ಹೀಗೇ ಅಂತರ್ಜಾಲದಲ್ಲಿ ಹುಡುಕಾಟ/ಪರದಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದ ಸಂಗತಿಯಿದು. ಅಮಿತಾಭ್, ಅಮೀರ್ ಖಾನ್ ಮುಂತಾದವರೆಲ್ಲ ಬ್ಲಾಗಿಂಗ್ ಮಾಡಿದ್ದಾರೆ ಎಂಬುದೆಲ್ಲಾ ಒತ್ತಟ್ಟಿಗಿಟ್ಟು…
ಹೆಚ್ಚಾಗಿ ಬದುಕಿನ ಮುಸ್ಸಂಜೆಯಲ್ಲಿರುವವರು ಒಂದೋ ತಮ್ಮ ಸಾಧನೆಗಳನ್ನು ಮೆಲುಕು ಹಾಕುತ್ತಲೋ, ಮಕ್ಕಳು-ಮರಿಗಳೊಂದಿಗೆ ಆಟವಾಡುತ್ತಲೋ… ಇಲ್ಲವೇ ಮನೆಯಲ್ಲಿ ಸಾಕಷ್ಟು ಆರ್ಥಿಕತೆಯಿಲ್ಲದವರು ದೇವರ ಜಪ ಮಾಡುತ್ತಾ ‘ಆ ದಿನಗಳನ್ನು’ ಎದುರು ನೋಡುತ್ತಲೋ… ಬದುಕಿನ ಎಲ್ಲ ವಿಷಯಗಳತ್ತಲೂ ಆಕರ್ಷಣೆ ಕಳೆದುಕೊಂಡು, ಆಧ್ಯಾತ್ಮಮುಖಿಗಳಾಗಿಯೋ, ನಿರಾಶೆಯಲ್ಲೋ ಕಾಲ ಕಳೆಯುತ್ತಾರೆ.
ಆದರೆ 96 ವರ್ಷದ ಹಣ್ಣು ಹಣ್ಣು ಮುದುಕರೊಬ್ಬರ ಜೀವನ ಪ್ರೀತಿ ನನ್ನನ್ನು ಆಕರ್ಷಿಸಿದ್ದು. ಇವರ ಹೆಸರು ರಾಂಡಾಲ್ ಬೂತಿ ಸಿಂಗ್ ಅಂತ. ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆ ಇವರದು. ಇವರ ಆಸಕ್ತಿಯ ಕ್ಷೇತ್ರಗಳೋ…. ಹತ್ತು ಹಲವು! ಜೀವನಪ್ರೀತಿ, ಜೀವನೋತ್ಸಾಹವೆಂದರೆ ಇದೆಯೇ?
ಕಳೆದ ಒಂಬತ್ತು ದಶಕಗಳಲ್ಲಿ ಅವರು ಜೀವನದ ಅದೆಷ್ಟೋ ವಿಕಲ್ಪಗಳನ್ನು ಕಂಡಿದ್ದಾರೆ, ಹೊಸತನದ ಬದಲಾವಣೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಅವರ ಬ್ಲಾಗಿನಲ್ಲಿ ಸಂಚರಿಸಿದರೆ ಅವರೇನು ಹೇಳ್ತಾರೆ ಅಂತ ಗೊತ್ತಾಗುತ್ತದೆ. ‘ನಾನೊಬ್ಬ ಕಲಿಕಾರ್ಥಿ. ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ, ಅಲ್ಲಿಗೆ ಜೀವನವೇ ನಿಲ್ಲುತ್ತದೆ. ಮತ್ತು ಕಲಿಯುವುದಕ್ಕೆ ಸಮಯದ ಮಿತಿ ಇಲ್ಲ’!
ಅವರ ಕಲಿಯುವಿಕೆಯ ತುಡಿತದ ಮೇಲೊಂದು ಇಣುಕು ನೋಟ:
* 80ರ ವಯಸ್ಸಿನಲ್ಲಿ ಅವರು ಅರೆಬಿಕ್ ಕಲಿತು ಖುರಾನ್ ಓದಲಾರಂಭಿಸಿದರು.
* 95 ವಯಸ್ಸಿನಲ್ಲಿ ಸ್ಪಾನಿಷ್ ಕಲಿಯಲಾರಂಭಿಸಿದರು.
* ಸದ್ಯಕ್ಕೆ ಅವರು ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಅಧ್ಯಯನ ನಿರತರಾಗಿದ್ದಾರೆ!
ಅವರ ಬ್ಲಾಗು ನೋಡಿದರೆ, ಅರ್ಥಶಾಸ್ತ್ರ, ರಾಜಕೀಯ, ಪರಿಸರ, ಚರಿತ್ರೆ, ತತ್ವಶಾಸ್ತ್ರ, ಕವನ, ಮನಃಶಾಸ್ತ್ರ, ಧರ್ಮ… ಹೀಗೆ ವಿಭಿನ್ನ ಆಯಾಮಗಳ ಮೇಲೆ ಅವರ ಬರವಣಿಗೆ ಸಾಗುತ್ತದೆ. ಇಲ್ಲಿ ಕವನಗಳಿವೆ, ಸುಭಾಷಿತಗಳಿವೆ… ಸುದೀರ್ಘ ಕಾಲದ ಅನುಭವಜನ್ಯ ಹಿತನುಡಿಗಳಿವೆ….
ಹುಟ್ಟಿದ್ದು ಗಯಾನದ ಬಕ್ಸ್‌ಟನ್‌ನಲ್ಲಿ. ಭಾರತದಿಂದ ವಲಸೆ ಹೋದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲವಂತೆ. ಮಹಾತ್ಮಗಾಂಧಿಯ ಪರಮ ಅನುಯಾಯಿ. ಮಹಾತ್ಮ ಗಾಂಧಿ ಮೃತಪಟ್ಟಾಗ ಕಣ್ಣೀರಿಟ್ಟಿದ್ದರಂತೆ.
ಹೆಲೆನ್ ಕೆಲ್ಲರ್ ಜೀವನದಿಂದ ಪ್ರಭಾವಿತರಾಗಿ ಮೂರು ಕವನ ಸಂಕಲನ ಹೊರತಂದಿದ್ದಾರೆ. 96ರಲ್ಲೂ ಬತ್ತದ ಜೀವನೋತ್ಸಾಹ. ಹಿಂದಿ, ಉರ್ದು ಚೆನ್ನಾಗಿ ಗೊತ್ತಿದೆ. ಅದ್ಭುತ ಎನಿಸಬಹುದಾದ ಭಾಷಾ ಪ್ರೇಮಿ ಅವರು.
ಹೆಚ್ಚು ಹೇಳಿದರೆ ಅವರ ಬಗೆಗೆ ನಿಮ್ಮ ಅನಿಸಿಕೆಗಳು ಡೈವರ್ಟ್ ಆಗಲೂ ಬಹುದು. ಹೀಗಾಗಿ ನೀವೇ ನೋಡಿಬಿಡಿ. ಬ್ಲಾಗಿನ URL ಇಲ್ಲಿದೆ: http://randallbutisingh.wordpress.com/
Posted by randallbutisingh on July 7, 2009 at 10:31 PM
Avinash, Thanks for visiting my weblog I cannot read whay you have written unless it is translated, but I guess it is a favourable response to my messages. I will visit your weblog again, please let me know what your country is and what is your language.
Thanhs again. .
Posted by Avinash on July 8, 2009 at 9:46 AM
Dear Butisingh,
I felt Great! Thanks for visting my blog. This is a Kannada Language of Karnataka State (India) blog. Ours is one of the great languages of the world, it is unique and beautiful language of Karnataka state. The people of Karnataka also called as “Kannadiga”s.
I have introduced you and your great enthusiasm about blogging to our Kannada blogworld as you have been considered as oldest blogger in the world. Nice to hear from you. Keep blogging. Best of luck.
Posted by ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ನಿಂದ ಕನ್ನಡಕ್ಕೆ ಕಾಮೆಂಟ್! « ಬದಲಾವಣೆಯೇ ಜಗದ ನಿಯಮ on July 8, 2009 at 9:57 AM
[...] Posted by Avinash in myworld. Leave a Comment ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆಯುಳ್ಳ ಬೂಟಿ ಸಿಂಗ್ ಬಗ್ಗೆ ಕಳೆದ ವರ್ಷದ ಜೂನ್ 28ರಂದು ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಓದಿರಲಿಕ್ಕಿಲ್ಲ. ಆ ಲೇಖನದ ಲಿಂಕ್ ಇಲ್ಲಿದೆ. [...]
Posted by anamika on July 10, 2009 at 9:14 AM
ನಮಸ್ಕಾರ ಅವಿನಾಶ್‍ರವರೆ . ‘ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ, ಅಲ್ಲಿಗೆ ಜೀವನವೇ ನಿಲ್ಲುತ್ತದೆ” ಅರ್ಥಪೂರ್ಣವಾದ ಮಾತುಗಳು. ಹಿರಿಯ ಬ್ಲಾಗರನ್ನು ಪರಿಚಯಿಸಿದಕ್ಕೆ ಧನ್ಯವಾದಗಳು
Posted by Avinash on July 16, 2009 at 6:51 PM
ನಮಸ್ಕಾರ ಅನಾಮಿಕರೆ, ತಮ್ಮ ಹೆಸರು ಮತ್ತು ಬ್ಲಾಗು ತಿಳಿದುಕೊಳ್ಳಬಹುದೇ?