ಒಂದು ರೀತಿಯ ಆತಂಕವೂ ಒಡಮೂಡುತ್ತದೆ.

ಯಾಕೋ ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಘಟನೆಯೊಂದು ನನ್ನನ್ನು ತೀರಾ ವಿಚಲಿತಗೊಳಿಸಿತ್ತು. ಕೆಲಸವಿಲ್ಲದೆ ಸುಮ್ಮನಿದ್ದಾಗ ಈ ಒಂದು ಯೋಚನಾ ಲಹರಿ.

ಹೌದು. ಜೀವನದ ಪ್ರತಿಯೊಂದು ಘಟನೆಯೂ ನನಗೆ ಕಲಿಸಿದ ಪಾಠ ಅಪಾರ. ಇದೂ ಒಂದು ಕನಸು, ಇದೂ ಒಂದು ಪಾಠ ಅಂತ ತಿಳ್ಕೊಂಡಿದ್ದೇನೆ. ಏನಂತೀರಿ?

ಸರಣಿ ತಿಪ್ಪರಲಾಗ: ಪಾಕಿಸ್ತಾನಕ್ಕೇನಾಗಿದೆ?
ಇವನ್ನು ನೀವು ತಿಪ್ಪರಲಾಗ ಅನ್ನಿ, ಬಡಬಡಿಕೆ ಅನ್ನಿ, ಎಡಬಿಡಂಗಿತನ ಅನ್ನಿ. ಎಲ್ಲದಕ್ಕೂ ಉದಾಹರಣೆಗಳಾಗಿ ನಿಲ್ಲುತ್ತವೆ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ನಂತರ ನೆರೆಯ ಪಾಕಿಸ್ತಾನದಿಂದ ಹೊರಬರುತ್ತಿರುವ ಹೇಳಿಕೆಗಳು.

ಮುಂಬಯಿ ದಾಳಿ ಪಾಕಿನಿಂದ ಕ್ಷಣ ಕ್ಷಣಕ್ಕೂ ಹೊರಬೀಳುತ್ತಿರುವ ಹೇಳಿಕೆಗಳನ್ನು ಗಮನಿಸಿದಲ್ಲಿ ಅಲ್ಲಿ ಏನಾಗುತ್ತಿದೆ? ಆ ದೇಶವನ್ನು ಯಾರು ನಿಯಂತ್ರಿಸುತ್ತಿದ್ದಾರೆ ಎಂಬುದಕ್ಕೆ ನಿಖರ ಉತ್ತರ ದೊರೆಯಬಹುದು. ಅಲ್ಲಿಯ ಸರಕಾರವು ಉಗ್ರವಾದದ ಕೈಗೊಂಬೆಯಾಗಿಬಿಟ್ಟಿದೆಯೇ? ಸರಕಾರವನ್ನು ಪಾಕಿಸ್ತಾನದ ಐಎಸ್ಐ ಮತ್ತು ಸೇನೆ ನಿಯಂತ್ರಿಸುತ್ತಿದೆಯೇ? ರಾಜಕೀಯ, ರಾಜತಾಂತ್ರಿಕತೆಯ ಅರಿವಿಲ್ಲದವರು, ಅನನುಭವಿಗಳು ಉನ್ನತ ಹುದ್ದೆಗಳನ್ನು ‘ಅಲಂಕರಿಸಿ’ದ್ದಾರೆಯೇ? ಅಧ್ಯಕ್ಷ ಜರ್ದಾರಿ ಹಣೆಗೆ ಗುಂಡಿನ ನಳಿಕೆ ತಾಕಿಸಿದಂತೆಯೇ ಕ್ಷಣಕ್ಕೊಂದು ಹೇಳಿಕೆ ಬದಲಿಸುತ್ತಿರುವುದೇಕೆ? ಅಥವಾ ಪಾಕಿಸ್ತಾನದ ಮುಸ್ಲಿಂ ಲೀಗ್ ಹೇಳುತ್ತಿರುವಂತೆ, ಪಾಕಿಸ್ತಾನ ನಿಜಕ್ಕೂ “ವಿಫಲ ರಾಷ್ಟ್ರ”ವೇ?

ಎಷ್ಟೊಂದು ತಿಪ್ಪರಲಾಗಗಳು! ಒಂದು ಇಡೀ ರಾಷ್ಟ್ರವನ್ನೇ ಆಳುವ, ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಚುನಾಯಿತ ಸರಕಾರದ ಪ್ರಧಾನ ಮಂತ್ರಿ ಯೂಸುಫ್ ರಜಾ ಗಿಲಾನಿ, ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಅವರಿಂದ ಈ ರೀತಿ ಬಾಯಿಗೆ ಬಂದ ಹೇಳಿಕೆಗಳು ಹೊರಬರುತ್ತಿರುವುದು ಪಾಕಿಸ್ತಾನದಲ್ಲಿ ಅಧಿಕಾರ ನಿಜಕ್ಕೂ ಯಾರ ಕೈಯಲ್ಲಿದೆ ಎಂಬುದರ ಶಂಕೆಗೆ ಕಾರಣವಾಗುತ್ತಿದೆ.

ಇದಕ್ಕೆ ತೀರಾ ಇತ್ತೀಚಿನ ಸೇರ್ಪಡೆ ಎಂದರೆ ಭಾರತೀಯ ವಾಯುಪಡೆಯಿಂದ ಆಗಿದೆ ಎನ್ನಲಾಗುತ್ತಿರುವ ವಾಯು ಸೀಮೆ ಉಲ್ಲಂಘನೆ ಪ್ರಕರಣ. ಡಿಸೆಂಬರ್ 13ರಂದು ಭಾರತೀಯ ವಾಯುಪಡೆಯ ಜೆಟ್ ವಿಮಾನಗಳು ಪಾಕಿಸ್ತಾನೀ ವಾಯು ಸೀಮೆಯೊಳಗೆ ಅಕ್ರಮವಾಗಿ ಪ್ರವೇಶಿಸಿದವು ಎಂದು ಪಾಕಿಸ್ತಾನದ ಜಿಯೋ ಟಿವಿ ವರದಿ ಮಾಡಿತು. ತಕ್ಷಣವೇ ಪತ್ರಿಕಾಗೋಷ್ಠಿ ಕರೆದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, “ಭಾರತದಿಂದ ಯಾವುದೇ ಅತಿಕ್ರಮಣವಾಗಿಲ್ಲ, ಇದು ಆಕಸ್ಮಿಕ. 50 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿರುವಾಗ, ವಿಮಾನಗಳನ್ನು ತಿರುಗಿಸಬೇಕಾದಾಗ ಈ ರೀತಿಯಾಗುವುದು ಸಹಜ. ಇದೊಂದು ‘ತಾಂತ್ರಿಕ ಸೀಮಾಪ್ರವೇಶ” ಎಂದಷ್ಟೇ ಹೇಳಿ ತಳ್ಳಿ ಹಾಕಿದ್ದರು. ಭಾರತದ ವಾಯುಪಡೆಯೂ ಈ ಕುರಿತು ಸ್ಪಷ್ಟನೆ ನೀಡಿದೆ. ಭಾರತವು ಒಟ್ಟಾರೆಯಾಗಿ ಈ ಪ್ರಕರಣದ ಬಗ್ಗೆ ಕನಿಷ್ಠ ಮೂರು ಬಾರಿ ಸ್ಪಷ್ಟೀಕರಣ ನೀಡಿದೆ. ಇದೀಗ ನಾಲ್ಕು ದಿನಗಳ ಬಳಿಕ ಈ ಹೇಳಿಕೆಗೆ ಪಾಕಿಸ್ತಾನದಿಂದ ಮತ್ತೊಂದು ಹೇಳಿಕೆ ಹೊರಬಿದ್ದಿದ್ದು, ಭಾರತವು ವಾಯು ಸೀಮೆ ಉಲ್ಲಂಘಿಸಿದ್ದು ಹೌದು ಎನ್ನುತ್ತಾ ಪಾಕಿಸ್ತಾನವು ಭಾರತದ ಸಹಾಯಕ ಹೈಕಮಿಶನರ್ ಮನ್‌ಪ್ರೀತ್ ವೋರಾ ಅವರ ಬಳಿ ಅಧಿಕೃತ ಪ್ರತಿಭಟನೆ ಸಲ್ಲಿಸಿದ್ದು, ಭಾರತದಿಂದ ಸ್ಪಷ್ಟನೆ ಕೇಳಿದೆ.

ಮುಂಬಯಿ ದಾಳಿಯಲ್ಲಿ ಪಾಕಿಸ್ತಾನೀಯರ ಕೈವಾಡವಿದೆ, ಬಂಧಿತ ಉಗ್ರಗಾಮಿ ಪಾಕಿಸ್ತಾನದವ ಎಂದು ಪಾಕಿಸ್ತಾನದ ಮಾಧ್ಯಮಗಳು, ಬ್ರಿಟನ್ ಮಾಧ್ಯಮಗಳು, ಅಮೆರಿಕ, ಭಾರತ, ರಷ್ಯಾದ ಬೇಹುಗಾರಿಕಾ ಏಜೆನ್ಸಿಗಳೆಲ್ಲವೂ ತನಿಖೆ ನಡೆಸಿ ಘಂಟಾಘೋಷವಾಗಿ ಸಾರುತ್ತಿದ್ದರೆ, ಪಾಕಿಸ್ತಾನವು “ನಮಗೆ ಸಾಕ್ಷ್ಯಾಧಾರ ಒಪ್ಪಿಸಿ” ಎಂಬ ತಗಾದೆ ತೆಗೆದದ್ದು ಮತ್ತೊಂದು ವಿಪರ್ಯಾಸ. ಬಂಧಿತ ಉಗ್ರಗಾಮಿ ಮೊಹಮದ್ ಅಜ್ಮಲ್ ಕಸಬ್ ಪಾಕಿಸ್ತಾನದ ಫರೀದ್‌ಕೋಟ್ ಪ್ರಾಂತ್ಯದವನು ಎಂದು ಪಾಕಿಸ್ತಾನಿ ಮಾಧ್ಯಮಗಳೇ ಕುಟುಕು ಕಾರ್ಯಾಚರಣೆಯ ಮೂಲಕ, ಆತನ ತಂದೆಯ ಹೇಳಿಕೆ, ಸ್ವಯಂ ಆತನ ತಪ್ಪೊಪ್ಪಿಗೆಯ ಸಹಿತ ವರದಿ ಮಾಡಿದ್ದರೆ, ಜರ್ದಾರಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ‘ಕಸಬ್ ಪಾಕಿಸ್ತಾನೀ ನಾಗರಿಕ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ, ಇದ್ದರೆ ತೋರಿಸಿ’ ಎಂದು ಹೇಳಿಬಿಟ್ಟರು.

ಇದಕ್ಕೆ ಮುನ್ನ ಮತ್ತೊಂದು ತಿಪ್ಪರಲಾಗ ಗಮನಿಸಿ. ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಭಾರತದಿಂದ ಬಿಡುಗಡೆಗೊಂಡ ಉಗ್ರಗಾಮಿ, ಜೈಷೆ ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್‌ನನ್ನು ಬಂಧಿಸಿ ಗೃಹಬಂಧನದಲ್ಲಿರಿಸಲಾಗಿದೆ ಎಂದು ಇಡೀ ಜಗತ್ತಿಗೇ ಡಿಸೆಂಬರ್ 9ರಂದು ಪಾಕಿಸ್ತಾನದ ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ಸಾರಿದ್ದರು. ಡಿಸೆಂಬರ್ 18ರಂದು ಪಾಕ್ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ ಅವರು ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದರು. ಅಜರ್ ಈಗಲೂ ತಲೆಮರೆಸಿಕೊಂಡಿದ್ದಾನೆ ಎಂದರು. ಅದೇ ರೀತಿ, ಭಾರತದಲ್ಲಿರುವ ಪಾಕಿಸ್ತಾನಿ ಹೈಕಮಿಶನರ್ ಶಹೀದ್ ಮಲಿಕ್‌ರಿಂದ ಬಂದ ಹೇಳಿಕೆ ಗಮನಿಸಿ: “ಮಸೂದ್ ಅಜರ್‌ನನ್ನು ನಾವು ಬಂಧಿಸಿಲ್ಲ, ಆತ ಎಲ್ಲಿದ್ದಾನೆಂದು ಗೊತ್ತಿಲ್ಲ, ಅವನಿಗಾಗಿ ಇನ್ನೂ ಹುಡುಕುತ್ತಿದ್ದೇವೆ”! ಎಂಥ ವಿಪರ್ಯಾಸದ ಹೇಳಿಕೆಗಳು!

ನವೆಂಬರ್ 28ರಂದು, ಮುಂಬಯಿಯು ಇನ್ನೂ ಹೊತ್ತಿ ಉರಿಯುತ್ತಿರುವಾಗ, ತನಿಖೆಗೆ ನೆರವಾಗಲು ಐಎಸ್ಐ ಮುಖ್ಯಸ್ಥ ಶುಜಾ ಪಾಶಾ ಅವರನ್ನು ದೆಹಲಿಗೆ ಕಳುಹಿಸುವುದಾಗಿ ಪ್ರಧಾನ ಮಂತ್ರಿ ಯೂಸುಫ್ ರಜಾ ಗಿಲಾನಿ ಹೇಳಿದ್ದರು. ಮರುದಿನ ಹೇಳಿಕೆ ನೀಡಿದ ಜರ್ದಾರಿ, ಐಎಸ್ಐ ಮುಖ್ಯಸ್ಥ ಈಗ ಬರುವುದಿಲ್ಲ ಎಂದುಬಿಟ್ಟರು. ಅದೇ ದಿನ, ಪಾಕಿಸ್ತಾನೀ ಸೇನೆಯು ಯುದ್ಧದ ಸರ್ವ ಸನ್ನದ್ಧ ಸ್ಥಿತಿಯಲ್ಲಿತ್ತು. ಭಾರತದ ವಿದೇಶಾಂಗ ಸಚಿವರೆಂದು ಹೇಳಿಕೊಂಡವರೊಬ್ಬರು ದೂರವಾಣಿ ಕರೆ ಮಾಡಿ ಜರ್ದಾರಿಗೆ ದಾಳಿಯ ಎಚ್ಚರಿಕೆ ನೀಡಿದ್ದರು ಎಂಬುದು ಪಾಕಿಸ್ತಾನ ನೀಡಿದ ಕಾರಣವಾಗಿತ್ತು. ಆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಪಾಕಿಸ್ತಾನಿ ಮಾಹಿತಿ ಸಚಿವೆ ಶೆರಿ ರಹಮಾನ್, ಯಾವುದೇ ಕರೆ ಕೂಡ ಸೂಕ್ತ ತಪಾಸಣೆಯಿಲ್ಲದೆ ನೇರವಾಗಿ ಜರ್ದಾರಿಗೆ ತಲುಪುವುದಿಲ್ಲ ಎಂದರು! ಹಾಗಿದ್ದರೆ ನಕಲಿ ಕರೆ ಬಂದಿತ್ತು ಎಂಬ ವಿಷಯ ಸುಳ್ಳೇ?

ಇನ್ನು ಮುಂಬಯಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತು. ಡಿಸೆಂಬರ್ 9ರಂದು ಹೇಳಿಕೆ ನೀಡಿದ ಜರ್ದಾರಿ, ಪಾಕಿಸ್ತಾನದ “ಸರಕಾರೇತರ ವ್ಯಕ್ತಿಗಳು (ನಾನ್ ಸ್ಟೇಟ್ ಆಕ್ಟರ್ಸ್)” ಇದರಲ್ಲಿ ಒಳಗೊಂಡಿರಬಹುದು, ಅವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು. 9 ದಿನಗಳ ಬಳಿಕ ಆಸಿಫ್ ಅಲಿ ಜರ್ದಾರಿ ಎಂಬ ಪಾಕಿಸ್ತಾನದ ಪರಮೋಚ್ಚ ಸ್ಥಾನದಲ್ಲಿರುವ ನಾಯಕನಿಂದ ಬಂದ ಹೇಳಿಕೆ: “ಜಿಹಾದಿಗಳು ಪಾಕಿಸ್ತಾನದಿಂದಲೇ ಬಂದವರೆಂಬುದಕ್ಕೆ ಸಾಕ್ಷ್ಯಾಧಾರವಿಲ್ಲ. ಬಂಧಿತ ಉಗ್ರಗಾಮಿ ಕಸಬ್ ಪಾಕಿಸ್ತಾನೀಯನೇ ಅಲ್ಲ”!.

ಆ ಮೇಲೆ, ಲಷ್ಕರ್ ಇ ತೋಯ್ಬಾದ ಮತ್ತೊಂದು ಮುಖ ‘ಜಮಾತ್ ಉದ್ ದಾವಾ’ಕ್ಕೆ ವಿಶ್ವಸಂಸ್ಥೆ ನಿಷೇಧ ಹೇರಿದ ಬಳಿಕ ಜಗತ್ತಿನೆದುರು ಉಗ್ರವಾದದ ವಿರುದ್ಧ ಭಾರೀ ಕಾರ್ಯಾಚರಣೆ ಮಾಡಿದಂತೆ ನಟಿಸಿದ ಪಾಕಿಸ್ತಾನವು, ಎರಡೇ ದಿನದಲ್ಲಿ ಬಂಧಿತರೆಲ್ಲರನ್ನೂ ಬಿಡುಗಡೆ ಮಾಡಿತು. ಆದರೆ ಅದರ ಮುಖ್ಯಸ್ಥ, ಮುಂಬಯಿ ದಾಳಿಯ ಹಿಂದಿರುವ ರೂವಾರಿ ಎನ್ನಲಾಗುತ್ತಿರುವ ಹಫೀಜ್ ಸಯೀದ್ ಗೃಹ ಬಂಧನದಲ್ಲಿದ್ದಾನೆ. ಆತ ಬಿಡುಗಡೆಯಾದರೂ ಯಾವುದೇ ರೀತಿ ಆಶ್ಚರ್ಯಪಡಬೇಕಾಗಿಲ್ಲ.

ಈ ಕುರಿತು ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಕಳವಳದಲ್ಲಿಯೂ ಹುರುಳಿಲ್ಲದಿಲ್ಲ. ಇಂಥ ವ್ಯತಿರಿಕ್ತ ಹೇಳಿಕೆಗಳಿಂದ ವಿಶ್ವ ಸಮುದಾಯದೆದುರು ಪಾಕಿಸ್ತಾನದ ಮಾನ ಹರಾಜಾಗುತ್ತಿದೆ, ಪಾಕಿಸ್ತಾನವೊಂದು ‘ವಿಫಲ ರಾಷ್ಟ್ರ’ ಎಂದು ಬಿಂಬಿಸಲ್ಪಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರವರು. ಈಗಿನ ಬಿಕ್ಕಟ್ಟನ್ನು ಪಾಕಿಸ್ತಾನವು ಎದುರಿಸುತ್ತಿರುವ ರೀತಿ ನೋಡಿದರೆ, ಶರೀಫ್ ಆತಂಕದಲ್ಲಿ ಹುರುಳಿದೆ ಅನ್ನಿಸುತ್ತದೆ.

ಬಹುಶಃ ಮುಂಬಯಿ ಮೇಲೆ ದಾಳಿಯಾದ ಬಳಿಕ, ಪಾಕಿಸ್ತಾನ ಭಯೋತ್ಪಾದನೆಯ ಪೋಷಕ ರಾಷ್ಟ್ರ ಎಂಬುದು ಜಗತ್ತಿಗೇ ಸ್ಪಷ್ಟವಾಗತೊಡಗಿರುವಂತೆಯೇ, ಅಧಿಕಾರದಲ್ಲಿರುವವರು ಏನು ಮಾಡಬೇಕೆಂದು ತೋಚಲಾರದೆ ಕೈಕೈ ಹಿಸುಕಿಕೊಳ್ಳುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಉಳಿಸುವ ನಿಟ್ಟಿನಲ್ಲಿ ಒಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ತೆರೆಯ ಹಿಂದಿದ್ದುಕೊಂಡು ಬಂದೂಕಿನ ನಳಿಗೆಯೊಂದಿಗೆ ಅಧಿಕಾರಕೇಂದ್ರವನ್ನು ನಿಯಂತ್ರಿಸುವಂತಿರುವ ಐಎಸ್ಐ, ಪಾಕಿಸ್ತಾನ ಸೇನೆಯು ಒಳಗಿಂದೊಳಗೇ ಧಮಕಿ ಹಾಕತೊಡಗಿದಾಗ, ಅದೇ ಹೇಳಿಕೆಗಳು ವ್ಯತಿರಿಕ್ತ ರೂಪಕ್ಕೆ ಬದಲಾಗಿಬಿಡುತ್ತವೆ. ಹಾಗಂದುಕೊಳ್ಳಬಹುದೇ?

ಮುಷರಫ್ ಕಾಲದಿಂದಲೂ ಪಾಕಿಸ್ತಾನದ ಸೇನೆಯು ಸ್ವಂತ ನೆಲದಲ್ಲೇ ಜನರ ಟೀಕೆಗೆ ಗುರಿಯಾಗುತ್ತಿತ್ತು. ಮುಂಬಯಿ ದಾಳಿಗಳ ಬಳಿಕ ಪಾಕಿಸ್ತಾನೀ ಸೇನೆಯು ಐಎಸ್ಐ ಬಲದಿಂದ ಮತ್ತಷ್ಟು ಉತ್ತೇಜನ ಪಡೆದುಕೊಂಡಿದೆ. ಇಸ್ಲಾಮಾಬಾದ್‌ನ ಪರ್ಯಾಯ ಅಧಿಕಾರ ಕೇಂದ್ರವಾಗಿ ಅದು ತನ್ನನ್ನು ಪರಿಗಣಿಸುತ್ತಿದೆ. ಜರ್ದಾರಿ ನೇತೃತ್ವದ ಸರಕಾರದ ಹಲವಾರು ತಿಪ್ಪರಲಾಗ ಪ್ರಸಂಗಗಳು ಪ್ರಜಾಪ್ರಭುತ್ವವಾಗಿ ಚುನಾಯಿತ ಸರಕಾರಗಳು ಪಾಕಿಸ್ತಾನದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಾರವು ಎಂಬ ಭಾವನೆ ಬಿಂಬಿಸುವ ಪ್ರಯತ್ನವೋ ಎಂಬ ಸಂದೇಹವೂ ಮೂಡುತ್ತಿದೆ.

ನೆನಪಿಡಿ, ಪಾಕಿಸ್ತಾನದ ಅಧ್ಯಕ್ಷ ಸ್ಥಾನಕ್ಕೇರಿರುವ ಆಸಿಫ್ ಅಲಿ ಜರ್ದಾರಿ ಅಲ್ಲಿ “ಮಿಸ್ಟರ್ 10%” ಅಂತಲೇ ಗುರುತಿಸಲ್ಪಟ್ಟಿದ್ದಾರೆ. ಅಂಥವರಿಂದ ನಾವು ಏನನ್ನು ನಿರೀಕ್ಷಿಸಬಹುದು? ಪಾಕಿಸ್ತಾನವನ್ನು ಇನ್ನು ನಂಬುವುದಾದರೂ ಹೇಗೆ? ಅದು ಉಗ್ರಗಾಮಿಗಳನ್ನು ಮಟ್ಟ ಹಾಕುತ್ತದೆ ಅಂತ ನಿರೀಕ್ಷಿಸುವುದಾದರೂ ಹೇಗೆ? ಒಟ್ಟಿನಲ್ಲಿ ಪಾಕಿಸ್ತಾನದೊಳಗಿನ ತಳಮಳಗಳು ಜಾಗತಿಕವಾಗಿ ತಮ್ಮ ಮೇಲೆ ಬಿದ್ದ ದೃಷ್ಟಿಯನ್ನು, ಮುಂಬಯಿ ದಾಳಿಯ ತನಿಖೆಯನ್ನು ದಿಕ್ಕುತಪ್ಪಿಸಿ, ತಾವೂ ದಿಕ್ಕು ತಪ್ಪುವತ್ತ ಹೆಜ್ಜೆ ಇರಿಸಿದಂತಾಗುತ್ತಿದೆ. ಪಾಕಿಸ್ತಾನವನ್ನು ಆ ದೇವರೇ ಕಾಪಾಡಬೇಕು.

[ಇದು ವೆಬ್‌ದುನಿಯಾಕ್ಕಾಗಿ ಬರೆದ ಲೇಖನ.]

ಭಾರತ ಇಸ್ಲಾಮಿಕ್ ಗಣರಾಜ್ಯವಾಗುತ್ತದಂತೆ!!!
ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದಂತೆ ನಮ್ಮಲ್ಲಿ ಎರಡು ಮಾದರಿಯ ಇಸ್ಲಾಂ ಇದೆ. ಒಂದು ಅಲ್ಲಾ ಇಸ್ಲಾಂ ಮತ್ತು ಇನ್ನೊಂದು ಮುಲ್ಲಾ ಇಸ್ಲಾಂ. ಭಾರತದಲ್ಲಿರುವ ಅಲ್ಪಸಂಖ್ಯಾತ ಸಾಮಾನ್ಯ ಪ್ರಜೆಗಳು ಮತ್ತು ಪಾಕಿಸ್ತಾನದಲ್ಲಿ ಇರುವ ಬಹುಸಂಖ್ಯಾತ ಪ್ರಜೆಗಳು ಅಲ್ಲಾ ಇಸ್ಲಾಂ ಪಾಲನೆ ಮಾಡುತ್ತಿದ್ದಾರೆ. ಆದರೆ ಇನ್ನೊಂದು ಸಮುದಾಯವು ಶಾಂತಿ-ಸಹಬಾಳ್ವೆ-ತ್ಯಾಗ ಸಂದೇಶ ಸಾರುವ ಖುರಾನ್ ಅನ್ನು ತಪ್ಪಾಗಿ ಅರ್ಥೈಸಿಕೊಂಡೋ ಅಥವಾ ತಪ್ಪು ಬೋಧನೆಗೊಳಗಾಗಿಯೋ ಹಾದಿ ತಪ್ಪಿ ಹಿಂಸಾ ಮಾರ್ಗ ತುಳಿಯುತ್ತಿದೆ.

ಹೀಗೇ ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾಗ ಈ ಒಂದು ಕೊಂಡಿ ಸಿಕ್ಕಿಬಿಟ್ಟಿತು. ಇದರ ಬಲ ಭಾಗದಲ್ಲಿ, ಕೆಳಗೆ ಜಾಹೀರಾತಿನ ಮೇಲೆ ಇರುವ ಭಾಗ ನೋಡಿ. ನನಗೆ ಉರ್ದು ಓದಲು ಬರುವುದಿಲ್ಲ. ಆದರೆ ಅಲ್ಲಿರುವ ಇಂಗ್ಲಿಷ್ ಅಕ್ಷರಗಳನ್ನು ಜೋಡಿಸುತ್ತಾ ಹೋದರೆ ಒಂದು ಅಂಶ ಅರಿವಾಗುತ್ತದೆ. ಭಾರತದ ಇಸ್ಲಾಮೀಕರಣಕ್ಕೆ ಈ ಉಗ್ರ ಹಾದಿ ತುಳಿದಿರುವ ಸಮುದಾಯವು ಷಡ್ಯಂತ್ರ ರೂಪಿಸಿದೆ. ಎಂಬುದು ದಿಟ.

ಎಕ್ಸ್‌ಪ್ರೆಸ್ ನ್ಯೂಸ್ ಎಂಬ ಉರ್ದು ಪತ್ರಿಕೆಯಲ್ಲಿ ಪ್ರಕಟವಾಗಿರುವ ನಕಾಶೆಯನ್ನು ನೋಡಿದರೆ, 2012ಕ್ಕೆ ಭಾರತದ ಬಹುಭಾಗ ಮತ್ತು 2010ಕ್ಕೆ ಮತ್ತಷ್ಟು ಭಾಗ ಪಾಕಿಸ್ತಾನದ ಇಸ್ಲಾಮಿಕ್ ಗಣರಾಜ್ಯದ ವ್ಯಾಪ್ತಿಗೆ ಬರುವಂತೆ ಮಾಡುವುದು ಈ ಉಗ್ರಗಾಮಿಗಳ ಗುರಿಯಾಗಿರಬಹುದು. ದಯವಿಟ್ಟು ಯಾರಾದರೂ ಉರ್ದು ಬಲ್ಲವರಿದ್ದರೆ ಇದರ ಮಾಹಿತಿಯನ್ನು ಅಂತರ್ಜಾಲಿಗರಿಗೆ ನೀಡಿದರೆ ಒಳಿತು.

ಈ ನಕಾಶೆಗಳನ್ನೇ ನೋಡಿ, ಕರ್ನಾಟಕದ ಒಂದಂಶ, ತಮಿಳುನಾಡು, ಆಂಧ್ರಗಳ ಭಾಗವು ಇಸ್ಲಾಮೀಕರಣದ ವ್ಯಾಪ್ತಿಗೆ ಬರಲಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಬಹುಭಾಗವು “ವಿವಾದಿತ ಪ್ರದೇಶ” ಎಂದು ಗುರುತಿಸಲಾಗಿದೆ. ಬಾಂಗ್ಲಾ ದೇಶಕ್ಕೆ, ನೇಪಾಳಕ್ಕೆ ಅದರದ್ದೇ ಆದ ಭೂಭಾಗ ಬಿಟ್ಟು ಕೊಡಲಾಗಿದೆ. ಬಹುಶಃ ಮುಂಬಯಿಯಲ್ಲಿ ಮುಸ್ಲಿಮಾಬಾದ್ ಎಂದು ನಾಮಕರಣ ಮಾಡಿದ್ದಾರೆ.

2012ರಲ್ಲಿ ಭಾರತವನ್ನು ಇಷ್ಟು ನುಂಗುತ್ತಾರಂತೆ!

2020ರಲ್ಲಿ ಭಾರತವು ಇಸ್ಲಾಮಿಕ್ ಗಣರಾಜ್ಯವಾಗಿ ಹೀಗಿರಬೇಕಂತೆ!

ಇದಕ್ಕಿಂತ ದೊಡ್ಡ ತಮಾಷೆಯ ಸಂಗತಿ ಅವರಿಗೆ ಬೇರೆ ಯಾವುದು ಕೂಡ ಸಿಗಲಿಲ್ವಾ…?  )

ಆದ್ರೆ ನಮ್ಮ ರಾಜಕಾರಣಿಗಳು ಮತ ಬ್ಯಾಂಕ್‌ಗಾಗಿ ಹೋರಾಟ ಮಾಡುತ್ತಲೇ ಇದ್ದರೆ, ಹೀಗಾಗುವುದನ್ನು ತಡೆಯುವುದಾದರೂ ಯಾರು?